ಬೆಳಗಾವಿ,ಡಿಸೆಂಬರ್,15,2021(www.justkannada.in): ಶಾಸಕ ಎಸ್.ಎ ರಾಮದಾಸ್ ಇಂದು ಬೆಳಗಾವಿಯಲ್ಲಿ ಎ.ಆರ್.ಟಿ ಸೆಂಟರ್ ಗೆ ಭೇಟಿ ನೀಡಿ ಅಲ್ಲಿನ ಮುಖ್ಯಸ್ಥರು ಸಿಬ್ಬಂದಿಗಳೊಂದಿಗೆ ಸಭೆ ನಡೆಸಿ ಚರ್ಚಿಸಿದರು.
ಬೆಳಗಾವಿ ಅಧಿವೇಶನದಲ್ಲಿ ಶಾಸಕ ಎಸ್.ಎ ರಾಮದಾಸ್ ಪಾಲ್ಗೊಂಡಿದ್ದು, ಇಂದು ಬಿಡುವಿನ ವೇಳೆಯಲ್ಲಿ ಎ.ಆರ್.ಟಿ ಸೆಂಟರ್ ಗೆ ಭೇಟಿ ನೀಡಿ ಅಲ್ಲಿನ ಮುಖಸ್ಥರೊಂದಿಗೆ ಸಿಬ್ಬಂದಿಗಳೊಂದಿಗೆ ಸಭೆ ನಡೆಸಿದರು.
ವಿಶೇಷವಾಗಿ ಹೆಣ್ಣುಮಕ್ಕಳು ಈ ವೃತ್ತಿಗೆ ಇಳಿಲಿಕ್ಕೆ ಆರೋಗ್ಯದ ದೃಷ್ಟಿಯಿಂದ ಜಾಗೃತಿ ಕೊಡುವಂತದ್ದು. ಪುಟ್ಟ ಪುಟ್ಟ ಮಕ್ಕಳಿನಿಂದ ಹಿಡಿದು ದೊಡ್ಡವರ ವರೆಗೂ ಈ ಸಮಸ್ಯೆ ಹೆಚ್ಚಾಗುತ್ತಿದೆ ಈ ಸಮಸ್ಯೆಯಿಂದ ಹೊರಬರಲು ವಿಶೇಷವಾಗಿ ಜಾಗೃತಿ ನಿರ್ಮಾಣ ಮಾಡುವುದು ಹಾಗೂ ಆರೋಗ್ಯದ ದೃಷ್ಟಿಯಿಂದ ಮುಖ್ಯವಾಹಿನಿಗೆ ತರುವ ಪ್ರಯತ್ನ ಮಾಡಬೇಕು, ಮತ್ತೆ ಮುಂದೆ ಮಕ್ಕಳುಗಳು ಈ ರೀತಿ ಚಟಕ್ಕೆ ಬಲಿಯಾಗದೆ ಇರುವ ರೀತಿಯಲ್ಲಿ ಶಾಲಾ ಮಟ್ಟದಲ್ಲಿಯೇ ಒಂದು ಕೌನ್ಸೆಲಿಂಗ್ ಅನ್ನು ನಡೆಸಬೇಕು ಎಂಬುದರ ಬಗ್ಗೆ ಚರ್ಚೆ ನಡೆಯಿತು. ಹಲವು ವಿಚಾರಗಳ ಬಗ್ಗೆ ಶಾಸಕ ಎಸ್.ಎ ರಾಮದಾಸ್ ಚರ್ಚಿಸಿದರು.
ಈ ವೇಳೆ ಜಿಲ್ಲಾ ಸರ್ಜನ್ ಡಾ.ಸುಧಾಕರ್, ಆರ್.ಎಂ.ಓ ಡಾ.ಕೇಶವ್, ಮೆಡಿಕಲ್ ಆಫೀಸರ್, ಹೆಚ್ ಐ ವಿ ಸೋಂಕಿತರ ಕೌನ್ಸಿಲರ್ ರತ್ನ , ಡಾ.ವೀರೇಶ್, MSM ಪ್ರತಿನಿಧಿ ಗಣೇಶ್, ಸ್ಪಂದನಾ ನೆಟ್ವರ್ಕ್ ನ ಕಸ್ತೂರಿ, ಹಾಗೂ ಎ.ಆರ್.ಟಿ ಸೆಂಟರ್ ನ ಕಚೇರಿ ಸಿಬ್ಬಂದಿ ಹಾಜರಿದ್ದರು.
Key words: belgavi-MLA- SA Ramadas-visit- ART Center – meeting- with -staff.