ಅಡ್ಜಸ್ಟ್ ಮೆಂಟ್ ರಾಜಕಾರಣ ಎಂಬ ಹೇಳಿಕೆ : ಹೆಚ್.ವಿಶ್ವನಾಥ್ ವಿರುದ್ಧ ಮಾಜಿ ಸಿಎಂ ಸಿದ್ಧರಾಮಯ್ಯ ಕಿಡಿ…

 

ಮೈಸೂರು,ಮಾರ್ಚ್,20,2021(www.justkannada.in):  ರಾಜ್ಯದಲ್ಲಿ ಅಡ್ಜೆಸ್ಟ್ ಮೆಂಟ್ ರಾಜಕಾರಣ ನಡೆಯುತ್ತಿದೆ ಎಂಬ ಎಂಎಲ್‌ಸಿ ಹೆಚ್. ವಿಶ್ವನಾಥ್ ಹೇಳಿಕೆಗೆ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.

ಮಾಜಿ ಜಿ.ಪಂ ಅಧ್ಯಕ್ಷ ಕೆಸಿ ಬಲರಾಮ್ ವಿಧಿವಶ ಹಿನ್ನಲೆ. ಬಲರಾಮ್ ಅಂತಿಮ ದರ್ಶನಕ್ಕಾಗಿ ಮೈಸೂರಿಗೆ ಆಗಮಿಸಿದ ಸಿದ್ದರಾಮಯ್ಯ ಮಾತನಾಡಿದರು. ಹೆಚ್.ವಿಶ್ವನಾಥ್ ಜೆಡಿಎಸ್ ರಾಜ್ಯಾಧ್ಯಕ್ಷ ಆದವನು, ಬಿಜೆಪಿ ಪಕ್ಷಕ್ಕೆ ಹೋಗಿದ್ದಾನೆ. ಇಂತವರಿಗೆ ಅಡ್ಜಸ್ಟಮೆಂಟ್ ರಾಜಕಾರಣದ ಬಗ್ಗೆ ಮಾತಾಡೋದಕ್ಕೆ ನೈತಿಕತೆ ಎಲ್ಲಿದೆ? ಅಂತವರ ಮಾತಿಗೆ ನಾನು ಉತ್ತರ ಕೊಡುವ ಅಗತ್ಯ ಇಲ್ಲ ಎಂದು ಕಿಡಕಾರಿದ್ದಾರೆ.

Former CM- Siddaramaiah- warns- implemented-anugraha
siddaramaih#profile..

ಬಲರಾಮ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ ಸಿದ್ದರಾಮಯ್ಯ, ಬಲರಾಮ್ ನನ್ನ ಜೊತೆ ರಾಜಕಾರಣ ಮಾಡಿಕೊಂಡು ಬಂದಿದ್ದರು. ಅವನು ಯಾವ ಚುನಾವಣೆಯನ್ನು ಸೋತಿರಲಿಲ್ಲ. ಅದನ್ನ ಹೆಚ್ಚು ಮನಸ್ಸಿಗೆ ತೆಗೆದುಕೊಂಡಿದ್ದಾನೆ. ಅವರ ಆತ್ಮಕ್ಕೆ ಶಾಂತಿ‌ ಕೋರುತ್ತೇನೆ ಎಂದರು.

ಬಿಎಸ್ ವೈ ವಿರುದ್ದ ಗುಡುಗಿದ ಸಿದ್ದರಾಮಯ್ಯ, ಮತಗಳೇನು ಯಡಿಯೂರಪ್ಪ ಜೇಬಿನಲ್ಲಿದಿಯಾ. ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಇದೆ. ಇದು ಕಾಂಗ್ರೆಸ್ ಅನುಕೂಲವಾಗಿದೆ. ಬಿಜೆಪಿ ಭ್ರಷ್ಟಾಚಾರದಲ್ಲಿ‌ ಮುಳುಗಿದೆ. ಜನರು 17 ರಂದು ಉತ್ತರ ಕೊಡಲಿದೆ. ಕಾಂಗ್ರೆಸ್ ಉಪಚುನಾವಣೆಗೆ ಎಲ್ಲಾ ಸಿದ್ದತೆ ಮಾಡಿಕೊಂಡಿದೆ. ಪ್ರತಾಪ್ ಗೌಡ ಪಕ್ಷ ಬಿಟ್ಟು ಹೋಗಿದ್ದಾನೆ. ಅವರಿಗೆ ನೈತಿಕತೆ ಇಲ್ಲ ಈ ವಿಚಾರಗಳೆಲ್ಲ ಚುನಾವಣೆ ಮುನ್ನೆಲೆಗೆ ಬರುತ್ತದೆ. ಬೆಳಗಾವಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸತೀಶ್ ಜಾರಕಿಹೊಳಿ‌ ಹೆಸರನ್ನು ಶಿಫಾರಸು ಮಾಡಿದ್ದೇವೆ. ಬಹುತೇಕ ಅವರ ಹೆಸರೆ ಅಂತಿಮವಾಗಲಿದೆ ಎಂದು ಹೇಳಿದರು.

ಮಾಜಿ ಸಚಿವ ಜಾರಕಿಹೊಳಿ ಸಿಡಿ ಪ್ರಕರಣ. ವಿಧಾನಸಭೆಯಲ್ಲಿ ಈ ವಿಚಾರ ರೈಸ್ ಮಾಡ್ತಿನಿ. ಸೋಮವಾರ ಈ‌ ವಿಚಾರವನ್ನ ರೈಸ್ ಮಾಡ್ತೀನಿ ಎಂದರು.
ಮೈಸೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ.

Key words: Statement – Adjustment Politics:- Former CM Siddaramaiah -i Against-H.Vishwanath