ಬೆಂಗಳೂರು,ನವೆಂಬರ್,26,2021(www.justkannada.in): ಕೊರೋನಾ ಲಾಕ್ ಡೌನ್ ನಿಂದಾಗಿ ರಾಜ್ಯದಲ್ಲಿ ಶಾಲಾ-ಕಾಲೇಜುಗಳು ತಡವಾಗಿ ಆರಂಭವಾಗಿವೆ. ಈ ಮಧ್ಯೆ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ಶೈಕ್ಷಣಿಕ ವರ್ಷ ವಿಳಂಬ ಹಿನ್ನೆಲೆ ಪಠ್ಯ ಕಡಿತಕ್ಕೆ ಶಿಕ್ಷಣ ಇಲಾಖೆ ಮುಂದಾಗಿದೆ ಎನ್ನಲಾಗಿದೆ.
ಎಸ್.ಎಸ್ ಎಲ್ ಸಿಯ ಶೇ.20 ರಷ್ಟು ಪಠ್ಯ ಕಡಿತ ಮಾಡಿ ಶೇ.80 ರಷ್ಟು ಪಠ್ಯ ಬೋಧನೆಗೆ ಶಿಕ್ಷಣ ಇಲಾಖೆ ಮುಂದಾಗಿದೆ ಎಂದು ಹೇಳಲಾಗುತ್ತಿದೆ. ರಾಜ್ಯದಲ್ಲಿ ಕೊರೋನಾ 2ನೇ ಅಲೆ ಹೆಚ್ಚಿದ ಹಿನ್ನೆಲೆಯಲ್ಲಿ ಲಾಕ್ ಡೌನ್ ಮಾಡಲಾಗಿತ್ತು. ಇದರಿಂದಾಗಿ ಈ ಬಾರಿಯೂ ಶೈಕ್ಷಣಿಕ ವರ್ಷ ತಡವಾಗಿ ಆರಂಭವಾಗಿದೆ.
ಪ್ರತಿ ವರ್ಷ 240 ದಿನ ಬೋಧನಾ ಅವಧಿ ಸಿಗುತ್ತಿತ್ತು. ಈ ಬಾರಿ 140ಕ್ಕಿಂತ ಕಡಿಮೆ ದಿನಗಳ ಅವಧಿ ಸಿಕ್ಕಿದೆ. ಹೀಗಾಗಿ ಶಿಕ್ಷಕರು ಒತ್ತಡದಲ್ಲಿ ಬೇಗ ಪಾಠ ಮುಗಿಸಲು ಮುಂದಾಗಿದ್ದಾರೆ. ಅದ್ಧರಿಂದ ಪಠ್ಯ ಕಡಿಮೆ ಮಾಡುವಂತೆ ಶಿಕ್ಷಕರು ಒತ್ತಾಯಿಸಿದ್ಧಾರೆ. ಇನ್ನು ಇಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿಸಿ ನಾಗೇಶ್ ಅಂತಿಮ ಸಭೆ ನಡೆಸಿ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.
Key words: Education – Department – SSLC- text -reduction.