ಬೆಂಗಳೂರು,ನವೆಂಬರ್,2,2021(www.justkannada.in): ಹಾನಗಲ್ ಕ್ಷೇತ್ರದ ಗೆಲುವು ಕಾಂಗ್ರೆಸ್ ಗೆಲುವು ಅಲ್ಲ. ಅದು ಶ್ರೀನಿವಾಸ್ ಮಾನೆ ಅವರ ಗೆಲುವು ಎಂದು ಸಚಿವ ವಿ.ಸೋಮಣ್ಣ ತಿಳಿಸಿದರು.
ಬಿಜೆಪಿ ಪ್ರಧಾನ ಕಚೇರಿಯಲ್ಲಿ ಸಚಿವಾರ ವಿ.ಸೋಮಣ್ಣ, ಸಿ.ಸಿ.ಪಾಟೀಲ್ ಹಾಗೂ ತೇಜಸ್ವಿನಿ ರಮೇಶ್ ಗೌಡ, ಛಲವಾದಿ ನಾರಾಯಣಸ್ವಾಮಿ ಜಂಟಿ ಸುದ್ದಿಗೋಷ್ಠಿ ನಡೆಸಿ ಉಪಚುನಾವಣೆ ಕುರಿತು ಮಾತನಾಡಿದರು. ಈ ವೇಳೆ ಮಾತನಾಡಿದ ಸಚಿವ ವಿ.ಸೋಮಣ್ಣ, ಶ್ರೀನಿವಾಸ್ ಮಾನೆ ಅವರು ಕ್ಷೇತ್ರದಲ್ಲಿ ಕೊರೋನಾ ಸಂಕಷ್ಟದಲ್ಲಿ ಓಡಾಟ ಮಾಡಿದ್ದಾರೆ. ಮುಂದೆ ಅದನ್ನು ನಾವು ಗೆಲ್ಲುತ್ತೇವೆ. ನಮ್ಮ ಓಟು ಎಲ್ಲಿಯೂ ಹೋಗಿಲ್ಲ. ಶೇ.2 ರಿಂದ 3 ರಷ್ಟು ಮತಗಳು ಆ ಕಡೆ, ಈ ಕಡೆ ಹೋಗಿದೆ. ಹೀಗಾಗಿ, ಅದು ಶ್ರೀನಿವಾಸ್ ಮಾನೆ ಅವರ ಗೆಲುವು ಎಂದು ತಿಳಿಸಿದರು.
ಹಾಗೆಯೇ ಸಿಂದಗಿಯಲ್ಲಿ ಜನ ಅಭೂತಪೂರ್ವ ಬೆಂಬಲ ಸೂಚಿಸಿದ್ದಾರೆ. ಆದರೆ ಹಾನಗಲ್ ನಲ್ಲಿ ಸಣ್ಣ ಮಾರ್ಜಿನ್ ನಲ್ಲಿ ಸೋತಿದ್ದೇವೆ. ಸಿಂದಗಿಯಲ್ಲಿ ಅಭಿವೃದ್ಧಿ ಬಗ್ಗೆ ಮಾತನಾಡಿದ್ದೇವೆ. ಅಲ್ಲಿ ನಮಗೆ ಅಭಿವೃದ್ಧಿ ಮಾಡಲು ಅವಕಾಶ ಮಾಡಿಕೊಡಿ ಎಂದಿದ್ದೇವು. ಅದಕ್ಕೆ ಜನ ನಮಗೆ ಆಶೀರ್ವಾದ ಮಾಡಿದ್ದಾರೆ. ಗೋವಿಂದ ಕಾರಜೋಳ, ನಾನು, ಸಿ.ಸಿ.ಪಾಟೀಲ್, ಶಶಿಕಲಾ ಜೊಲ್ಲೆ, ಲಕ್ಷ್ಮಣ್ ಸವದಿ ಎಲ್ಲರೂ ಕೂಡ ಒಟ್ಟಿಗೆ ಕೆಲಸ ಮಾಡಿದ್ದೇವೆ. ಹೀಗಾಗಿ, ಸಿಂದಗಿಯಲ್ಲಿ ಗೆಲುವು ಸಾಧಿಸಿದ್ದೇವೆ ಎಂದರು.
ಸಾಮೂಹಿಕ ನಾಯಕತ್ವದಲ್ಲಿ ನಾವು ಚುನಾವಣೆ ಮಾಡಿದ್ದವು. ಬಿಎಸ್ ಯಡಿಯೂರಪ್ಪ ಸಹ ಮೂರು ದಿನ ಅಲ್ಲೇ ಇದ್ದರು. ಸೋಲು ಗೆಲುವು ಯಾರದ್ದು ಅಂತಲ್ಲ. ಮಾನೆ ಕೋವಿಡ್ ಸಮಯದಲ್ಲಿ ಜನರಿಗೆ ಉಪಕಾರ ಮಾಡಿದ್ರು. ಜನ ಉಪಕಾರ ಸ್ಮರಿಸಿ ಶ್ರೀನಿವಾಸ್ ಮಾನೆ ಅವರನ್ನ ಗೆಲ್ಲಿಸಿದ್ದಾರೆ ಎಂದು ಸಚಿವ ವಿ.ಸೋಮಣ್ಣ ತಿಳಿಸಿದರು.
ಹಾನಗಲ್ ನಲ್ಲಿ ನಮಗೆ ಕಳೆದ ಸಲ ಬಂದಿದ್ದ ಮತಗಳು ಬಂದಿವೆ. ಸಜ್ಜನರ್ 79,513 ಮತ ತೆಗೆದುಕೊಂಡಿದ್ದಾರೆ. ಶ್ರೀನಿವಾಸ್ ಮಾನೆ 87+ ಸಾವಿರ ಮತ ತೆಗೆದುಕೊಂಡಿದ್ದಾರೆ. ನಮ್ಮ ಮತ ಎಲ್ಲೂ ಹೋಗಿಲ್ಲ. ನಮ್ಮ ಮತ ನಮಗೆ ಬಂದಿದೆ ಎಂದು ಸಚಿವ ವಿ.ಸೋಮಣ್ಣ ನುಡಿದರು.
ಇದೇ ವೇಳೆ ಮಾತನಾಡಿದ ಸಚಿವ ಸಿ.ಸಿ.ಪಾಟೀಲ್, ಹಾನಗಲ್ ಸೋಲಿನ ಹೊಣೆ ಸಿಎಂ ಮೇಲೆ ಹಾಕಲು ಆಗಲ್ಲ. ನ್ಯೂನತೆಗಳಾಗಿದೆ. ನ್ಯೂನತೆಗಳನ್ನು ಸರಿಪಡಿಸಿಕೊಳ್ಳಿತ್ತೇವೆ. ಮುಂದಿನ ಸಲ ಹಾನಗಲ್ ನಮ್ಮದೇ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Key words: Honegal- victory – not – Congress –victory- Minister -V. Somanna.
ENGLISH SUMMARY…
Congress party has not won in Hanagal, it is Srinivas Maane’s victory: Minister V. Somanna
Bengaluru, November 2, 2021 (www.justkannada.in): “It is not the Congress party which has won at Hanagal. It is the victory of candidate Srinivas Maane,” opined Minister V. Somanna.
A joint press meet was held at the BJP head office in
Bengaluru today. Ministers V. Somanna, C.C. Patil and Tejaswini Rameshgowda, Chalawadi Narayanaswamy were present at the press meet. Minister V. Somanna expressed his view that Congress candidate Srinivas Maane had worked extensively in his constituency during the COVID-19 Pandemic. “However we will win in that constituency in the future. Our votes won’t go anywhere. This time only 2 to 3 percent of the votes have scattered. Hence, I consider it as the victory of Srinivas Maane,” he added.
“At Sindhagi the people have shown extra-ordinary support to BJP. But in Hanagal we have lost with a thin margin. We spoke about development in Sindhagi. We had asked the people to allow us to develop the constituency and they blessed us. Me, Govinda Karajola, C.C. Patil, Shashikala Jolle, Lakshman Savadi all worked together in Sindhagi. Hence, we won,” he said.
Keywords: Press meet/ V. Somanna/ Congress party/ Srinivas Maane/ victory