ಬೆಂಗಳೂರು,ಅಕ್ಟೋಬರ್,27,2021(www.justkannada.in): ಉಪಚುನಾವಣೆ ಪ್ರಚಾರದಲ್ಲಿ ಕಂಬಳಿ ,ಕುರಿ ಕಾಯುವ ವಿಚಾರ ಬಾರಿ ಸದ್ಧು ಮಾಡುತ್ತಿದ್ದು, ವಿಪಕ್ಷ ನಾಯಕ ಸಿದ್ಧರಾಮಯ್ಯ ಮತ್ತು ಸಿಎಂ ಬಸವರಾಜ ಬೊಮ್ಮಾಯಿ ನಡುವೆ ವಾದ ಪ್ರತಿವಾದ ನಡೆಯುತ್ತಿದೆ.
ಇದೀಗ ಮತ್ತೆ ಮಾಜಿ ಸಿಎಂ ಸಿದ್ಧರಾಮಯ್ಯ ಸಿಎಂ ಬಸವರಾಜ ಬೊಮ್ಮಾಯಿಗೆ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಟಾಂಗ್ ನೀಡಿದ್ದಾರೆ. ಕಂಬಳಿಯನ್ನು ನೇಯ್ಯೋದು ಕುರುಬರು. ಅದು ಅವರ ಕಸುಬು ಕೂಡ. ನಾವು ಹಾಕೊಂಡಿದ್ದೇವೆ. ನೇಯ್ದಿದ್ದೇವೆ. ಕುರಿಯನ್ನು ಕಾದಿದ್ದೇವೆ. ರಾಜಕೀಯ ವಾಕ್ ಸಮರದಲ್ಲಿ ಮೊದಲು ಕಂಬಳಿಯನ್ನು ಎಳೆದು ತಂದಿದ್ದು ಸಿಎಂ ಬೊಮ್ಮಾಯಿ. ಕಂಬಳಿ ಪಾಲಿಟಿಕ್ಸ್ ಶುರುಮಾಡಿದ್ದೇ ಬೊಮ್ಮಾಯಿ. ಬೊಮ್ಮಾಯಿ ತಂದೆ ಶಾಸಕರಾಗಿದ್ರು ಸಚಿವರಾಗಿದ್ರು ಸಿಎಂ ಆಗಿದ್ರು. ಸಿಎಂ ಮಗನಾಗಿದ್ಧ ಬೊಮ್ಮಾಯಿ ಕುರಿ ಕಾದಿದ್ರಾ ಎಂದು ಟೀಕಿಸಿದರು.
ಇದೇ ವೇಳೆ ಹೆಚ್.ಡಿಕೆ ವಿರುದ್ಧ ಗುಡುಗಿದ ಸಿದ್ಧರಾಮಯ್ಯ, ಹೆಚ್.ಡಿ ಕುಮಾರಸ್ವಾ,ಮಿ ಮಹಾನ್ ಸುಳ್ಳುಗಾರ ಅವರ ಯಾವುದೇ ಹೇಳಿಕೆಗೆ ನಾನು ಪ್ರತಿಕ್ರಿಯಿಸಲ್ಲ ಎಂದರು.
ಸಿಟಿ ರವಿ ವಿರುದ್ಧ ಏಕವಚನದಲ್ಲೇ ವಾಗ್ದಾಳಿ.
ಈ ಟೋಪಿ ಹಾಕಿಕೊಳ್ಳೋದಕ್ಕೆ ಯಾರಿಗೆ ಹುಟ್ಟಿರಬೇಕು ಎಂದು ಟ್ವಿಟ್ ಮಾಡಿದ್ಧ ಸಿ.ಟಿ.ರವಿ ವಿರುದ್ಧ ಕೆಂಡಾಮಂಡಲರಾದ ಸಿದ್ಧರಾಮಯ್ಯ, ಅನ್ಯಾರು ನಾನ್ ಟೋಪಿ ಹಾಕೊಳ್ಳೋದನ್ನು ಕೇಳೋದಕ್ಕೆ. ನಾನು ಗಾಂಧಿ ಟೋಪಿನೂ ಹಾಕಿಕೊಳ್ಳುವೆ. ಮುಸ್ಲೀಂ ಟೋಪಿ ಹಾಕಿಕೊಳ್ಳುವೆ. ಕ್ರಿಶ್ಚಿಯನ್ನರ ಟೋಪಿಯನ್ನು ಹಾಕಿಕೊಳ್ಳುವೆ. ಕುರುಬರ ಟೋಪಿಯನ್ನು ಹಾಕಿಕೊಳ್ಳುವೆ. ನಾನ್ ಟೋಪಿ ಹಾಕಿಕೊಳ್ಳೋದನ್ನು ಕೇಳೋದಕ್ಕೆ ಅವನ್ಯಾರು ಎಂದು ಕಿಡಿಕಾರಿದರು.
Key words: CM’s-son-basavaraj Bommai- Sheep -Former CM -Siddaramaiah