ಮೈಸೂರು,ಜನವರಿ,20,2022(www.justkannada.in): IPO ಮೂಲಕ ಎಲ್ ಐಸಿ ಖಾಸಗೀಕರಣಗೊಳಿಸಲು ಮುಂದಾಗಿರುವ ಕೇಂದ್ರ ಸರ್ಕಾರ ನಡೆಯನ್ನ ಮೈಸೂರಿನಲ್ಲಿ ಎಲ್ ಐಸಿ ಸಿಬ್ಬಂದಿಗಳು ಖಂಡಿಸಿದರು.
ಖಾಸಗಿ ರಂಗದಲ್ಲಿದ್ದ ಜೀವ ವಿಮಾ ವಹಿವಾಟನ್ನು 1956 ರ ಜನವರಿ 19 ರಂದು ಒಂದು ಸುಗ್ರೀವಾಜ್ಞೆ ಹೊರಡಿಸುವ ಮೂಲಕ ಅಂದಿನ ಕೇಂದ್ರ ಸರ್ಕಾರ ರಾಷ್ಟ್ರೀಕರಣ ಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಜನವರಿ 19 ರ ದಿನವನ್ನು ಜೀವ ವಿಮಾ ಕ್ಷೇತ್ರದ ರಾಷ್ಟ್ರೀಕರಣ ದಿನಾಚರಣೆ ಎಂದು ಆಚರಿಸಲಾಗುತ್ತಿದೆ. ಈ ಹಿನ್ನೆಲೆ ಇಂದು, ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ, ಮೈಸೂರು ವಿಭಾಗ ವ್ಯಾಪ್ತಿಗೆ ಬರುವ ಐದು ಜಿಲ್ಲೆಗಳ ಎಲ್ ಐಸಿ ಕಛೇರಿಗಳಲ್ಲಿ ಎಲ್ ಐಸಿಯ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆ ಕರೆಯ ಮೇರೆಗೆ, ಸಾರ್ವಜನಿಕ ವಲಯ ಎಲ್ ಐಸಿಯ ಸಾಧನೆ, ದೇಶದ ಅಭಿವೃದ್ಧಿಗೆ ನೀಡುತ್ತಿರುವ ಅಮೂಲ್ಯ ಕೊಡುಗೆಗಳನ್ನು ಹೆಮ್ಮೆಯಿಂದ ಗಮನಿಸಲಾಯಿತು.
ಅಂತೆಯೇ, ಈ ಸಂಸ್ಥೆಯನ್ನು IPO ಮೂಲಕ ಖಾಸಗೀಕರಣಗೊಳಿಸಲು ಕೇಂದ್ರ ಸರ್ಕಾರ ಮುಂದಾಗುತ್ತಿರುವುದನ್ನು ತೀವ್ರವಾಗಿ ಖಂಡಿಸಲಾಯಿತು. ಸಾರ್ವಜನಿಕ ವಲಯ ವಿಮಾ ರಕ್ಷಣೆಯ ಆಂದೋಲನವನ್ನು ಇನ್ನಷ್ಟು ದೃಢತೆಯಿಂದ ಕೊಂಡೊಯ್ಯಲು ನಿರ್ಧರಿಸಲಾಯಿತು.
ಮೈಸೂರು ವಿಭಾಗೀಯ ಕಛೇರಿ ಯಲ್ಲಿ ನ ಉದ್ಯೋಗಿಗಳನ್ನು ಉದ್ದೇಶಿಸಿ ಎಲ್ ಐಸಿ ಯ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆಯ ಮೈಸೂರು ವಿಭಾಗದ ಮುಂದಾಳುಗಳಾದ ಮೆಹಬುಬ್ ಪಾಶ, ಬಿ. ಜಿ. ಬಾಲಾಜಿ ಮತ್ತು ಎಸ್. ಎಸ್. ನಾಗೇಶ್ ಮಾತನಾಡಿದರು. ಎಸ್ ಕೆ ರಾಮು ನಿರ್ವಹಣೆ ಮಾಡಿದರು.
Key words: Mysore -condemns -Center – LIC -privatization