ಒಳ ಮೀಸಲಾತಿ ಪರ ಮಾಜಿ ಸಿಎಂ ಎಚ್ಡಿಕೆ ಬ್ಯಾಟಿಂಗ್

ಬೆಂಗಳೂರು,ಆಗಸ್ಟ್,30,2020(www,justkannada.in) : ಒಳಮೀಸಲಾತಿ “ಸರ್ವರಿಗೂ ಸಮಪಾಲು ಸಮಬಾಳು” ಎಂಬ ಸಂವಿಧಾನಿಕ ಮೂಲ ಧಾತುವೇ ಆಗಿದ್ದು, ಅದನ್ನು ಜಾರಿಗೊಳಿಸುವಲ್ಲಿ  ರಾಜ್ಯ ಸರ್ಕಾರ  ಪರಿಶಿಷ್ಟ ಜಾತಿ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಾರಿಗೊಳಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

jk-logo-justkannada-logo

ತುಳಿತಕ್ಕೊಳಗಾದ ಎಲ್ಲಾ  ಜಾತಿಗಳಿಗೂ ಮೀಸಲಾತಿಯ ಫಲ ದಕ್ಕಬೇಕು ಎಂಬ ಸುಪ್ರೀಂ ಕೋರ್ಟುನ ಆಶಯ ಒಳಮೀಸಲಾತಿಯ ಪರವಾದ ನಿಲುವಾಗಿದೆ. ಅದನ್ನು ಜಾರಿಗೊಳಿಸುವುದು ಸಾಮಾಜಿಕ ನ್ಯಾಯದ  ಪರಿಪಾಲನೆಯ ಕರ್ತವ್ಯವಾಗುತ್ತದೆ ಎಂದಿದ್ದಾರೆ.

Former,CM,HDK,batting,inside,reservation

ಮೇಲ್ಜಾತಿಯಲ್ಲಿನ ಬಡವರಿಗೆ  ಶೇ.1೦ ರಷ್ಟು ಮೀಸಲಾತಿಯನ್ನು ಜಾರಿಗೆ ತಂದ ಕೇಂದ್ರದ ಬಿಜೆಪಿ ಸರ್ಕಾರ ಪರಿಶಿಷ್ಟ ಜಾತಿ, ಹಿಂದುಳಿದ ವರ್ಗಗಳಲ್ಲಿನ ಅವಕಾಶವಂಚಿತರಿಗೆ  ಒಳಮೀಸಲಾತಿ ಜಾರಿಗೆ ತರಬಾರದೇಕೆ? ಎಂದು ಪ್ರಶ್ನಿಸಿದ್ದಾರೆ.

ಸ್ವತಃ ಹಿಂದುಳಿದವರ್ಗದವರೇ ಆಗಿರುವ ಪ್ರಧಾನಿಗಳು ಸಾಮಾಜಿಕ ನ್ಯಾಯವನ್ನು ಅನುಷ್ಠಾನಗೊಳಿಸುವ ಮೂಲಕ ಸಮಬಾಳು-ಸಮಪಾಲು ಎಂಬ ತತ್ವವನ್ನು ಎತ್ತಿಹಿಡಿಯಬೇಕಾಗಿದೆ. ಶೋಷಿತ ವರ್ಗದಲ್ಲೂ ಸ್ಪೃಶ್ಯ ಸಮುದಾಯ ಅಸ್ಪೃಶ್ಯರನ್ನು ಹತ್ತಿರ ಬಿಟ್ಟು ಕೊಳ್ಳದ ಪರಿಸ್ಥಿತಿ ಈಗಲೂ ಇದೆ ಎಂದು ವಿವರಿಸಿದ್ದಾರೆ.

ಪರಿಶಿಷ್ಟಜಾತಿಗಳಲ್ಲಿ ಒಳಮೀಸಲಾತಿ ಜಾರಿಗೊಳಿಸುವ ಬಗ್ಗೆ ರಾಜ್ಯ ಸರ್ಕಾರ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು. ಒಳಮೀಸಲಾತಿ ವಿಚಾರದಲ್ಲಿ  ತುಟಿಗೆ ತುಪ್ಪ ಸವರುವ  ನೀತಿಗಳನ್ನು ಸರ್ಕಾರಗಳು ಇನ್ನಾದರೂ ಬಿಡಬೇಕು ಎಂದು ಟೀಕಿಸಿದ್ದಾರೆ.

ಅಂಕ ಕಂಡಾ, ಕೋಲಾಸೆ ಮತ್ತೇಕಯ್ಯಾ, ಲೆಂಕ ಕಂಡಾ, ಪ್ರಾಣದಾಸೆ ಮತ್ತೇಕಯ್ಯಾ ಭಕ್ತ ಕಂಡಾ, ತನುಮನಧನದಾಸೆ ಮತ್ತೇಕಯ್ಯಾ ನಿಮ್ಮ ಅಂಕೆಗೆ ಝಂಕೆಗೆ ಶಂಕಿತನಾದೆಡೆ ಎನ್ನ ಲೆಂಕತನಕ್ಕೆ ಹಾನಿ ಕೂಡಲಸಂಗಮದೇವಾ ಎಂದು ವಚನವನ್ನು ಟ್ವಿಟರ್ ನಲ್ಲಿ ಫೋಸ್ಟ್ ಮಾಡಿದ್ದಾರೆ.

key words : Former-CM-HDK-batting-inside-reservation