ಬೆಂಗಳೂರು,ಡಿಸೆಂಬರ್,8,2021(www.justkannada.in): ಈಗ ಅತಿ ಹೆಚ್ಚು ಕೆಲ್ಸಗಾರರನ್ನ ತಗೊತಿರೋ ಸೆಕ್ಟರ್ ಯಾವುದು ಅಂತ ಕೇಳಿದ್ರೆ ಅದು IT ಅಂತ ನಿಸ್ಸಂಶಯವಾಗಿ ಹೇಳಬಹುದು . ಯಾವುದೇ ಸೆಕ್ಟರ್ ಇರ್ಲಿ ಅದಕ್ಕೆ ಡಿಜಿಟಲ್ ಟ್ರಾನ್ಸ್ ಫರ್ಮೇಶನ್ ಅನ್ನೋದು ಕಡ್ಡಾಯ ಅನ್ನೋ ತರ ಆಗಿದೆ. ಸಹಜವಾಗಿ IT ಯಲ್ಲೇ ಅತಿ ಹೆಚ್ಚು ಕೆಲಸಗಳು ಮತ್ತೆ ಅದಕ್ಕೆ ತಕ್ಕ ಸಂಬಳ ಎರಡು ಸಿಗ್ತಾ ಇದೆ.
ಇನ್ನು ಕನ್ನಡಿಗರು ಎಷ್ಟು ಇದರ ಲಾಭ ಪಡಿತಾ ಇದ್ದಾರೆ ಅಂತ ನೋಡಿದ್ರೆ ಹೇಳಿಕೊಳ್ಳೋವಂತ ಸಾಧನೆ ಏನಿಲ್ಲ. ಕಳೆದ ಹತ್ತು ವರ್ಷದಿಂದ ಸಾಫ್ಟ್ವೇರ್ ಉದ್ಯಮದಲ್ಲಿ ಕೆಲ್ಸ ಗಿಟ್ಟಿಸ್ತಿರೋರ ಲೆಕ್ಕ ತೆಗದ್ರ್ರೆ ಹೆಚ್ಚಿನವರು ತಮಿಳರು, ತೆಲುಗರು,ಮಲಯಾಳಿಗಳು. ಇತ್ತೀಚೆಗೆ ಉತ್ತರ ಭಾರತದವರು.
ಯಾಕೆ ಹೀಗೆ ಅಂತ ತುಂಬಾ ಸಲ ಯೋಚಿಸಿದ್ ಇದೆ. ಒಂದಷ್ಟು ಕಾರಣ ಪಟ್ಟಿ ಮಾಡೋದಾದ್ರೆ ಮೊದಲನೆಯದು ಮಾಹಿತಿಯ ಕೊರತೆ. ಎರಡನೆದು networking ಮಾಡ್ಬೇಕು ಅನ್ನೋದು ಗೊತ್ತೇ ಇಲ್ಲ. ಮೂರನೆದು ಅವರನ್ನ ನಾನ್ಯಾಕೆ ಕೇಳ್ಬೇಕು ಅನ್ನೋ ಅಹಂ. ಪೂರ್ವ ತಯಾರಿ ಇಲ್ದೆ ಕೆಲ್ಸ ಹುಡುಕೋದು.ಮತ್ತೆ ಕನ್ನಡಿಗರು ಮ್ಯಾನೇಜರ್ ಪೋಸ್ಟ್ ಗಳಲ್ಲಿ ಕಡಿಮೆ ಕಾಣಸಿಗೋದು
ಮಾಹಿತಿ ಕೊರತೆ ಹೇಗ್ ಅಂತೀರಾ. ನೀವು linkedin ಅನ್ನೋ ಕೆಲ್ಸ ಹುಡುಕೋ ಸಾಮಾಜಿಕ ಜಾಲತಾಣದಲ್ಲಿ ಎಷ್ಟು ಜನ ಫ್ರೆಶರ್ ಕನ್ನಡಿಗರು ಅಕೌಂಟ್ ಮಾಡಿದ್ದಾರೆ ಅಥವಾ ಕೆಲ್ಸದ ಮಾಹಿತಿ ಹಾಕೋ ಗುಂಪುಗಳಿಗೆ ಸೇರಿದ್ದಾರೆ ಅಂತ ನೋಡಿದ್ರೆ ನಾ ಹೇಳೋದು ಗೊತ್ತಾಗತ್ತೆ.
ಫೇಸ್ಬುಕ್ನಲ್ಲೇ ಹಲವಾರು ಕೆಲ್ಸ ಹುಡುಕೋಕೆ ಅಂತಲೇ ಮಾಡಿಕೊಂಡಿರೋ ಗುಂಪಿವೆ ಅದ್ರಲ್ಲಿ ಉತ್ತರ ಭಾರತದಿಂದ ಬೆಂಗಳೂರಿಗೆ ಬಂದು ಇಲ್ಲಿ ಕೆಲ್ಸ ಹುಡುಕಾಟದಲ್ಲಿರೋರೆ ತುಂಬಿ ಹೋಗಿದ್ದಾರೆ.
ಮತ್ತೊಂದು ನೆಟ್ವರ್ಕಿಂಗ್, ಫ್ರೆಶರ್ಸ್ ಕೆಲ್ಸ ಹುಡುಕೋಕೆ ಶುರು ಮಾಡಿದ್ಮೇಲೆ ಅವರಿಗೆ ಈಗಾಗ್ಲೇ ಅಲ್ಲೆ ಕೆಲ್ಸ ಮಾಡ್ತಿರೋರು ಮಾರ್ಗದರ್ಶಕರಾಗಿ ಸಿಕ್ರೆ ವರ್ಷದಲ್ಲಿ ಸಿಗೋ ಕೆಲ್ಸ ಆರು ತಿಂಗಳಿಗೆ ಸಿಗಬಹುದು ಯಾಕಂದ್ರೆ ಅಲ್ಲಿ ಕೆಲ್ಸ ಮಾಡ್ತಿರೋರಿಗೆ ಈಗಿನ ಟ್ರೆಂಡ್ ನ ಪರಿಚಯ ಇರತ್ತೆ ಯಾವ skillset ಚಾಲ್ತಿಯಲ್ಲಿದೆ ಅನ್ನೋದು ಗೊತ್ತಿರತ್ತೆ. ಆದ್ದರಿಂದ networking ಬಹಳನೇ ಮುಖ್ಯ. ನನಗೆ IT ಕೆಲ್ಸ ಹುಡುಕ್ತಾ ಇದ್ದಾರೆ ಅಂತ ಕೇಳಿ ಬಂದವ್ರಿಗೆ ಆದಷ್ಟು ನನಗೆ ಗೊತ್ತಿರೋ ವಿಷ್ಯ ಹೇಳಿ ಕಳ್ಸಿದ್ದೀನಿ.
ಇನ್ನು ಮೂರನೆದು ನಾನ್ಯಾಕೆ ಕೇಳ್ಬೇಕು ಅನ್ನೋದು ಇದು ಫ್ರೆಶರ್ ನಲ್ಲಿ ಕಡಿಮೆ ಇದ್ರು ಈಗಾಗಲೇ ಒಂದಶ್ಟು ವರ್ಷ IT ಲಿ ಇದ್ದು ಬದಲಾವಣೆ ಬಯಸ್ತಿರೋರು ಮಾಡೋ ತಪ್ಪು.
ಮತ್ತೊಂದು ಕನ್ನಡಿಗರು ಹೆಚ್ಚಾಗಿ ಮ್ಯಾನೇಜರ್ ಹುದ್ದೆ ಅಲಂಕರಿಸದೆ ಇರೋದು. ಈಗ ಎರಡು ರೀತಿಲಿ ಮ್ಯಾನೇಜರ್ ಆಗಬಹುದು ಮೊದಲನೆದು MBA ಮಾಡಿ ಆಗೋದು. ಈ ರೀತಿ ಆಗೋರು ಹೆಚ್ಚಿನವರು ಉತ್ತರ ಬಾರತೀಯರೆ. ಬೆಂಗಳೂರಲ್ಲೆ IIM ಇದೆ ಎಷ್ಟು ಜನ ಕನ್ನಡಿಗರು ಸೇರಿದ್ದಾರೆ ಡೇಟಾ ನೋಡಿ ತಿಳಿಯುತ್ತೆ.
ಮತ್ತೊಂದು ಸುಮಾರ್ ವರ್ಷ ಟೆಕ್ನಿಕಲ್ ವಿಭಾಗದಲ್ಲಿ ಇದ್ದು . ಅವರ ಅನುಭವದಮೇಲೆ ಮ್ಯಾನೇಜರ್ ಆಗೋದು.ಇಲ್ಲೂ ನಮ್ಮವರ ಸಂಖ್ಯೆ ಕಡಿಮೆಯೇ.
ಇಷ್ಟೆಲ್ಲ ಯಾಕೆ ಹೇಳಿದೆ ಅಂದ್ರೆ covid ಬಂದ ನಂತರದ ಕಳೆದ ಎರಡು ವರ್ಷದಲ್ಲಿ IT ಯಲ್ಲಿ ಭಾರಿ ಬದಲಾವಣೆ ಆಗಿದೆ. 2020 ರಲ್ಲಿ ಆರ್ಥಿಕ ಹೊಡೆತ ಮತ್ತೆ ಭಯ ಎರಡು ಕಾರಣದಿಂದ ಹೊಸ ಕೆಲಸಗಾರರನ್ನ ತಗೊಳ್ಳಿಲ್ಲ.ಹಲವರು ಕೆಲ್ಸ ಕಳ್ಕೊಂಡ್ರು ಮತ್ತೆ ಲಕ್ಷಾಂತರ ಮಂದಿ ಕೆಲಸ ಮಾಡೋ ಬಹುರಾಷ್ಟ್ರೀಯ ಕಂಪನಿಗಳು ಕೋವಿಡ್ ಕಾರಣ ಹೇಳಿ ಹೈಕ್ ತಡೆ ಹಿಡಿದ್ರು. ಇದ್ದ ಎಂಪ್ಲಾಯೀಗಳಿಗೆ ಬೆಂಕಿ ಬಿತ್ತು ಅವರ ಡೊಮೈನ್ ಅನುಭವದ ಮೇಲೆ ಕೆಲ್ಸ ಹುಡುಕೋಕೆ ಶುರು ಮಾಡಿದ್ರು. ಒಬ್ಬೊಬ್ಬರಿಗೆ 3 -5 ಆಫರ್ ಅದು ಅವರು ಕೇಳಿದ ಸಂಬಳಕ್ಕೆ ಸಿಗೋಕೆ ಶುರು ಆಯ್ತು.
ಇನ್ಫೋಸಿಸ್,ವಿಪ್ರೋ, ಕಾಗ್ನಿಝನ್ಟ್, ಟಿಸಿಎಸ್ಸ್ ಹೀಗೆ ದೊಡ್ದ ಕಂಪನಿಯ attrition rate(ಬಿಟ್ಟು ಹೋದವರ ಸೂಚ್ಯಂಕ) 30% ದಾಟಿದೆ ಕಳೆದ 6 ತಿಂಗಳಲ್ಲಿ ಅಂತ ಮಾಹಿತಿ. ಇದನ್ನ ಸರಿದೂಗಿಸೋಕೆ ಹೆಚ್ಚು ಫ್ರೆಶರ್ಸ್ ತಗೊತೀವಿ ಅಂತ ಈ ಕಂಪನಿಗಳು ಹೇಳಿವೆ. ಇನ್ಫೋಸಿಸ್ 25000 ಜನರನ್ನ ತಗೋಬೇಕು ಅಂತಿದ್ದೋರು ಈಗ 45000 ತಗೋತಾರಂತೆ. ಇದರ ಲಾಭ ಕನ್ನಡಿಗರು ಪಡೆಯಲಿ ಅಂತ ಕಳಕಳಿ ಅಷ್ಟೇ . ನಿಮ್ಮ ಪರಿಚಯದ ವಲಯದಲ್ಲಿ ಕೆಲಸ ಹುಡಕ್ತಾ ಇರೋರಿಗೆ ಸಹಾಯ ಮಾಡಿ.
ನಲ್ಬರಹ: ವಿನಯ್ ಗೌಡ
Key words: This – reason –why- there – no millennials – IT sector.