ಅಂತರ್ಜಾಲದಲ್ಲಿ ಕನ್ನಡ ಬರವಣಿಗೆಗೆ ತರಬೇತಿ: ಕನ್ನಡ ಸ್ವಯಂ ಸೇವಕರ ಪಡೆ ರಚನೆಗೆ ಮುಂದಾದ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ.

ಬೆಂಗಳೂರು,ಜನವರಿ,7,2022(www.justkannada.in): ದೇಶ ಹಾಗೂ ವಿಶ್ವದಲ್ಲಿ ಯಾವುದೇ ಪುಸ್ತಕ ಪ್ರಕಟವಾದರೆ, ಹೊಸ ಔಷಧ ಸಂಶೋಧನೆಯಾದರೆ, ಹೊಸ ಕಾಯಿಲೆ ಕಾಣಿಸಿಕೊಂಡರೆ ಅಥವಾ ಹೊಸ ಎಲೆಕ್ಟ್ರಾನಿಕ್ ಉತ್ಪನ್ನ ಮಾರುಕಟ್ಟೆಗೆ ಬಂದರೆ ಕೂಡಲೆ ಅದರ ಕುರಿತು ಬೃಹತ್ ಪ್ರಮಾಣದ ಮಾಹಿತಿ ಅಂತರ್ಜಾಲದಲ್ಲಿ ಇಂಗ್ಲಿಷ್‌ ನಲ್ಲಿ ಲಭ್ಯವಾಗುತ್ತದೆ.ಆದರೆ ತ್ವರಿತವಾಗಿ ಕನ್ನಡದಲ್ಲಿ ಮಾಹಿತಿ ಲಭಿಸದ ಹೊರತು ಕನ್ನಡ ಬಳಕೆಯನ್ನು ಪ್ರೋತ್ಸಾಹಿಸಲು ಸಾಧ್ಯವಿಲ್ಲ ಎಂಬುದನ್ನು ಅರಿತ ಸರ್ಕಾರ ಇದೀಗ ರಾಜ್ಯಾದ್ಯಂತ ಅಂತರ್ಜಾಲಕ್ಕೆ ಕನ್ನಡ ಮಾಹಿತಿ ಒದಗಿಸುವ ಸ್ವಯಂಸೇವಕರ ಪಡೆಯನ್ನು ನಿರ್ಮಿಸಲು ಮುಂದಾಗಿದೆ.

ಭವಿಷ್ಯದಲ್ಲಿ ಎಲ್ಲ ಮಾಹಿತಿಗಳೂ ಕನ್ನಡದಲ್ಲಿ ಕ್ಷಣಮಾತ್ರದಲ್ಲಿ ಸಿಗುವಂತಾಗಲು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಈ ಯೋಜನೆಯನ್ನು  ರೂಪಿಸಿದೆ. ಯಾವುದೇ ವಸ್ತು, ವಿಷಯ, ಪರಿಕಲ್ಪನೆ ಹೀಗೆ ಯಾವುದರ ಬಗ್ಗೆಯಾದರೂ ಅಂತರ್ಜಾಲದಲ್ಲಿ ಇಂಗ್ಲೀಷ್ ಭಾಷೆಯಲ್ಲಿ  ಮಾಹಿತಿ ದೊರೆಯುತ್ತದೆ. ಯಾವುದೇ ವಿಚಾರದ ಹಲವು ಮಗ್ಗುಲುಗಳನ್ನು ತಿಳಿಸುವ ಲೇಖನಗಳು, ಅವುಗಳ ಕೊಂಡಿಗಳು ಇತ್ಯಾದಿ ಕೂಡ ಇಂಗ್ಲೀಷ್ ನಲ್ಲಿ ಸಿಗುತ್ತವೆ. ಆದರೆ ಕನ್ನಡದಲ್ಲಿ ಅಂತಹ ಮಾಹಿತಿ ಸಿಗುವುದಿಲ್ಲ.

ಇಂಗ್ಲೀಷ್ ನಲ್ಲಿ ಬರೆದ ಕಾದಂಬರಿಯ ಬಗ್ಗೆ ಇಂಗ್ಲಿಷ್‌ ನಲ್ಲಿ ಬರೆಯಲಾದ ಹಲವಾರು ವಿಮರ್ಶಾ ಲೇಖನಗಳನ್ನು ಆಧರಿಸಿಯೇ ಯಾವ ಗ್ರಂಥಾಲಯಕ್ಕೂ ಹೋಗದೆ ಅತ್ಯಂತ ಗಂಭೀರವಾದ ಪ್ರಬಂಧಗಳನ್ನೂ ಬರೆಯಬಹುದಾದಷ್ಟು ಮಾಹಿತಿ ಲಭಿಸುತ್ತದೆ. ಕನ್ನಡದಲ್ಲಿ ಹಲವಾರು ಸಾಹಿತಿಗಳ ಬಗ್ಗೆ ಅಗತ್ಯ ಪ್ರಮಾಣದ ಬರಹಗಳು ಮುದ್ರಿತ ರೂಪದಲ್ಲಿ ಬಂದಿದ್ದರೂ ಅವುಗಳ  ಶೇ.1 ರಷ್ಟು ಅಂತರ್ಜಾಲದಲ್ಲಿ ಸಿಗುವುದಿಲ್ಲ. ಸಾಮಾನ್ಯ ಜನರಿಗೆ ಕನ್ನಡ ನಾಡಿನ ಅನೇಕ ಸ್ಥಳಗಳು, ಆಚರಣೆಗಳು, ಸಾಂಸ್ಕೃತಿಕ ವೈಶಿಷ್ಟ್ಯ, ಹೊಸ ಎಲೆಕ್ಟ್ರಾನಿಕ್ ಉತ್ಪನ್ನ ಹೊಸ ವಾಹನ ಹೊಸ ತಂತ್ರಜ್ಞಾನ ಇತ್ಯಾದಿ ವಿಚಾರಗಳ ಬಗ್ಗೆಯೂ ಕನ್ನಡದಲ್ಲಿ ಮಾಹಿತಿ ದೊರೆಯುವುದಿಲ್ಲ. ಈ ಪರಿಸ್ಥಿತಿಯನ್ನು ಸುಧಾರಿಸಲು ಕುವೆಂಪು ಭಾಷಾ ಪ್ರಾಧಿಕಾರ ರಾಜ್ಯಾದ್ಯಂತ ಆರು ನೂರಕ್ಕೂ ಹೆಚ್ಚು ಕನ್ನಡ ಸ್ವಯಂಸೇವಕರ ಪಡೆಯನ್ನು ರೂಪಿಸಲು ಮುಂದಾಗಿದೆ.

ಈ ಕುರಿತು ಮಾತನಾಡಿರುವ ಕುವೆಂಪು ಭಾಷಾಭಾರತಿ ಪ್ರಾಧಿಕಾರ ಅಧ್ಯಕ್ಷ ಅಜಕ್ಕಳ ಗಿರೀಶ್ ಭಟ್,  ಅಂತರ್ಜಾಲದಲ್ಲಿ ಕನ್ನಡದಲ್ಲಿ ವಿಷಯಗಳ ಪ್ರಮಾಣ ಹೆಚ್ಚಿಸಲು ತರಬೇತಿ ನೀಡಲಾಗುತ್ತದೆ. ಕಾರ್ಯಕ್ರಮದ ನಂತರವೂ ಅವರೊಂದಿಗೆ ಸಂಪರ್ಕದಲ್ಲಿದ್ದು, ಕೊಡುಗೆ ಮುಂದುವರಿಸಲು ಪ್ರೋತ್ಸಾಹಿಸಲಾಗುತ್ತದೆ. ಈ ಕಾರ್ಯ ನಿರಂತರ ನಡೆಯಬೇಕು ಎನ್ನುವುದು ನಮ್ಮ ಆಶಯ ಎಂದಿದ್ದಾರೆ.

ಸ್ಟೈಪೆಂಡ್ ಸಹಿತ ತರಬೇತಿ ನೀಡಲಾಗುತ್ತದೆ.  ಭಾಗವಹಿಸುವವರಿಗೆ ಪ್ರಾಧಿಕಾರವೇ ಸ್ಟೈಫೆಂಡ್ ನೀಡಲು ನಿರ್ಧರಿಸಿದೆ. ಅಭ್ಯರ್ಥಿಗಳು ಸ್ವಂತ ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್ ಹೊಂದಿರಬೇಕೆಂಬ ನಿಬಂಧನೆಯಿಲ್ಲ. ವಯಸ್ಸು ಉದ್ಯೋಗ ఇತ್ಯಾದಿ ನಿರ್ಬಂಧವಿಲ್ಲದೆ, ವಿದ್ಯಾರ್ಥಿಗಳು, ಉದ್ಯೋಗಸ್ಥರು ಹೀಗೆ ಆಸಕ್ತರಾದ ಎಲ್ಲ ಸಾರ್ವಜನಿಕರು ಗೂಗಲ್ ಫಾರ್ಮ್‌ನಲ್ಲಿ (https://bit. ly/kbbpapin) ಮಾಹಿತಿ ನೀಡುವ ಮೂಲಕ ಭಾಗವಹಿಸುವಂತೆ ಕಾರ್ಯಕ್ರಮ ರೂಪಿಸಲಾಗುತ್ತಿದೆ. ಸ್ಟೈಪಂಡ್, ಪ್ರಮಾಣಪತ್ರ ಹೊರತುಪಡಿಸಿ, ಸ್ಥಳದಲ್ಲೇ ಲೇಖನ ಬರೆದವರಿಗೆ ಪ್ರೋತ್ಸಾಹಧನ, ಉತ್ತಮ ಲೇಖನಗಳಿಗೆ ಬಹುಮಾನವನ್ನೂ ನೀಡಲಾಗುತ್ತದೆ ಎಂದು ಗಿರೀಶ್ ಭಟ್ ಹೇಳಿದ್ದಾರೆ.

ಹಾಗೆಯೇ ಅಂತರ್ಜಾಲದಲ್ಲಿ ಕನ್ನಡ ಹೆಚ್ಚೆಚ್ಚು ಕಾಣಿಸಿಕೊಳ್ಳಲು ಮುಖ್ಯವಾಗಿ ಮೂರು ಮಾರ್ಗಗಳನ್ನು ಕಾಣಬಹುದು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಣಜ ವೆಬ್‌ಪೋರ್ಟಲ್‌ ನಲ್ಲಿ ಲೇಖನಗಳ ರೂಪದಲ್ಲಿ, ವೈಯಕ್ತಿಕವಾಗಿ ನಿರ್ವಹಣೆ ಮಾಡುತ್ತಿರುವ ವೆಬ್‌ಸೈಟ್ ಹಾಗೂ ಬ್ಲಾಗ್ ಗಳಲ್ಲಿ. ಮೂರನೆಯದಾಗಿ ಕನ್ನಡ “ವಿಕಿಪೀಡಿಯಾಕ್ಕೆ ಬರೆಯುವ ಮೂಲಕ ಈ ಲೇಖನಗಳು ವೈಯಕ್ತಿಕ ಟೀಕೆ ಟಿಪ್ಪಣಿಗಳು, ಆಕ್ರೋಶಭರಿತ ಮಾತುಗಳಲ್ಲಿರದೆ ಮಾಹಿತಿ ಪೂರ್ಣವಾಗಿರಬೇಕು. ಅಂಕಿ ಅಂಶಗಳಲ್ಲಿ ನಿಖರತೆ ಇರಬೇಕು. ಈ ಕುರಿತು ಮಾಹಿತಿ ನೀಡಿದ ಪಾಧಿಕಾರದ ಅಧ್ಯಕ್ಷ ಅಜಕ್ಕಳ ಗಿರೀಶ್ ಭಟ್ ಈ ಕಾರ್ಯಕ್ಕೆ ಪ್ರಾಥಮಿಕ ತರಬೇತಿ ಅಗತ್ಯವಿದ್ದು, ಪ್ರತಿ ಜಿಲ್ಲೆಯಲ್ಲೂ ಈ ಬಗೆಯ ಕೆಲಸಗಳನ್ನು ಮಾಡುವ ಸ್ವಯಂಸೇವಕರನ್ನು ರೂಪಿಸಬೇಕು ಎನ್ನುವುದು ಉದ್ದೇಶ. ಹೀಗಾಗಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಆಸಕ್ತರಿಗೆ ಎರಡು ದಿನದ ತರಬೇತಿ ಆಯೋಸಲಾಗುತ್ತದೆ ಎಂದು ಹೇಳಿದ್ದಾರೆ,

Key words: formation –Kannada- Volunteer –Force

ENGLISH SUMMARY…

Online training on how to write in Kannada: Kuvempu Bhaasha Bharathi Praadhikaara to form volunteers task force
Bengaluru, January 7, 2022 (www.justkannada.in): The State Government has come forward to form a Kannada volunteers task force to provide more Kannada inputs on the internet.
The Kuvempu Bhaasha Bharathi Praadhikaara has come up with a plan to ensure that any information on the internet would appear in Kannada. Presently almost all the information on the internet available is in English.
Speaking about this, Kuvempu Bhaasha Bharathi Praadhikaara President Ajjakkala Girish Bhat said that training will be provided to increase the availability of information in Kannada on the internet. “We have plans to be in touch with the task force people even after completion of this program and encourage them to continue contributing their efforts. We wish this activity would continue forever,” she explained.
The task force members will be given a stipend by the Praadhikaara. Anybody who is interested can provide their details on Google Forms (https://bit. ly/kbbpapin). Apart from stipend and certificate, an honorarium will be given to those who write stories on the spot, prizes will also be given for the best story.
Keywords: Kuvempu Bhaasha Bharathi Praadhikaara/ Kannada language/ Internet/ inputs