ಚೆನ್ನೈ,ನವೆಂಬರ್,24,2021(www.justkannada.in): ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ನಿವಾಸ ಸ್ಮಾರಕ ಮಾಡುವ ನಿರ್ಧಾರಕ್ಕೆ ಮದ್ರಾಸ್ ಹೈಕೋರ್ಟ್ ತಡೆ ನೀಡಿದೆ.
ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ.ಜೆ ಜಯಲಲಿತಾ ಅವರ ಪೋಯಸ್ ಗಾರ್ಡನ್ ನಿವಾಸವನ್ನು ರಾಜ್ಯ ಸರ್ಕಾರ ಸ್ವಾಧೀನಪಡಿಸಿಕೊಳ್ಳುವುದನ್ನು ಮದ್ರಾಸ್ ಹೈಕೋರ್ಟ್ ರದ್ದುಗೊಳಿಸಿದೆ. ಎಐಎಡಿಎಂಕೆ (AIADMK) ಸರ್ಕಾರ ಈ ಮನೆಯನ್ನು ಸ್ಮಾರಕವನ್ನಾಗಿ ಪರಿವರ್ತಿಸಿತ್ತು.
2016 ರಲ್ಲಿ ಜಯಲಲಿತಾ ಅವರ ನಿಧನದ ನಂತರ ತಮಿಳುನಾಡು ಸರ್ಕಾರವು 2017 ರಲ್ಲಿ ಪೋಯಸ್ ಗಾರ್ಡನ್ ಬಂಗಲೆಯನ್ನು ಜಯಲಲಿತಾ ಅವರ ಸ್ಮಾರಕವಾಗಿ ಪರಿವರ್ತಿಸುವುದಾಗಿ ಘೋಷಿಸಿತ್ತು. ಆದರೆ ಅಂದಿನ ಎಐಎಡಿಎಂಕೆ ಸರ್ಕಾರದ ಆದೇಶವನ್ನ ತಳ್ಳಿಹಾಕಿದ ಮದ್ರಾಸ್ ಹೈಕೋರ್ಟ್ ಇದೀಗ ಜಯಲಲಿತಾ ನಿವಾಸ ಸ್ಮಾರಕ ಮಾಡುವ ನಿರ್ಧಾರಕ್ಕೆ ತಡೆ ನೀಡಿದೆ. ನಿವಾಸವನ್ನ ಜಯಲಲಿತಾ ಅವರ ಸಂಬಂಧಿಕರಿಗೆ ಹಸ್ತಾಂತರಿಸಲು ಸೂಚನೆ ನೀಡಿದೆ ಎನ್ನಲಾಗಿದೆ.
Key words: Madras High Court –stay- decision – Jayalalithaa- residence – memorial.