ಮೈಸೂರು,ಜೂನ್,16,2021(www.justkannada.in): ಕೇರಳದ ವಯನಾಡಿನಲ್ಲಿ ಮಳೆಯ ಪ್ರಮಾಣ ಹೆಚ್ಚಾದ ಹಿನ್ನೆಲೆ, ಮೈಸೂರು ಜಿಲ್ಲೆ ಹೆಚ್ ಡಿ ಕೋಟೆ ತಾಲ್ಲೂಕಿನ ಬೀಚನಹಳ್ಳಿ ಗ್ರಾಮದ ಕಬಿನಿ ಜಲಾಶಯದ ಒಳಹರಿವಿನ ಪ್ರಮಾಣದಲ್ಲಿ ಹೆಚ್ಚಳವಾಗಿದೆ.
ಕಬಿನಿ ಜಲಾಶಯದ ಗರಿಷ್ಠ ಮಟ್ಟ 84 ಅಡಿಯಾಗಿದ್ದು, ಜಲಾಶಯದ ಇಂದಿನ ನೀರಿನ ಮಟ್ಟ 66.83 ಅಡಿ ಇದೆ. ಜಲಾಶಯದ ಗರಿಷ್ಠ ಶೇಖರಣೆ ಪ್ರಮಾಣ 19.52 ಟಿಎಂಸಿಯಾಗಿದ್ದು,ಜಲಾಶಯದ ಇಂದಿನ ಶೇಖರಣೆ ಪ್ರಮಾಣ 10.18 ಟಿಎಂಸಿ ಆಗಿದೆ.
ಇನ್ನು ಜಲಾಶಯಕ್ಕೆ 7197 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಜಲಾಶಯದಿಂದ 700 ಕ್ಯೂಸೆಕ್ ನೀರು ಹೊರ ಹೋಗುತ್ತಿದೆ. ನದಿಪಾತ್ರಕ್ಕೆ 700 ಕ್ಯೂಸೆಕ್ ನೀರು ಹೋಗುತ್ತಿದೆ. ಜಲಾನಯನ ಪ್ರದೇಶದಲ್ಲಿ ಮಳೆ ಪ್ರಮಾಣ 25 ಎಂಎಂ ಇದೆ.
Key words: Increased- rain- mysore -Kabini reservoir -inflow rate