ಮೈಸೂರು,ಡಿಸೆಂಬರ್,13,2021(www.justkannada.in): ಪ್ರಧಾನಿ ನರೇಂದ್ರ ಮೋದಿ ಇಂದು ಉತ್ತರ ಪ್ರದೇಶದ ವಾರಣಾಸಿಯಲ್ಲಿ ಕಾಶಿ ವಿಶ್ವನಾಥ ಕಾರಿಡಾರ್ ಲೋಕಾರ್ಪಣೆ ಮಾಡುತ್ತಿದ್ದು ಈ ಕುರಿತು ಮಾತನಾಡಿರುವ ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್, ಪ್ರಧಾನಿ ಮೋದಿ ಅವರ ಕಾರ್ಯ ಸ್ವಾಗತ, ಅರ್ಹ. ಇಷ್ಟು ಬಹುದೊಡ್ಡ ಕಾರ್ಯಕ್ರಮದಲ್ಲಿ ಒಂದು ಲೋಪ ಆಗಿದೆ ಎಂದಿದ್ದಾರೆ.
ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಹೆಚ್.ವಿಶ್ವನಾಥ್, ವಾರಣಾಸಿ ಜೀರ್ಣೋದ್ದಾರ ಮಾಡಿದವರನ್ನು ಇಲ್ಲಿ ಮರೆಯಲಾಗಿದೆ. ಸಾವಿರಾರು ವರ್ಷಗಳ ಹಿಂದೆ ರಾಜ ಮಹಾರಾಜರ ದಾಳಿಗೆ ಕಾಶಿ ತುತ್ತಾಗಿ ಹಾಳಾಗಿತ್ತು. ಅದನ್ನು ಇಂದೂರಿನ ಮಹಾರಾಣಿ ಅಹಲ್ಯ ಬಾಯಿ ಔರ್ಕರ್ ರಕ್ಷಣೆ ಮಾಡಿದರು. ಯುದ್ದಕ್ಕೆ ಬದಲಾಗಿ ಬುದ್ದಿವಂತಿಕೆಯಿಂದ ಕಾಶಿ ವಿಶ್ವನಾಥ ದೇವಾಲಯ ಉಳಿಸಿದರು. ಮೊದಲ ಹಿಂದೂ ಧ್ವಜವನ್ನು ಹಾರಿಸಿದವರು ಅಹಲ್ಯ ಬಾಯಿ ಔರ್ಕರ್. ಅವರು ಯಾವಾಗಲೂ ಶಿವನ ಹೆಸರಿನಲ್ಲೇ ಆಡಳಿತ ಮಾಡಿದವರು. ಅವರನ್ನು ಪ್ರಧಾನಿ ಮೋದಿ ಹಾಗೂ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಮರೆತಿದ್ದಾರೆ. ಇದು ಚರಿತ್ರೆಯನ್ನು ಮರೆತಂತಾಗಿದೆ. ನೀವು ಚರಿತ್ರೆ ಮುಚ್ಚಿ ಹಾಕಲು ಹೊರಟಿದ್ದೀರಾ. ತಕ್ಷಣದಲ್ಲಿ ಆ ಸ್ಥಳದಲ್ಲಿ ಅಹಲ್ಯ ಬಾಯಿ ಔರ್ಕರ್ ಪ್ರತಿಮೆ ಸ್ಥಾಪಿಸಿ. ವಾರಣಾಸಿ ಏರ್ಪೋರ್ಟ್ ಗೆ ಅಹಲ್ಯ ಬಾಯಿ ಔರ್ಕರ್ ಹೆಸರಿಡಿ ಎಂದು ಪ್ರಧಾನಿ ನರೇಂದ್ರ ಮೋದಿಗೆ ಮನವಿ ಮಾಡಿದರು. ಕ್ರೈಸ್ತರಿಗೆ ವ್ಯಾಟಿಕನ್, ಮುಸ್ಲೀಮರಿಗೆ ಮೆಕ್ಕಾ ಇದ್ದಂತೆ ಹಿಂದೂಗಳಿಗೆ ಕಾಶಿ ಎಂದರು.
ತಮ್ಮ ವಿಶ್ವನಾಥ ಹೆಸರಿನ ರಹಸ್ಯ ಹೇಳಿದ ಎಚ್ ವಿಶ್ವನಾಥ್.
ಇದೇ ವೇಳೆ ತಮ್ಮ ವಿಶ್ವನಾಥ ಹೆಸರಿನ ರಹಸ್ಯ ಹೇಳಿದ ಎಂಎಲ್ ಸಿ ಎಚ್. ವಿಶ್ವನಾಥ್. ಮಗು ಸಾವನ್ನಪ್ಪಬಾರದು ಅಂತಾ ನಮ್ಮಪ್ಪ ಹರಕೆ ಹೊತ್ತಿದ್ದರು. ಕಾಶಿಗೆ ಹೋಗಿ ಹರಕೆ ಹೊತ್ತು ನನ್ನ ಹೆಸರು ಇಟ್ಟರು. ಕಾಶಿಯಲ್ಲಿ ಮೋಕ್ಷ ಪಡೆಯಲು ಎಲ್ಲರು ಹಂಬಲಿಸುತ್ತಾರೆ. ಮುಸ್ಲಿಂರಿಗೆ ಮೆಕ್ಕಾ ಇದ್ದಂತೆ ಕ್ರೈಸ್ತರಿಗೆ ರೋಮ್ ಇದ್ದಂತೆ. ಹಿಂದೂಗಳಿಗೆ ಕಾಶಿ ಪವಿತ್ರವಾದದ್ದು ಎಂದರು.
ಉತ್ತರ ಪ್ರದೇಶದಲ್ಲಿ ಒಂದುವರೆ ಕೋಟಿ ಜನ ಕುರುಬರು ಇದ್ದಾರೆ. ಕುರುಬ ಜನಾಂಗಕ್ಕೆ ಸೇರಿದ ಅಹಲ್ಯಾಬಾಯಿ. ಅವರನ್ನು ಮರೆತಿರುವುದು ಪ್ರಮಾದ. ಕಾಗಿನೆಲೆ ಸ್ವಾಮಿಗಳ ಜಗದ್ಗುರುಗಳನ್ನು ಮರೆತಿದ್ದೀರಾ.? ಕುರುಬರು ನಿಮಗೆ ಅಫೇಥ್ಯವಾಗುತ್ತಿದ್ದಾರಾ.? ಯಾಕೆ ಕುರುಬರನ್ನು ನೀವು ಮರೆಯುತ್ತಿದ್ದೀರಾ. ನಿರಂಜನಾಪುರಿ ಪ್ರಸನ್ನ ಸ್ವಾಮಿಗಳನ್ನು ಕರೆದಿಲ್ಲ. ಬಸವರಾಜ ಬೊಮ್ಮಾಯಿ ಸಹಾ ಮರೆತುಬಿಟ್ಟರಾ.? ನಮ್ಮದು ಸಹ ದೊಡ್ಡ ಮಠ. ಹಾವೇರಿ ಕಲಬುರಗಿ ರಾಯಚೂರು ಸೇರಿ ನಾಲ್ಕು ಕಡೆ ಇದೆ. ನಮ್ಮ ಕಾಗಿನೆಲೆ ಪಕ್ಕಾ ಹಿಂದೂಗಳ ಮಠ. ಮೊದಲ ಸ್ವಾಮಿಗಳು ಪಕ್ಕಾ ಆರ್ ಎಸ್ ಎಸ್ ನವರು. ಹಿಂದೂ ಧರ್ಮದ ಪ್ರತಿಪಾದಕರಾಗಿದ್ದವರು. ಅಹಲ್ಯಬಾಯಿ ಸಮಾಜದ ಗುರುಗಳನ್ನು ಮರೆತಿದ್ದೀರಾ. ಆಗಾದರೆ ನಾನು ಕುರುಬರು ಬೇಡವಾ ನಿಮಗೆ.? ಮೋದಿ ಬೊಮ್ಮಾಯಿ ಅವರು ಸರಿ ಪಡಿಸಿಕೊಳ್ಳಬೇಕು ಎಂದು ಹೆಚ್.ವಿಶ್ವನಾಥ್ ಆಗ್ರಹಿಸಿದರು.
Key words: Kashi Vishwanath -Corridor -Lokparkam –mistake-program – MLC-H Vishwanath.