ಬೆಂಗಳೂರು,ಡಿಸೆಂಬರ್,28,2021(www.justkannada.in): ಒಮಿಕ್ರಾನ್ ಹೆಚ್ಚುತ್ತಿರುವ ಹಿನ್ನೆಲೆ ಇಂದಿನಿಂದ ರಾಜ್ಯದಲ್ಲಿ 10 ದಿನಗಳ ಕಾಲ ನೈಟ್ ಕರ್ಫ್ಯೂ ಜಾರಿಯಾಗುತ್ತಿದ್ದು ಜನರು ಸಹಕರಿಸುವಂತೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮನವಿ ಮಾಡಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಸಚಿವ ಡಾ.ಕೆ.ಸುಧಾಕರ್, ನೈಟ್ ಕರ್ಫ್ಯೂ ಅನ್ನು ವಿನಾಕಾರಣ ವಿರೋಧ ಮಾಡೋದು ಸರಿಯಲ್ಲ. ಜನರು ಮಾರ್ಗಸೂಚಿ ಪಾಲಿಸಿ ಸಹಕಾರ ನೀಡಬೇಕು. ಸರ್ಕಾರ ಸಾಧಕ ಬಾಧಕ ನೋಡಿ ನಿರ್ಧಾರ ಮಾಡಿದೆ. ಸದ್ಯ 10 ದಿನಕ್ಕೆ ನೈಟ್ ಕರ್ಫ್ಯೂ ಜಾರಿ ಇರುತ್ತೆ . ಸ್ಥಿತಿಗತಿ ನೋಡಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ಕಾಲ ಕಾಲಕ್ಕೆ ಸಂಬಂಧ ಪಟ್ಟ ಅಧಿಕಾರಿಗಳ ಜತೆ ಚರ್ಚಿಸುತ್ತೇವೆ. ಚರ್ಚಿಸಿದ ಬಳಿಕ ಕ್ರಮ ಕೈಗೊಳ್ಳುತ್ತೇವೆ. ಜನರು ಸಹಕಾರ ನೀಡಬೇಕು ಎಂದರು.
ಮಕ್ಕಳಿಗೂ ಕೋವಿಡ್ ಲಸಿಕೆ ನೀಡುವ ಕುರಿತು ಪ್ರತಿಕ್ರಿಯಿಸಿದ ಸಚಿವ ಡಾ.ಕೆ ಸುಧಾಕರ್, ನಮ್ಮಲ್ಲಿ ಕೋವ್ಯಾಕ್ಸಿನ್ ಲಸಿಕೆ ಹೆಚ್ಚು ಇಲ್ಲ. ಹೀಗಾಗಿ ಕೇಂದ್ರದ ಬಳಿ ಬೇಡಿಕೆ ಇಡುತ್ತೇವೆ . ರಾಜ್ಯದಲ್ಲಿ 43 ಲಕ್ಷ ಮಕ್ಕಳಿಗೆ ಕೋವ್ಯಾಕ್ಸಿನ್ ಲಸಿಕೆ ಅಗತ್ಯವಿದೆ ಎಂದರು.
Key words: 10 day -night curfew- today-situation – next decision -Minister -Dr. K. Sudhakar.
ENGLISH SUMMARY…
10 days night curfew begins from today: Minister Dr. K. Sudhakar says further decision will be taken after assessing the situation
Bengaluru, December 28, 2021 (www.justkannada.in): The State Government has imposed night curfew for days across State commencing from today, in the background of increasing cases of Omicron. Health and Medical Education Minister Dr. K. Sudhakar has requested the people of the state to cooperate.
Speaking in Bengaluru today, Dr. K. Sudhakar expressed his view that it is not right for those who are opposing the night curfew. “I request the people to follow the government rules and cooperate. We have decided after assessing all the aspects thoroughly. The night curfew will be for 10 days as of now. Further decisions will be announced after assessing the situation,” he added.
“We are discussing with the officials concerned and experts frequently and will take action accordingly,” he said.
In his reply to a question on the availability of COVID vaccine for children the Minister explained that there is no proper stock of Covaxin and hence have requested the Union Government to provide it. He informed that 43 lakh children in the state require vaccination.
Keywords: Health Minister Dr. K. Sudhakar/ COVID-19/ night curfew/ cooperate