ಮೈಸೂರು,ನವೆಂಬರ್,27,2021(www.justkannada.in): ಯಾವ ಇಲಾಖೆಯಲ್ಲಿ ಲಂಚ ತಗೋತ್ತಾರೆ ಅಲ್ಲಿಂದಲೇ ತನಿಖೆ ಮಾಡಿಸೋದಾ? ಈ ಪರ್ಸೆಟೆಂಜ್ ತನಿಖೆ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶರಿಂದ ಆಗಬೇಕು ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಆಗ್ರಹಿಸಿದರು.
ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಿದ್ಧರಾಮಯ್ಯ, ಯಾರು ಲಂಚ ತೆಗೆದುಕೊಂಡಿದ್ದಾರೆ ಅವರಿಗೆ ಶಿಕ್ಷೆ ಆಗಲಿ. ಅದು ಬಿಟ್ಟು ಇಲಾಖೆಗಳ ಕಾರ್ಯದರ್ಶಿ ಕೈಯಲ್ಲಿ ತನಿಖೆ ಮಾಡಿಸುತ್ತೇವೆ ಅಂದ್ರೆ ಏನು? ಇದು ಕಣ್ಣೋರೆಸುವ ತಂತ್ರ ಅಲ್ವಾ, ಇದು ಪ್ರಕರಣ ಮುಚ್ಚಿಹಾಕಲು ಸರ್ಕಾರ ಯತ್ನಿಸುತ್ತಿದೆ ಎಂದು ಆರೋಪಿಸಿದರು.
ನಾವು ರಾಜ್ಯಪಾಲರಿಗೆ ಭೇಟಿ ಮಾಡಿ ಮನವಿ ಮಾಡಿದ್ದೇವೆ. ಬಿಡಿಎನಲ್ಲಿ 300 ಕೋಟಿ ನಷ್ಟವಾಗಿದೆ ಅಂತಾರೆ. ಬಿಜೆಪಿಯಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ಭ್ರಷ್ಟಾಚಾರ ಹೆಚ್ಚಾಗಿದೆ ಅಂತ ದೂರು ಬಂದ ಮೇಲೆ ತನಿಖೆ ಮಾಡಬೇಕಲ್ವಾ? ಆದರೆ ಸಿಎಂ ಆ ಕಾಲದಲ್ಲಿ ಇತ್ತು ಅಂತಾರೆ, ಹೌದು ಆ ಕಾಲದಲ್ಲೂ ಭ್ರಷ್ಟಾಚಾರ ಇತ್ತು. ಆದರೆ ಕಂಟ್ರ್ಯಾಕ್ಟರ್ ಯಾವಾತಾದ್ರು ಪತ್ರ ಬರೆದಿದ್ದಾರಾ? ಒಂದು ಲಕ್ಷ ಕಂಟ್ರಾಕ್ಟರ್ ಇರುವ ಸಂಘದವರು ಪತ್ರ ಬರೆದಿದ್ದಾರೆ. ಕೆಂಪಣ್ಣ ಸುದ್ದಿಗೋಷ್ಠಿ ನಡೆಸಿ ಈ ಹೇಳಿಕೆ ಕೊಟ್ಟಿದ್ದಾರೆ.
ಕೆಂಪಣ್ಣನ ಆರೋಪ ಸತ್ಯ 35 ರಿಂದ 40 ಪರ್ಸೆಂಟ್ ಸರ್ಕಾರ ಇದು. ಸಚಿವರು, ಶಾಸಕರು, ಸಂಸದರು ಪರ್ಸೆಂಟೇಜ್ ತೆಗೆದುಕೊಂಡಿದ್ದಾರೆ. ಇದನ್ನ ಸ್ವತಃ ಕೆಂಪಣ್ಣ ಕೊಟ್ಟಿರುವ ಹೇಳಿಕೆಯನ್ನು ನಾನು ರಾಜ್ಯಪಾಲರಿಗೆ ಕೊಟ್ಟಿದ್ದೇನೆ. ಮೊದಲು ಈ ಸರ್ಕಾರ ಡಿಸ್ಮಿಸ್ ಮಾಡಿ ಅಂತ ಪ್ರಧಾನಿಗೆ ಆಗ್ರಹ ಮಾಡುತ್ತೇನೆ. ಪರ್ಸೆಂಟೇಜ್ ಏನು ತೆಗೆದುಕೊಂಡಿಲ್ಲ ಅಂತ ಸರ್ಕಾರ ಹೇಳಿದೋದ್ರೆ. ಕಾರ್ಯದರ್ಶಿ ಬಳಿ ತನಿಖೆ ಮಾಡಿಸುತ್ತೇನೆ ಅಂತ ಸಿಎಂ ಏಕೆ ಹೇಳಿದ್ರು ಎಂದು ಸಿದ್ಧರಾಮಯ್ಯ ತಿರುಗೇಟು ನೀಡಿದರು.
ವಿಶ್ವನಾಥ್ ಬಗ್ಗೆ ನಾನು ಏನು ಮಾತಾಡಲ್ಲ. ಅವರು ರೈಟಿಂಗ್ ನಲ್ಲಿ ಪತ್ರ ಕೊಟ್ಟಿದ್ದಾರಾ? ಕಾಂಗ್ರೆಸ್ ನಲ್ಲಿ ಕಮಿಷನ್ ಪಡೆದಿದ್ದಾರೆ ಅಂದ್ರೆ ತನಿಖೆ ಮಾಡಿಸಿ. ಉಪ್ಪು ತಿಂದವರು ನೀರು ಕುಡಿಲಿ. ನಮ್ಮ ಕಾಲದಲ್ಲು ಇದ್ದರು ಅದನ್ನು ತನಿಖೆ ಮಾಡಿಸಿ ಎಂದು ಸಿದ್ಧರಾಮಯ್ಯ ಹೇಳಿದರು.
Key words: Percertange-investigation – Supreme Court- retired judge -Former CM Siddaramaiah