ಬೆಂಗಳೂರು, ಡಿಸೆಂಬರ್ 24, 2021 (www.justkannada.in): ಇಂದು ರಾಷ್ಟ್ರೀಯ ಗ್ರಾಹಕರ ದಿನ. ಪ್ರತಿ ವರ್ಷ ಡಿಸೆಂಬರ್ 24ರಂದು, ಗ್ರಾಹಕರ ಹಕ್ಕುಗಳ ಕುರಿತು ಸಾರ್ವಜನಿಕರಲ್ಲಿ ಅರಿವನ್ನು ಸೃಷ್ಟಿಸುವ ಉದ್ದೇಶದೊಂದಿಗೆ ಈ ದಿನವನ್ನು ಆಚರಿಸಲಾಗುತ್ತದೆ. ಈ ಕುರಿತು ನಿಮಗೆ ಇಲ್ಲಿದೆ ಕೆಲವು ಉಪಯುಕ್ತ ಮಾಹಿತಿ.
ಗ್ರಾಹಕ ದೂರನ್ನು ಯಾವಾಗ ದಾಖಲಿಸಬಹುದು?
ಗ್ರಾಹಕ ರಕ್ಷಣಾ ಕಾಯ್ದೆ, ೧೯೮೬ರ ಕಲಂ ೨ ದೂರುಗಳನ್ನು ಯಾವ್ಯಾವ ವರ್ಗಗಳಡಿ ದಾಖಲಿಸಬಹುದು ಎಂದು ವ್ಯಾಖ್ಯಾನಿಸುತ್ತದೆ.
ನಿಮಗೆ ಯಾವುದಾದರೂ ಅಂಗಡಿಯಲ್ಲಿ ಎಂಆರ್ಪಿ ದರಕ್ಕಿಂತ ಹೆಚ್ಚಿನ ದರವನ್ನು ವಿಧಿಸಿ ಹಣ ಪಡೆದಿದ್ದರೆ ನೀವು ಗ್ರಾಹಕರ ನ್ಯಾಯಾಲಯದಲ್ಲಿ ದಾವೆ ಹೂಡಬಹುದು. ನೀವು ಖರೀದಿಸಿರುವ ಯಾವುದಾದರೂ ವಸ್ತುಗಳು ದೋಷಪೂರಿತವಾಗಿದ್ದರೆ ಹಾಗೂ ನಿಮಗೆ ನೀಡಿರುವ ಸೇವೆಗಳಲ್ಲಿ ಏನಾದರೂ ಕೊರತೆ ಇದ್ದರೆ ಗ್ರಾಹಕರ ನ್ಯಾಯಾಲಯದ ಮೊರೆ ಹೋಗಬಹುದು. ಒಂದು ವೇಳೆ ನೀವು ಖರೀದಿಸಿದಂತಹ ವಸ್ತುಗಳು ಜೀವಕ್ಕೆ ಅಪಾಯವನ್ನು ಒಡ್ಡುವಂತಿದರೆ ಹಾಗೂ ಸುರಕ್ಷಿತವಲ್ಲದಿದ್ದರೂ ಸಹ ನೀವು ದೂರನ್ನು ದಾಖಲಿಸಬಹುದು.
ದೂರು ನೀಡುವುದು ಹೇಗೆ?
ಯಾವುದೇ ವಕೀಲರ ಸಹಾಯವಿಲ್ಲದೆಯೇ ಗ್ರಾಹಕರು ದೂರನ್ನು ದಾಖಲಿಸಬಹುದು. ಈ ರೀತಿ ವಾಣಿಜ್ಯ ಮಳಿಗೆಗಳಲ್ಲಿ ನಡೆಯುವ ಅನುಚಿತ ವ್ಯಾಪಾರ ವಹಿವಾಟಿನಿಂದಾಗಿ ನಿಮಗೇನಾದರೂ ತೊಂದರೆ ಉಂಟಾದಾಗ, ನಿಮಗೆ ಉಂಟಾದ ಸಮಯದ ನಷ್ಟ, ಪ್ರಯಾಣ ಹಾಗೂ ಕಾನೂನು ವೆಚ್ಚಗಳು ಹಾಗೂ ನಿಮಗೆ ಉಂಟಾದ ಮಾನಸಿಕ ತೊಂದರೆಗೂ ನೀವು ಪರಿಹಾರವನ್ನು ಕೋರಬಹುದು. ಇದಕ್ಕೆ ಪೂರಕ ದಾಖಲೆಗಳನ್ನು ಒದಗಿಸಬೇಕು. ಒಂದು ವೇಳೆ ಗ್ರಾಹಕರ ನ್ಯಾಯಾಲಯದಲ್ಲಿ ನಿಮ್ಮ ಸಮಸ್ಯೆ ಸಂಬೋಧಿಸಿದಿದ್ದರೆ, ತೊಂದರೆ ಅನುಭವಿಸಿದಂತಹ ಗ್ರಾಹಕರು ಉನ್ನತ ನ್ಯಾಯಾಲದಲ್ಲಿಯೂ ದಾವೆ ಹೂಡಬಹುದು. ಅಂತಿಮವಾಗಿ ಸಂತ್ರಸ್ತ ಗ್ರಾಹಕರಿಗೆ ಎಷ್ಟು ಪರಿಹಾರ ನೀಡಬೇಕು ಎಂಬುದನ್ನ ನ್ಯಾಯಾಲಯ ತೀರ್ಮಾನಿಸುತ್ತದೆ.
ದೂರುಗಳನ್ನು ನೀಡುವಾಗ ನೀವು ಎದುರಿಸುವ ಸವಾಲುಗಳೇನು?
ಆಹಾರ ಪದಾರ್ಥಗಳು ಅಥವಾ ಕೆಟ್ಟುಹೋಗುವಂತಹ ಪದಾರ್ಥಗಳಾಗಿದ್ದರೆ ಆಹಾರ ಭದ್ರತಾ ಸಂಸ್ಥೆ ಅಥವಾ ಪ್ರಯೋಗಾಲಯದಿಂದ ಒಂದು ವರದಿಯನ್ನು ಪಡೆಯಬೇಕಾಗುತ್ತದೆ. ಉದಾಹರಣೆಗೆ: ಹುಳ ಇರುವ ಚಾಕೊಲೇಟ್, ಎಕ್ಸ್ಪೈರಿ ದಿನಾಂಕ ಮುಗಿದಿರುವ ಒಂದು ವಸ್ತು, ಇತ್ಯಾದಿ. ನೀವು ಯಾವ ಅಂಗಡಿಯಿಂದ ವಸ್ತುವನ್ನು ಖರೀದಿಸಿರುವಿರೋ ಆ ಅಂಗಡಿಯ ಬಿಲ್ ಇರಬೇಕು. ನಿಮಗೆ ಈ ಕುರಿತು ಅರಿವಿಲ್ಲದಿದ್ದರೆ ಗ್ರಾಹಕರ ನ್ಯಾಯಾಲಯದಲ್ಲಿ ನಿಮ್ಮ ಕೇಸ್ ನಡೆಯುವುದಿಲ್ಲ.
ಯಾರ ಯಾರ ವಿರುದ್ಧ ದೂರುಗಳನ್ನು ದಾಖಲಿಸಬಹುದು?
ಚಿಲ್ಲರೆ ವ್ಯಾಪಾರಸ್ಥರು, ಬಿಲ್ಡರ್ ಗಳು, ಹಾಗೂ ಬೆಸ್ಕಾಂ, ಬಿಎಂಟಿಸಿ, ಬಿಬಿಎಂಪಿ ಮತ್ತು ರೈಲ್ವೆಯಂತಹ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ವಿರುದ್ಧವೂ ದೂರುಗಳನ್ನು ದಾಖಲಿಸಬಹುದು.
ನಗರದಲ್ಲಿರುವ ಗ್ರಾಹಕರ ನ್ಯಾಯಾಲಯಗಳು
ಟಿಟಿಎಂಸಿ ಕಟ್ಟಡ, ಶಾಂತಿನಗರ; ಕಾವೇರಿ ಭವನ, ಕೆ.ಜಿ. ರಸ್ತೆ; ಕರ್ನಾಟಕ ಸ್ಟೇಟ್ ಕನ್ಸ್ಯೂಮರ್ ಕಮೀಷನ್ ವರ್ಕ್ಸ್ ಬಸವ ಭವನ, ಚಾಲುಕ್ಯ ಹೋಟೆಲ್ ಹತ್ತಿರ
ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್
Key words: Fraud -store know- how – law -helps