ವಾರಣಾಸಿ,ಡಿಸೆಂಬರ್,13,2021(www.justkannada.in): ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಐದು ಲಕ್ಷ ಚದರ ಅಡಿ ವ್ಯಾಪ್ತಿಯ ಕಾಶಿ ವಿಶ್ವನಾಥ ಕಾರಿಡಾರ್ ಅನ್ನು ಲೋಕಾರ್ಪಣೆಗೊಳಿಸಿದರು.
ಎರಡು ದಿನಗಳ ಭೇಟಿಗಾಗಿ ಸೋಮವಾರ ಬೆಳಗ್ಗೆ ವಾರಣಾಸಿಗೆ ಆಗಮಿಸಿದ ಪ್ರಧಾನಿ ಮೋದಿ ಅವರನ್ನು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರು ಸ್ವಾಗತಿಸಿದರು. ನಂತರ ಪ್ರಧಾನಿ ನರೇಂದ್ರ ಮೋದಿ ಕಾಲಭೈರವೇಶ್ವರ ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಎಂ ಯೋಗಿ ಆದಿತ್ಯನಾಥ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆಯನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕಾಶಿ ಕಾರಿಡಾರ್ ಯೋಜನೆ ಕಾರ್ಮಿಕರಿಗೆ ಆಭಿನಂದನೆ ಸಲ್ಲಿಸಿದರು. ಕಾಶಿ ಅಭಿವೃದ್ಧಿ ಯೋಜನೆ ಯಾವುದೇ ಅಡೆತಡೆ ಆಗಿಲ್ಲ. ಕಾಶಿಯಲ್ಲಿ ಪ್ರೇಮವೇ ಪರಂಪರೆಯಾಗಿದೆ. ಕಾಶಿಯ ಪ್ರತಿಯೊಂದು ಕಲ್ಲು ಈಶ್ವರನ ಪ್ರತಿರೂಪವಾಗಿದೆ. ಕಾಶಿಯಲ್ಲಿ ಪ್ರತಿ ಜೀವಿಯಲ್ಲೂ ದೇವರ ದರ್ಶನವಾಗುತ್ತೆ. ಇನ್ನು ಕಾಶಿ ನಾಲ್ವರು ಜೈನ ತೀರ್ಥಂಕರರ ಜನ್ಮಭೂಮಿಯಾಗಿದೆ. ಈ ಕಾಶಿ ಪ್ರವಾಸ ಜೀವನದ ಒಂದು ಭಾಗ ಎಂದು ನುಡಿದರು.
‘ಔರಂಗಜೇಬ್ ಕಾಶಿ ಮೇಲೆ ದಾಳಿ ಮಾಡಿ ವಿಘ್ನ ಮಾಡಿದ್ದ. ಮಹಾರಾಷ್ಟ್ರದ ಅಹಲ್ಯಾಬಾಯಿ ಹೋಲ್ಕರ್ ಅದನ್ನ ಪುನರ್ನಿರ್ಮಾಣ ಮಾಡಿದರು. ಇಂದು ಇಡೀ ವಿಶ್ವ ಕಾಶಿಯೊಂದಿಗೆ ಸಂಪರ್ಕ ಹೊಂದಿದೆ. ಕಾಶಿಯಲ್ಲಿ ಶತಮಾನಗಳ ಪರಂಪರೆ ಮುಂದುವರೆದಿದೆ. ಹಿಂದಿನ ಕಾಶಿಗಾಗಿ ಏನು ಮಾಡಿರಲಿಲ್ಲ’ ಎಂದು ಪ್ರಧಾನಿ ಮೋದಿ ತಿಳಿಸಿದರು.
Key words: prime minister- Modi- Kashi Vishwanath –Corridor-innuagration