ಬೆಂಗಳೂರು,.ಆಗಸ್ಟ್,13,2021(www.justkannada.in): ಭಾರತದ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಅಂಗವಾಗಿ “ಶಿಖರದಿಂದ ಸಾಗರ” ಅಭಿಯಾನವನ್ನು ಹಮ್ಮಿಕೊಳ್ಳುತ್ತಿದ್ದು, ಇದು ಒಂದು ಐತಿಹಾಸಿಕ ಯಾನವಾಗಿದ್ದು, ಕರ್ನಾಟಕದ 5 ಯುವತಿಯರು ಕಾಶ್ಮೀರದ Kolhoi ಪರ್ವತ ಹತ್ತುವ ಮೂಲಕ, ನಂತರ ಕಾಶ್ಮೀರದಿಂದ ಹೊರಟು 3000 ಕಿ.ಮೀ. ಸೈಕಲ್ ಯಾನ ಮಾಡುತ್ತಾ, ಕಾರವಾರ ತಲುಪಿ ಕಾರವಾರದಿಂದ ಕರ್ನಾಟಕದ ಕರಾವಳಿ ಪ್ರದೇಶದಲ್ಲಿ 300 ಕಿ.ಮೀ. ಸಮುದ್ರದ ಮೂಲಕ ಕಯಾಕಿಂಗ್ ಯಾನ ಮಾಡುತ್ತಾ ಮಂಗಳೂರು ತಲುಪಲಿದ್ದಾರೆ ಎಂದು ರೇಷ್ಮೆ, ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವ ಡಾ. ನಾರಾಯಣಗೌಡ ತಿಳಿಸಿದರು.
ಇಂದು ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಡಾ. ನಾರಾಯಣಗೌಡ , ಇದು ಸುಮಾರು 45 ದಿನಗಳ ಸಾಹಸ ಯಾತ್ರೆ ಆಗಿದ್ದು, ಸ್ತ್ರೀ ಶಕ್ತಿ ಧೈರ್ಯ, ಸಾಹಸ, ಧೈರ್ಯ ಸಾಹಸಿ ಲಕ್ಷ್ಮೀ, ನಾರಿಯ ಜೊತೆ ಪುರುಷರ ವಿಕಾಸ’ ಎನ್ನುವಂತಹ ತತ್ವವನ್ನು ಬಿಂಬಿಸುವಂತಹ ಒಂದು ವಿಭಿನ್ನವಾದ ಕಾರ್ಯಕ್ರಮವಾಗಿರುತ್ತದೆ. ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡಮಿ ಹಾಗೂ ಭಾರತೀಯ ಪರ್ವತರೋಹಣ ಸಂಸ್ಥೆಯ ಸಹಯೋಗದೊಂದಿಗೆ ನಡೆಸುತ್ತಿರುವ ಈ ಯಾನಕ್ಕೆ ಇದೇ ಆಗಸ್ಟ್, 17 ರಂದು ಚಾಲನೆ ನೀಡಲಾಗುವುದು ಎಂದರು.
ಪಾಲ್ಗೊಳ್ಳುತ್ತಿರುವ ಸಾಹಸಿಗರು.
ಪುಷ್ಪ -ಮಡಿಕೇರಿ
ಐಶ್ವರ್ಯ- ಶಿವಮೊಗ್ಗ
ಧನಲಕ್ಷ್ಮಿ -ಶಿವಮೊಗ್ಗ
ಆಶಾ- ಬೆಂಗಳೂರು
ಬಿಂದು -ಮೈಸೂರು
ಮಿಷನ್ ಒಲಂಪಿಕ್ಸ್ :
2024ರ ಒಲಂಪಿಕ್ಸ್ಗೆ ಕರ್ನಾಟಕದಿಂದ ಕನಿಷ್ಟ 100 ಕ್ರೀಡಾಪಟುಗಳನ್ನು ಕಳುಹಿಸುವ ಯೋಜನೆ.
ಇನ್ನು ಪ್ಯಾಲಿಸ್ನಲ್ಲಿ ನಡೆಯುವ 2024ರ ಒಲಂಪಿಕ್ಸ್ಗೆ ಕರ್ನಾಟಕದಿಂದ ಕನಿಷ್ಟ 100 ಕ್ರೀಡಾಪಟುಗಳನ್ನು ಕಳುಹಿಸುವ ಯೋಜನೆ ರೂಪಿಸಿದ್ದು, ಈಗಾಗಲೇ 35 ಕ್ರೀಡಾಪಟುಗಳನ್ನು ಗುರುತಿಸಲಾಗಿದೆ. ಈ ಕ್ರೀಡಾಪಟುಗಳಿಗೆ ತಲಾ ರೂ.5.00 ಲಕ್ಷ ಪ್ರೋತ್ಸಾಹ ಧನ ನೀಡಲಾಗುವುದು. ಈ ಬಗ್ಗೆ ಸಾರ್ವಜನಿಕರು ಸಹ ಅವಶ್ಯ ಸಲಹೆ ಸೂಚನೆಗಳನ್ನು ನೀಡಬಹುದಾಗಿದೆ ಎಂದು ಸಚಿವ ನಾರಾಯಣಗೌಡ ತಿಳಿಸಿದರು.
ಖೇಲೋ ಇಂಡಿಯಾ ಯುನಿವರ್ಸಿಟಿ ಗೇಮ್ಸ್-2021 : ದೇಶದ ಪ್ರತಿಷ್ಠಿತ ಖೇಲೋ ಇಂಡಿಯಾ ಯುನಿವರ್ಸಿಟಿ ಗೇಮ್ಸ್-2021ನ್ನು ಬೆಂಗಳೂಲಿನಲ್ಲಿ ಮಾರ್ಚ್ 5 ರಿಂದ 12 ದಿನ ನಡೆಸಲಾಗುತ್ತಿದ್ದು, ದೇಶದ ಎಲ್ಲೆಡೆಯಿಂದ 20 ಕ್ರೀಡೆಗಳ 7000 ಕ್ರೀಡಾಪಟುಗಳು ಭಾಗವಹಿಸುವ ನಿರೀಕ್ಷೆ ಇದ್ದು, ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರನ್ನು ಕ್ರೀಡಾಕೂಟ ಉದ್ಘಾಟನೆಗೆ ಆಹ್ವಾನಿಸಲಾಗುವುದು. ಕ್ರೀಡಾಕೂಟದ ಆಯೋಜನೆ ಜೈನ್ ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ನಡೆಯಲಿದೆ ಎಂದರು.
ಪೊಲೀಸ್ ಇಲಾಖೆಯಲ್ಲಿ ಈಗಾಗಲೇ ಶೇಕಡ 2 ರಷ್ಟು ಮೀಸಲಾತಿಯನ್ನು ಕ್ರೀಡಾಪಟುಗಳಿಗೆ ಮೀಸಲಿಸಿದ್ದು, ಇತರ ಇಲಾಖೆಗಳಗೂ ವಿಸ್ತರಿಸುವ ಕಾರ್ಯ ಚಾಲನೆಯಲ್ಲಿದೆ. ಕ್ರೀಡಾಪಟುಗಳನ್ನು ವೈಜ್ಞಾನಿಕವಾಗಿ ಆಯ್ಕೆ ಮಾಡಲು ಕಂಠೀರವ ಸ್ಟೇಡಿಯಂನಲ್ಲಿ ಕ್ರೀಡಾ ವಿಜ್ಞಾನ ಕೇಂದ್ರ ಸ್ಥಾಪಿಸಲಾಗಿದ್ದು, ಪ್ರಸಕ್ತ ಸಾಲಿನಿಂದ ರೂ.2.00 ಕೋಟಿ ವೆಚ್ಚದಲ್ಲಿ ಮಂಡ್ಯದಲ್ಲಿಯೂ ಸ್ಥಾಪಿಸಲಾಗುವುದು ಎಂದು ಸಚಿವ ನಾರಾಯಣಗೌಡ ಹೇಳಿದರು.
ಕ್ರೀಡಾ ವಸತಿನಿಲಯಗಳ ಆಧುನೀಕರಣ:
ರಾಜ್ಯದಲ್ಲಿ 34 ಕ್ರೀಡಾ ವಸತಿ ನಿಲಯಗಳಿದ್ದು, 2300 ಕ್ಕೂ ಹೆಚ್ಚು ವಿದ್ಯಾರ್ಥಿಗಳು 150 ಜನ ತರಬೇತುದಾರರಿಂದ ವಿವಿಧ ಕ್ರೀಡೆಗಳಲ್ಲಿ ತರಬೇತಿ ನೀಡಲಾಗುತ್ತಿದೆ. ಕ್ರೀಡಾ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗೂ ಶುಲ್ಕ ವಿನಾಯಿತಿಯನ್ನು ಸಹ ಇಲಾಖೆಯಿಂದ ನೀಡಲಾಗುತ್ತಿದೆ. ಕ್ರೀಡಾ ವಸತಿ ನಿಲಯಗಳ ಆಧುನೀಕರಣಕ್ಕೆ ಪ್ರಸಕ್ತ ಸಾಲಿನಲ್ಲಿ ರೂ.5.75 ಕೋಟಿ ವೆಚ್ಚ ಭರಿಸಲಾಗುತ್ತಿದೆ ಎಂದು ಸಚಿವ ನಾರಾಯಣಗೌಡ ಹೇಳಿದರು.
ಬಾಲಕಿಯರಿಗೆ ಪ್ರತ್ಯೇಕ ಕ್ರೀಡಾ ವಸತಿನಿಲಯ:
ಪ್ರಸಕ್ತ ಸಾಲಿನಲ್ಲಿ ಬಾಲಕಿಯರಿಗಾಗಿ ಪ್ರತ್ಯೇಕ ಕ್ರೀಡಾ ವಸತಿನಿಲಯಗಳನ್ನು ರಾಯಚೂರು, ಹಾವೇಲಿ, ಮಂಗಳೂರು, ಚಿಕ್ಕಮಗಳೂರು, ಮಂಡ್ಯ, ಚಾಮರಾಜನಗರ, ಕಲಬುರ್ಗಿ, ಕೋಲಾರ, ಹಾಸನ ಮತ್ತು ಧಾರವಾಡಗಳಲ್ಲಿ ತಲಾ ರೂ.150.00 ಲಕ್ಷಗಳಲ್ಲಿ ನಿರ್ಮಿಸಲಾಗುವುದು. ಈ ಸಂಬಂಧ ರೂ.5.00 ಕೋಟಿ ಅಡುಗಡೆಗೊಳಿಸಲಾಗಿದೆ ಎಂದರು.
ಕ್ರೀಡಾಂಗಣಗಳ ಆಧುನೀಕರಣ:
ಕಂಠೀರವ ಕ್ರೀಡಾಂಗಣದಲ್ಲಿ ರೂ.4.50 ಕೋಟಿ, ಚಿಕ್ಕಮಗಳೂರು ಮತ್ತು ಹಾಸನದಲ್ಲಿ ತಲಾ ರೂ.7.50 ಕೋಟಿ ವೆಚ್ಚದಲ್ಲಿ ಸಿಂಥೆಟಿಕ್ ಟ್ರ್ಯಾಕ್ ಕೋರಮಂಗಲ ಒಳಾಂಗಣ ಕ್ರೀಡಾಂಗಣ ರೂ.5,00 ಕೋಟಿ, ಮಂಡ್ಯ ವಿಶ್ವೇಶ್ವರಯ್ಯ ಕ್ರೀಡಾಂಗಣವನ್ನು ರೂ.10,00 ಕೋಟ ಹಾಗೂ ಕೆ.ಆರ್.ಪೇಟೆ ತಾಲ್ಲೂಕು ಕ್ರೀಡಾಂಗಣವನ್ನು ರೂ.14.50 ಕೋಟಿ ವೆಚ್ಚದಲ್ಲಿ ನವೀಕರಣಗೊಳಸಲಾಗುತ್ತಿದೆ.
ಕೇಂದ್ರದಿಂದ 31 ಖೇಲೋ ಇಂಡಿಯಾ ಕೇಂದ್ರ ಮಂಜೂರು :
ಭಾರತ ಸರ್ಕಾರವು ರಾಜ್ಯಕ್ಕೆ ಅತೀ ಹೆಚ್ಚು ಅಂದರೆ ಜಿಲ್ಲೆಗೆ ತಲಾ ಒಂದರಂತೆ ಒಟ್ಟು 31 ಖೇಲೋ ಇಂಡಿಯಾ ಕೇಂದ್ರಗಳನ್ನು ಮಂಜೂರು ಮಾಡಿದ್ದು, ರೂ. 2.17 ಕೋಟಿ ಅನುದಾನ ಬಿಡುಗಡೆ ಮಾಡಿದೆ. ‘ಜಿಲ್ಲೆಗೆ ಒಂದು ಕ್ರೀಡೆ’ ಕಲ್ಪನೆಯ ಈ ಕೇಂದ್ರಗಳಿಂದ ಅಗತ್ಯ ತರಬೇತಿ ನೀಡಲಾಗುವುದು.
ಜಕ್ಕೂರು ಮೈಮಾನಿಕ ತರಬೇತಿ ಶಾಲೆಗೆ ಕಾಯಕಲ್ಪ : ಕಳೆದ 4 ವರ್ಷಗಳಿಂದ ಸ್ಥಗಿತಗೊಂಡಿದ್ದ ಜಕ್ಕೂರು ಮೈಮಾನಿಕ ತರಬೇತಿ ಶಾಲೆ ಸೆಪ್ಟೆಂಬರ್ನಿಂದ ಪುನಾರಂಭಗೊಳ್ಳಲಿದ್ದು, ವಾರ್ಷಿಕ ಪೈಲಟ್ಗಳಿಗೆ ತರಬೇತಿ ನೀಡುವ ಗುರಿ ಹೊಂದಲಾಗಿದೆ. 100 ಮಾದಲಿಯಲ್ಲಿ ಜಕ್ಕೂರು ಮೈಮಾನಿಕ ತರಬೇತಿ ಶಾಲೆ ಅಭೀವೃದ್ಧಿಗೊಳಿಸಲು ಉದ್ದೇಶಿಸಲಾಗಿದೆ. ಖಾಸಗಿ ಕಂಪೆನಿಗಳಿಂದ ವಸೂಲಿಯಾಗಬೇಕಿದ್ದ ಬಾಡಿಗೆ ವಸೂಲ ಮಾಡುತ್ತಿದ್ದು, ಬಾಡಿಗೆ ನೀಡದ ಕಂಪನಿಗಳ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ ಎಂದರು.
Key words: Running –shikaradinda sagara-campaign- Minister- Narayana Gowda.