ಪುದಚೇರಿ,ಡಿಸೆಂಬರ್,5,2021(www.justkannada.in): ದೇಶದಲ್ಲಿ ಕೊರೊನಾ ವೈರಸ್ನ ರೂಪಾಂತರ ತಳಿ ಓಮೈಕ್ರಾನ್ ಹರಡುವಿಕೆ ಭೀತಿ ಹೆಚ್ಚಾಗಿದ್ದು ಈಗಾಗಲೇ ಹಲವು ರಾಜ್ಯಗಳಲ್ಲಿ ಈ ಸೋಂಕು ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಪುದುಚೇರಿ ಕೇಂದ್ರಾಡಳಿತ ಪ್ರದೇಶದಲ್ಲಿ ಕೋವಿಡ್ ಲಸಿಕೆ ಕಡ್ಡಾಯಗೊಳಿಸಲಾಗಿದೆ.
ಈ ಕುರಿತು ಆದೇಶ ಹೊರಡಿಸಿರುವ ಪುದುಚೇರಿ ಆರೋಗ್ಯ ಇಲಾಖೆ, ಪುದುಚೇರಿ ಸಾರ್ವಜನಿಕ ಆರೋಗ್ಯ ಕಾಯ್ದೆ 1973’ರ ಅಡಿಯಲ್ಲಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಕೋವಿಡ್ ಲಸಿಕೆ ಪಡೆಯುವುದನ್ನು ಕಡ್ಡಾಯಗೊಳಿಸಿದ್ದು, ತಪ್ಪಿದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದೆ.
ದೇಶದಾದ್ಯಂತ ಈವರೆಗೆ 5 ಓಮೈಕ್ರಾನ್ ಪ್ರಕರಣಗಳು ದೃಢಪಟ್ಟಿವೆ. ಈ ಪೈಕಿ 2 ಬೆಂಗಳೂರಿನಲ್ಲಿ, 1 ಮುಂಬೈಯಲ್ಲಿ ಹಾಗೂ ಮತ್ತೊಂದು ಗುಜರಾತ್ನಲ್ಲಿ ದೃಢಪಟ್ಟಿವೆ. 5ನೇ ಪ್ರಕರಣ ನವದೆಹಲಿಯಲ್ಲಿ ಪತ್ತೆಯಾಗಿದೆ. ದೆಹಲಿಯಲ್ಲಿ ಮೊದಲನೇ ಒಮಿಕ್ರಾನ್ ಪ್ರಕರಣ ಕಾಣಿಸಿಕೊಂಡಿದೆ.
Key words: Omicron-panic-Covid Vaccine- Mandatory – Puducherry.