ರೇಪ್ ಬಗ್ಗೆ ಹೇಳಿಕೆ: ವಿಧಾನಸಭೆಯಲ್ಲಿ ಕ್ಷಮೆಯಾಚಿಸಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್.

ಬೆಳಗಾವಿ,ಡಿಸೆಂಬರ್,17,2021(www.justkannada.in) :  ನಿನ್ನೆ ವಿಧಾನಸಭೆ ಕಲಾಪದಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮಾತನಾಡುತ್ತಿದ್ದ ವೇಳೆ, ಅತ್ಯಾಚಾರ ತಡೆಯಲು ಆಗದ್ದಿದ್ದಾಗ ಮಲಗಿ ಎಂಜಾಯ್ ಮಾಡಬೇಕು ಎಂದು ಹೇಳಿಕೆ ನೀಡಿದ್ಧರು. ಈ ಹೇಳಿಕೆಗೆ ಇದೀಗ ಸಾಕಷ್ಟು ಆಕ್ರೋಶ ವ್ಯಕ್ತವಾಗಿದ್ದು ಈ ಹಿನ್ನೆಲೆಯಲ್ಲಿ ರಮೇಶ್ ಕುಮಾರ್ ಕ್ಷಮೆಯಾಚಿಸಿದ್ದಾರೆ.

ಈ ಕುರಿತು ವಿಧಾನಸಭೆ ಕಲಾಪದಲ್ಲಿ ಕ್ಷಮೆಯಾಚಿಸಿದ ರಮೇಶ್ ಕುಮಾರ್, ಹೆಣ್ಣಿನ ಬಗ್ಗೆ ಲಘುವಾಗಿ ಮಾತನಾಡುವ ಉದ್ಧೇಶನನಗಿಲ್ಲ.  ನನ್ನ ಹೇಳಿಕೆಯಿಂದ ಯಾರಿಗಾದ್ರೂ ನೋವಾಗಿದ್ರೆ ವಿಷಾದಿಸುವೆ. ಮುಕ್ತ ಮನಸ್ಸಿನಿಂದ ವಿಷಾದ ವ್ಯಕ್ತಪಡಿಸುತ್ತೇನೆ.ಲಘುವಾಗಿ ವರ್ತಿಸಬೇಕೆಂಬ ಉದ್ಧೇಶ ನನಗಿಲ್ಲ.  ಇನ್ನು ಈ ವಿಚಾರವಾಗಿ ಕಲಾಪ ಹಾಳು ಮಾಡುವುದು ಬೇಡ. ನನ್ನ ಹೇಳಿಕೆಗೆ ಕ್ಷಮೆಯಾಚಿಸುತ್ತೇನೆ ಎಂದಿದ್ದಾರೆ.

ನನ್ನ ಮಾತುಗಳಿಂದ ಯಾರಿಗೇ ಆದರೂ ನೋವಾಗಿದ್ದರೆ ಅದಕ್ಕೆ ವಿಷಾದಿಸುತ್ತೇನೆ. ಯಾವುದೋ ಒಂದು ಉದಾಹರಣೆ ಕೊಡಲು ಹೋದಾಗ, ನಾನು ರೀತಿ ಹೇಳಿಕೆ ಕೊಟ್ಟಿದ್ದೆ. ಅದು ತಪ್ಪು ಎಂದು ಎಲ್ಲರೂ ಹೇಳುತ್ತಿದ್ದಾರೆ. ಹೀಗಾಗಿ ನಾನು ಕ್ಷಮೆಯಾಚಿಸುತ್ತಿದ್ದೇನೆ ಎಂದು ರಮೇಶ್ ಕುಮಾರ್ ತಿಳಿಸಿದರು.

Key words: rape-statement- Former Speaker- Ramesh Kumar- Assembly.

ENGLISH SUMMARY…

Former speaker Ramesh Kumar apologises on his ‘enjoy rape’ statement
Belagavi, December 17, 2021 (www.justkannada.in): Former speaker and Congress leader Ramesh Kumar today apologized in the assembly for his ‘enjoy rape’ remark.
On Thursday, Kumar had stirred controversy at the assembly after he told Speaker Vishweshwar Hegde Kageri, “There’s a saying… when rape is inevitable, lie down and enjoy it. That’s exactly the position into which you are.”
Speaking at the start of the Assembly session today, Ramesh Kumar said, “If my remarks have hurt women, (or) if their feelings are hurt, I regret my remarks.” Kumar said that he had “just referred to a proverb” and his goal was not to insult women or Assembly or to speak lightly (about rape).
Keywords: Former speaker Ramesh Kumar/ enjoy rape remark/ apologises