ಮೈಸೂರು, ಫೆಬ್ರವರಿ 20: ಮೈಸೂರು ನ್ಯಾಯಾಂಗ ಘಟಕದಲ್ಲಿ ಖಾಲಿ ಇರುವ ಶೀಘ್ರಲಿಪಿಗಾರರು, ಬೆರಳಚ್ಚು ನಕಲುಗಾರರು, ಆದೇಶ ಜಾರಿಕಾರರು ಹಾಗೂ ಬೆರಳಚ್ಚುಗಾರರ ಹುದ್ದೆಗೆ ಈಗಾಗಲೇ ಆನ್ಲೈನ್ ಮುಖಾಂತರ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು, ಪ್ರಸ್ತುತ ಇ-ಗೆಜೆಟ್ ಪ್ರಕಟಣೆ ಮಾಡಲಾಗಿದ್ದು, ಅರ್ಜಿ ಸಲ್ಲಿಸಲು ಪ್ರಾರಂಭದ ಹಾಗೂ ಕೊನೆಯ ದಿನಾಂಕವನ್ನು ಮರುನಿಗದಿಪಡಿಸಲಾಗಿದೆ ಎಂದು ಮೈಸೂರು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಹಿಂದೆ 2020ರ ಫೆಬ್ರವರಿ 15 ರಂದು ಶೀಘ್ರಲಿಪಿಗಾರ 16 ಹುದ್ದೆಗೆ, 2020ರ ಫೆಬ್ರವರಿ 19 ರಂದು ಬೆರಳಚ್ಚು ನಕಲುಗಾರರ 4 ಹುದ್ದೆಗೆ, 2020ರ ಫೆಬ್ರವರಿ 20 ರಂದು ಆದೇಶ ಜಾರಿಕಾರರ 17 ಹುದ್ದೆಗೆ, ಹಾಗೂ 2020ರ ಮಾರ್ಚ್ 17 ರಂದು ಬೆರಳಚ್ಚುಗಾರರ 10 ಹುದ್ದೆಗೆ ಅಧಿಸೂಚನೆ ಪ್ರಕಟಿಸಲಾಗಿತ್ತು.
ಈ ಹುದ್ದೆಗಳಿಗೆ ಅರ್ಜಿಸಲ್ಲಿಸಲು ಹೊಸದಾಗಿ ಅವಧಿ ಮರುನಿಗದಿಪಡಿಸಲಾಗಿದ್ದು, 2021ರ ಫೆಬ್ರವರಿ 20 ರಿಂದ 2021ರ ಮಾರ್ಚ್ 21ರ ವರೆಗೆ ಅವಕಾಶ ಕಲ್ಪಿಸಲಾಗಿದೆ. ಈ ಹುದ್ದೆಗಳಿಗೆ ಎಸ್.ಬಿ.ಐ. ಚಲನ್ ಮೂಲಕ ಶುಲ್ಕ ಪಾವತಿಸಲು 2021ರ ಮಾರ್ಚ್ 25ರ ವರೆಗೆ ಅವಕಾಶ ನೀಡಲಾಗಿದೆ.
ಅರ್ಜಿ ಸಲ್ಲಿಸಲು ಪ್ರಾರಂಭ ಹಾಗೂ ಕೊನೆಯ ದಿನಾಂಕಗಳನ್ನು ಮರು ನಿಗದಿಪಡಿಸದ್ದಾಗ್ಯೂ ಈ ದಿನಾಂಕಗಳು ಅರ್ಜಿ ಸಲ್ಲಿಸಲು ಮಾತ್ರ ಅನ್ವಯವಾಗಲಿದ್ದು, ವಯೋಮಿತಿ ನಿರ್ಣಯ, ವಿದ್ಯಾರ್ಹತೆ ಹಾಗೂ ಇನ್ನಿತರ ಎಲ್ಲಾ ವಿಷಯಗಳಿಗೂ ಹಿಂದಿನ ದಿನಾಂಕಗಳೇ ಅನ್ವಯವಾಗಲಿದೆ.
ಶೀಘ್ರಲಿಪಿಗಾರರ ಹುದ್ದೆಗೆ ದಿನಾಂಕ 15.02.2020ರ ಆಡಳಿತ/ನೇ/ಶೀ/3301/2020 ಅಧಿಸೂಚನೆಯಡಿ ಈ ಹಿಂದೆ ನಿಗದಿಪಡಿಸಲಾಗಿದ್ದ ಕೊನೆಯ ದಿನಾಂಕದೊಳಗೆ ಅಂದರೆ 19.04.2020ರೊಳಗೆ ಹಾಗೂ ಬೆರಳಚ್ಚು-ನಕಲುಗಾರರು ಹುದ್ದೆಗೆ ದಿನಾಂಕ 19.02.2020ರ ಆಡಳಿತ/ನೇ/ಬೆನ/3537/2020 ಅಧಿಸೂಚನೆಯಡಿಯಲ್ಲಿ ಈ ಹಿಂದೆ ನಿಗದಿಪಡಿಸಲಾಗಿದ್ದ ಕೊನೆಯ ದಿನಾಂಕದೊಳಗೆ ಅಂದರೆ 20.04.2020ರೊಳಗೆ ಈಗಾಗಲೇ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಮತ್ತೊಮ್ಮೆ ಅರ್ಜಿಯನ್ನು ಸಲ್ಲಿಸುವ ಅವಶ್ಯಕ್ತೆ ಇರುವುದಿಲ್ಲ. ಮೊದಲು ಸಲ್ಲಿಸಿರುವ ಅರ್ಜಿಗಳು ಹಾಗೂ ಶುಲ್ಕವನ್ನೇ ಪರಿಗಣಿಸಲಾಗುತ್ತದೆ.
ಅರ್ಜಿ ಸಲ್ಲಿಸಲು ಪ್ರಾರಂಭದ ಹಾಗೂ ಕೊನೆಯ ದಿನಾಂಕಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಅಂಶಗಳು ಈಗಾಗಲೇ ಹೊರಡಿಸಲಾಗಿರುವ ನೇಮಕಾತಿ ಅಧಿಸೂಚನೆಯಲ್ಲಿರುವಂತೆ ಅನ್ವಯವಾಗಲಿವೆ ಎಂದು ಮೈಸೂರಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
key words: apply- vacancies – Mysore- judicial unit