ಬೆಂಗಳೂರು:ಮೇ-5: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಡೆಸುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ಇತ್ತೀಚೆಗೆ ನಡೆದ ಸಾಮಾನ್ಯ ಪ್ರವೇಶ ಪರೀಕ್ಷೆಗೂ (ಸಿಇಟಿ) ಇನ್ಮುಂದೆ ಆನ್ಲೈನ್ನಲ್ಲೇ ಆಕ್ಷೇಪಣೆ ಸಲ್ಲಿಸಲು ಅವಕಾಶ ದೊರೆತಿದೆ. ಇದರಿಂದಾಗಿ ವಿದ್ಯಾರ್ಥಿಗಳು ನೇರವಾಗಿ ಮೊಬೈಲ್ ಮೂಲಕವೇ ಆಕ್ಷೇಪಣೆ ಸಲ್ಲಿಸಿ ಅದಕ್ಕೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ಸ್ಕಾ್ಯನ್ ಮಾಡಿ ಅಪ್ಲೋಡ್ ಮಾಡುವ ಅವಕಾಶ ಸಿಕ್ಕಿದಂತಾಗಿದೆ.
ಇಷ್ಟು ವರ್ಷ ವಿದ್ಯಾರ್ಥಿಗಳು ಕೆಇಎ ವಿಳಾಸಕ್ಕೆ ಅಂಚೆ ಮೂಲಕ ಅಗತ್ಯ ದಾಖಲಾತಿ ಪ್ರತಿ ಸೇರಿಸಿ ಕಳುಹಿಸಬೇಕಾಗಿತ್ತು. ಇದರಿಂದ ಬಹುತೇಕ ವಿದ್ಯಾರ್ಥಿಗಳು ಆಕ್ಷೇಪಣೆ ಸಲ್ಲಿಸಲು ಹಿಂದೇಟು ಹಾಕುತ್ತಿದ್ದರು. ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ನೀಡುವ ಉದ್ದೇಶದಿಂದ ಕೆಇಎ ಈ ವರ್ಷದಿಂದ ಆನ್ಲೈನ್ನಲ್ಲಿ ಅವಕಾಶ ಕಲ್ಪಿಸುತ್ತಿದೆ.
ಹೊಸ ಪೋರ್ಟಲ್: ಕೆಇಎ ತನ್ನ ಹೋಮ್ ಪೇಜ್ನಲ್ಲಿ ಸಿಇಟಿಗೆ ಆಕ್ಷೇಪಣೆ ಸಲ್ಲಿಸಲು ಹೊಸ ಪೋರ್ಟಲ್ ತೆರೆಯಲಿದೆ. ವಿದ್ಯಾರ್ಥಿಗಳು ಆ ಪೋರ್ಟಲ್ ಮೇಲೆ ಕ್ಲಿಕ್ ಮಾಡಿ ಸಂಪೂರ್ಣ ವಿವರಗಳನ್ನು ಭರ್ತಿ ಮಾಡಬೇಕಿದೆ. ಆನಂತರ ಯಾವ ಪ್ರಶ್ನೆಗಳಿಗೆ ಆಕ್ಷೇಪಣೆ ಸಲ್ಲಿಸಬೇಕೋ, ಅದನ್ನು ಕ್ಲಿಕ್ ಮಾಡಿ ಶ್ರೇಣಿಯನ್ನು ಆಯ್ಕೆ ಮಾಡಿ ಸರಿಯಾದ ಉತ್ತರ ಸೂಚಿಸಿ ಅದಕ್ಕೆ ಅಗತ್ಯ ದಾಖಲೆಗಳನ್ನು ಸ್ಕಾ್ಯನ್ ಮಾಡಿ ಅಪ್ಲೋಡ್ ಮಾಡಬೇಕಿದೆ.
ನೂರಾರು ಅರ್ಜಿ: ಕೆಇಎ ನಡೆಸುವ ಸಿಇಟಿಗೆ ಪ್ರಶ್ನೆಪತ್ರಿಕೆಗೆ ಪ್ರತಿ ವರ್ಷ ಸುಮಾರು 150-200 ಆಕ್ಷೇಪಣೆಗಳು ಬರುತ್ತವೆ. ಆದರೆ, ಕೆಇಎ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗೆ ಸಾವಿರಾರು ಆಕ್ಷೇಪಣೆಗಳು ಬರುತ್ತವೆ. ಒಟ್ಟಾರೆ ವಿದ್ಯಾರ್ಥಿಗಳು ಮತ್ತು ಅಭ್ಯರ್ಥಿಗಳಿಂದ ಬರುವ ಆಕ್ಷೇಪಣೆಗಳನ್ನು ಒಟ್ಟುಗೂಡಿಸಿ ಪ್ರಶ್ನೆಪತ್ರಿಕೆ ರೂಪಿಸಿದ ವಿಷಯ ತಜ್ಞರ ಸಮಿತಿಗೆ ಕಳುಹಿಸುತ್ತದೆ. ಈ ಸಮಿತಿ ಎಲ್ಲ ಆಕ್ಷೇಪಣೆಗಳನ್ನು ಪರಿಶೀಲಿಸಿ ಆನಂತರ ಸರಿ ಉತ್ತರಗಳನ್ನು ಪ್ರಕಟಿಸಲಿದೆ. ಕೆಲವೊಮ್ಮೆ ಕೃಪಾಂಕ ನೀಡಲಿದೆ.
ಆಕ್ಷೇಪಣೆಗೆ ಅವಕಾಶ
ಈ ವರ್ಷ 1.93 ಲಕ್ಷ ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆ ಬರೆದಿದ್ದರು. ಮೂರು ದಿನ ನಡೆದ ಪರೀಕ್ಷೆಗೆ ಆಕ್ಷೇಪಣೆ ಸಲ್ಲಿಸಲು ಮೇ 8ರವರೆಗೆ ಅವಕಾಶವಿದೆ. ಇದರ ಹೊರತಾಗಿ ಯಾವುದೆ ಇನ್ನಿತರ ಮೂಲಗಳಿಂದ ಸಲ್ಲಿಸುವುದನ್ನು ಸ್ವೀಕರಿಸುವುದಿಲ್ಲವೆಂದು ಕೆಇಎ ಸ್ಪಷ್ಟವಾಗಿ ತಿಳಿಸಿದೆ.
ಅರ್ಜಿ ತಿದ್ದುಪಡಿ ಅವಕಾಶ
ಕೆಇಎ ಸಿಇಟಿ ಅರ್ಜಿ ಸಲ್ಲಿಕೆಯ ತಿದ್ದುಪಡಿಗೆ ಅವಕಾಶ ಕಲ್ಪಿಸಿದ್ದು, ವಿದ್ಯಾರ್ಥಿಗಳು ಸಿಇಟಿ ಅರ್ಜಿ ಸಲ್ಲಿಸುವ ವೇಳೆ ತಪ್ಪು ಮಾಡಿದ್ದರೆ ತಮಗೆ ನೀಡಿರುವ ಯೂಸರ್ ಮತ್ತು ಪಾಸ್ವರ್ಡ್ ಬಳಕೆ ಮಾಡಿಕೊಂಡು ಸಣ್ಣ-ಪುಟ್ಟ ಬದಲಾವಣೆ ಮಾಡಿಕೊಳ್ಳಬಹುದಾಗಿದೆ. ಆದರೆ, ಅದಕ್ಕೆ ಇಂದೇ (ಮೇ 5) ಕೊನೆಯ ದಿನ.
ಆನ್ಲೈನಲ್ಲೇ ಸಿಇಟಿ ಆಕ್ಷೇಪಣೆ
ಶಿಕ್ಷಕರಿಗೆ ಹೆಚ್ಚಿನ ವೇತನ ನೀಡಲು ಕೆಲವು ಹೈ-ಫೈ ಖಾಸಗಿ ಶಾಲೆಗಳು ಶುಲ್ಕ ಹೆಚ್ಚಳಕ್ಕೆ ಮುಂದಾದರೆ ಮತ್ತೆ ಕೆಲವು ಬಜೆಟ್ ಶಾಲೆಗಳು ಆತಂಕಕ್ಕೀಡಾಗಿವೆ. ಎಲ್ಲ ಶಾಲೆಗಳ ಮುಂದೆ ಶುಲ್ಕದ ವಿವರ, ವಿದ್ಯಾರ್ಥಿಗಳ ಸಂಖ್ಯೆ, ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ಅವರಿಗೆ ನೀಡುವ ವೇತನ ಇನ್ನಿತರ ಮಾಹಿತಿಗಳ ನ್ನೊಳಗೊಂಡ ಸೂಚನಾ ಫಲಕ ಅಳವಡಿಕೆ ಕಡ್ಡಾಯ. ಆದರೆ, ಇದನ್ನು ಶಾಲೆಗಳು ಪಾಲಿಸುತ್ತಿಲ್ಲವೆಂದು ಪ್ರಶ್ನಿಸಿ ವಕೀಲ ಎನ್.ಪಿ. ಅಮೃತೇಶ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಹಂತದಲ್ಲಿದ್ದು, ಖಾಸಗಿ ಶಾಲೆಗಳಿಗೆ ಕೋರ್ಟ್ ಹಲವಾರು ಬಾರಿ ಸೂಚನೆ ನೀಡಿದೆ. ಹೀಗಾಗಿ ರಾಜ್ಯದಲ್ಲಿರುವ ಪ್ರತಿಷ್ಠಿತ ಖಾಸಗಿ ಮತ್ತು ಬಜೆಟ್ ಶಾಲೆಗಳು ಶಿಕ್ಷಕರಿಗೆ ಹೆಚ್ಚಿನ ಸಂಬಳ ನೀಡಲು ಶೇ.30 ಸಾರಿಗೆ ಶುಲ್ಕ ಹೆಚ್ಚಿಸುವ ಮೂಲಕ ಒಟ್ಟಾರೆ ಹೆಚ್ಚಿನ ಶುಲ್ಕ ವಸೂಲಿಗೆ ಮುಂದಾಗಿವೆ. ಬೋಧನಾ ಶುಲ್ಕ ಶೇ.15ಕ್ಕಿಂತ ಹೆಚ್ಚು ಹೆಚ್ಚಿಸಲು ಸಾಧ್ಯವಿಲ್ಲದ್ದರಿಂದ ಸಾರಿಗೆ ಶುಲ್ಕ ಶೇ.30ರವರೆಗೆ ಹೆಚ್ಚಿಸಲು ಪ್ರತಿಷ್ಠಿತ ಖಾಸಗಿ ಶಾಲೆಗಳು ಚಿಂತಿಸಿವೆ. ಇದು 2019-20ನೇ ಶೈಕ್ಷಣಿಕ ಸಾಲಿನಿಂದಲೇ ಜಾರಿಗೆ ಬರಲಿದೆ.
ಕೃಪೆ:ವಿಜಯವಾಣಿ