ಬೆಳಗಾವಿ,ಡಿಸೆಂಬರ್,15,2021(www.justkannada.in): ರಾಜ್ಯದ ವಿಧಾನ ಪರಿಷತ್ 25 ಸ್ಥಾನಗಳಿಗೆ ನಡೆದ ಚುನಾವಣೆಯ ಫಲಿತಾಂಶ ನಿನ್ನೆ ಪ್ರಕಟವಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಬೆಳಗಾವಿ, ಮೈಸೂರು, ತುಮಕೂರಿನಲ್ಲಿ ಗೆಲ್ಲಬೇಕಿತ್ತು ಆದರೆ ಹಿನ್ನಡೆಯಾಗಿದೆ ಎಂದಿದ್ದಾರೆ.
ಈ ಕುರಿತು ಬೆಳಗಾವಿಯಲ್ಲಿ ಮಾತನಾಡಿದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಪರಿಷತ್ ನಲ್ಲಿ 1 ಸ್ಥಾನ ಕಡಿಮೆಯಾಗುತ್ತದೆ ಆದರೆ ಕಾರ್ಯಕಲಾಪ ನಡೆಸಲು ಅಡ್ಡಿ ಇಲ್ಲ. ಜೆಡಿಎಸ್ ನವರು ಸಹಕಾರ ನೀಡಲಿದ್ದಾರೆ. ಸೋಲಿನ ಪರಾಮರ್ಶೆ ಮಾಢುವುದಾಗಿ ಸಿಎಂ ಹೇಳಿದ್ದಾರೆ. ಪರಾಮರ್ಶೆ ಮಾಡಿ ವಾಸ್ತವ ತಿಳಿಯಲು ಪ್ರಯತ್ನ ಪಡುತ್ತೇವೆ ಎಂದರು.
ಪರಿಷತ್ ನ 25 ಸ್ಥಾನಗಳ ಚುನಾವಣೆಯಲ್ಲಿ ಬಿಜೆಪಿ 11 ಕಾಂಗ್ರೆಸ್ 11 ಜೆಡಿಎಸ್ 2 ಇತರೇ 1 ಸ್ಥಾನದಲ್ಲಿ ಗೆಲುವು ಸಾಧಿಸಿದ್ದಾರೆ.
Key words: win -these -three –seat- Former CM -BS Yeddyurappa.