ಬೆಂಗಳೂರು,ಸೆಪ್ಟಂಬರ್,19,2023(www.justkannada.in): ರಾಜ್ಯದಲ್ಲಿ ವ್ಯಾಪಕ ಮಳೆಯಾಗದೇ ಬರಗಾಲ ಆವರಿಸಿದ್ದು ಕುಡಿಯುವ ನೀರಿಗೂ ಹಾಹಾಕಾರ ಸೃಷ್ಠಿಯಾಗುವ ಪರಿಸ್ಥಿತಿ ಎದುರಾಗಿದೆ. ಈ ಮಧ್ಯೆಯೂ ತಮಿಳುನಾಡಿಗೆ ಮತ್ತೆ ನೀರು ಬಿಡುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಆದೇಶಿಸಿದ್ದು ಈ ಕುರಿತು ಪ್ರತಿಕ್ರಿಯಿಸಿರುವ ಡಿಸಿಎಂ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್, ನಮಗೆ ನೀರು ಬಿಡಲು ಮನಸಿಲ್ಲ. ಆದ್ರೆ ಕೋರ್ಟ್ ಸೂಚನೆ ಗಮನದಲ್ಲಿಟ್ಟುಕೊಳ್ಳಬೇಕು ಎಂದಿದ್ದಾರೆ.
ಯಾವುದೇ ಕಾರಣಕ್ಕೂ ತಮಿಳುನಾಡಿಗೆ ಕಾವೇರಿ ನೀರು ಹರಿಸಬಾರದು ರಾಜ್ಯ ಸರ್ಕಾರ ಕಾನೂನು ಹೋರಾಟ ಮಾಡಬೇಕು ಎಂದು ಆಗ್ರಹಿಸಿದ್ದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿಗೆ ತಿರುಗೇಟು ನೀಡಿದ ಡಿಸಿಎಂ ಡಿ.ಕೆ ಶಿವಕುಮಾರ್, ಬೊಮ್ಮಾಯಿ ಸಲಹೆಯನ್ನ ಪಡೆದುಕೊಳ್ಳೋಣ. ಬೊಮ್ಮಾಯಿ ಸಲಹೆ ಒಪ್ಪುತ್ತೇನೆ. ಬೊಮ್ಮಾಯಿ ಸರ್ಕಾರ ಇದ್ದಾಗ ಏನು ಮಾಡಿದ್ರು ರಾತ್ರೋ ರಾತ್ರಿ ತಮಿಳುನಾಡಿಗೆ ನೀರು ಬಿಟ್ಟಿಲ್ವಾ. ನಮಗೆ ಯಾವ ಕಾರಣಕ್ಕೂ ನೀರು ಬಿಡಲು ಮನಸಿಲ್ಲ. ಆದರೆ ಕೋರ್ಟ್ ಸೂಚನೆ ಗಮನದಲ್ಲಿಟ್ಟುಕೊಳ್ಳಬೇಕು ನಾನು ದೆಹಲಿಗೆ ಹೋಗ್ತಾ ಇದ್ದೇನೆ. ಕೇಂದ್ರ ಮೇಲೆ ಒತ್ತಡ ಹಾಕುತ್ತೇವೆ ಎಂದರು.
ಸುಪ್ರೀಂಕೋರ್ಟ್ ಹೇಳಿದರೇ ನಾವೇನು ಮಾಡೊಕೆ ಆಗುತ್ತೆ. ಬೊಮ್ಮಾಯಿ ಏನು ಮಾಡೋಕೆ ಆಗುತ್ತೆ ನಾವೆಲ್ಲರೂ ಸುಪ್ರೀಂಕೋರ್ಟ್ ಗೆ ಗೌರವ ಕೊಡಲೇ ಬೇಕು. ಈ ವಿಚಾರದಲ್ಲಿ ಮೋದಿ ಮಧ್ಯೆ ಪ್ರವೇಶಿಸಬೇಕು ರಾಜಕೀಯ ಪಣಕ್ಕಿಟ್ಟು ರಾಜ್ಯದ ಜನರ ಹಿತಾಶಕ್ತಿ ಕಾಪಾಡಬೇಕು ಎಂದರು.
Key words: leave – water-Court-notice – DCM- DK Sivakumar.