ಮೈಸೂರು,ನವೆಂಬರ್,29,2021(www.justkannada.in): ಕೊರೋನಾ 3ನೇ ಅಲೆ ಭೀತಿ ಹಿನ್ನೆಲೆ, ಕೇರಳ, ಮಹಾರಾಷ್ಟ್ರದಿಂದ ಬರುವವರಿಗೆ 72 ಗಂಟೆಗಳ ಒಳಗಾಗಿ ಆರ್ ಟಿಸಿಪಿಆರ್ ಟೆಸ್ಟ್ ಕಡ್ಡಾಯ ಮಾಡಲಾಗುತ್ತದೆ ಎಂದು ಮೈಸೂರು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ತಿಳಿಸಿದ್ದಾರೆ.
ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಡಿಸಿ ಬಗಾದಿ ಗೌತಮ್, ಮೈಸೂರು ನಗರದಲ್ಲಿ ಕಳೆದ ವಾರ ಕಾವೇರಿ ನರ್ಸಿಂಗ್ ಹಾಸ್ಟೆಲ್ 43 ಪಾಸಿಟಿವ್, ಸೆಂಟ್ ಜೋಸೆಫ್ ಕಾಲೇಜ್ ಅಂಡ್ ನರ್ಸಿಂಗ್ ನಲ್ಲಿ 29 ಕೇಸ್ ಸೇರಿ 72 ಕೇಸ್ ಪತ್ತೆಯಾಗಿವೆ. 21 ಕೇಸ್ ಗಳಲ್ಲಿ ಮಾತ್ರ ಸಿಮ್ಟಮ್ಸ್ ಕೇಸ್ ಆಗಿವೆ. 1120 ಪ್ರೈಮರಿ, ಮತ್ತು ಸೆಕೆಂಡರಿ ಕಾಂಟೆಕ್ಟ್ ಟೆಸ್ಟ್ ಮಾಡಿದ್ದು ಎಲ್ಲರ ವರದಿ ನೆಗೆಟಿವ್ ಬಂದಿವೆ. ಕೇರಳ, ಮಹಾರಾಷ್ಟ್ರದಿಂದ ಬರುವವರಿಗೆ 72 ಗಂಟೆ ಒಳಗಾಗಿ ಆರ್ ಟಿಸಿಪಿಆರ್ ಟೆಸ್ಟ್ ಕಡ್ಡಾಯ ಮಾಡಲಾಗುತ್ತಿದೆ. ನವೆಂಬರ್ 12 ರಿಂದ 27 ನವೆಂಬರ್ ವರೆಗೆ ಕೇರಳ , ಮಹಾರಾಷ್ಟ್ರದಿಂದ ಬಂದಿರುವವರಿಗೆ ಆರ್ ಟಿಪಿಸಿಆರ್ ಟೆಸ್ಟ್ ಮಾಡಲಾಗುತ್ತದೆ. ಕೋವಿಡ್ ನೆಗೆಟಿವ್ ಬಂದರೂ ಕೂಡ ಕಂಟೋನ್ಮೆಂಟ್ ಜೋನ್ ಎಂದು ಘೋಷಣೆ ಮಾಡಲಾಗುತ್ತದೆ. ಪ್ರತಿನಿತ್ಯ 3 ರಿಂದ 5 ಸಾವಿರ ಟೆಸ್ಟ್ ಮಾಡಲು ನಿರ್ದೇಶನ ಬಂದಿದೆ.
ಇದರಲ್ಲಿ ಶೇ.10 ರಷ್ಟು ವಿದ್ಯಾರ್ಥಿಗಳು, ವಾರಕ್ಕೆ ಒಮ್ಮೆ ಸ್ಕೂಲ್ ಗಳಲ್ಲಿ ಸ್ಕ್ರೀನಿಂಗ್ ಮಾಡಲು ನಿರ್ದೇಶನವಿದೆ. ಕೇರಳ ಗಡಿಯಲ್ಲಿ ಬಾವಲಿ ಚೆಕ್ ಪೋಸ್ಟ್ ನಲ್ಲಿ 160 ವಾಹಗಳನ್ನ ವಾಪಸ್ ಕಳುಹಿಸಲಾಗಿದೆ. ಕಳೆದ ಒಂದು ವಾರದಲ್ಲಿ 17,342 ಮಂದಿಗೆ ಟೆಸ್ಟ್ ಮಾಡಲಾಗಿತ್ತು. 168 ಮಂದಿಗೆ ಪಾಸಿಟಿವ್ ಬಂದಿದ್ದು 0.97 ಪಾಸಿಟಿವ್ ದರ ಇದೆ ಎಂದು ಡಿಸಿ ಬಗಾದಿ ಗೌತಮ್ ತಿಳಿಸಿದರು.
ಮೈಸೂರು ಜಿಲ್ಲೆಯಲ್ಲಿ ಕೋವಿಡ್ ಮೊದಲ ಡೋಸ್ 92.81% ವ್ಯಾಕ್ಸಿನೇಷನ್ ಆಗಿದೆ. ಎರಡನೇ ಡೋಸ್ 64.63 % ವ್ಯಾಕ್ಸಿನೇಷನ್ ಆಗಿದೆ. 2 ಲಕ್ಷ ಸೆಕೆಂಡ್ ಡೋಸ್ ಬಾಕಿ ಇದೆ. ಕಳೆದ ಒಂದು ವಾರದಿಂದ ಮನೆ ಮನೆಗೆ ಹೋಗುತ್ತಿದ್ದೇವೆ. ಮೈಸೂರು ಸಿಟಿಯಲ್ಲಿ ಜನರಿಂದ ಸಿಗಬೇಕಾದ ರೆಸ್ಪಾನ್ಸ್ ಸಿಗುತ್ತಿಲ್ಲ. ಜನರ ನಾನು ಮನವಿ ಮಾಡುತ್ತೇನೆ. ಲಸಿಕೆ ಪಡೆದುಕೊಳ್ಳಿ. ಜನ ಅರ್ಥ ಮಾಡಿಕೊಳ್ಳಬೇಕು. ಜಿಲ್ಲಾಡಳಿತ ಸರ್ಕಾರದೊಂದಿಗೆ ಸಹಕರಿಸಿ. ನಿಮ್ಮ ಮನೆಯಲ್ಲಿ ಮಕ್ಕಳು ಹಿರಿಯರು ಇರುತ್ತಾರೆ. ಇವರೆಲ್ಲರ ಹಿತದೃಷ್ಟಿಯಿಂದ ವಾಕ್ಸಿನ್ ಪಡೆದುಕೊಳ್ಳಿ ಎಂದು ಸಾರ್ವಜನಿಕರಲ್ಲಿ ಮೈಸೂರು ಜಿಲ್ಲಾಧಿಕಾರಿ ಬಗಾದಿ ಗೌತಮ್ ಮನವಿ ಮಾಡಿದರು.
ಮೈಸೂರು ಜಿಲ್ಲೆಯಲ್ಲಿ ಒಮಿಕ್ರಾನ್ ಪತ್ತೆಯಾಗಿಲ್ಲ.
ಮೈಸೂರು ಜಿಲ್ಲೆಯಲ್ಲಿ ಇದುವರೆಗೂ ಕೊರೊನಾದ ಹೊಸ ರೂಪಾಂತರ ಒಮಿಕ್ರಾನ್ ವೈರಾಣು ಪತ್ತೆಯಾಗಿಲ್ಲ. ಮೈಸೂರು ವಿಮಾನ ನಿಲ್ದಾಣಕ್ಕೆ ಅಂತರರಾಷ್ಟ್ರೀಯ ವಿಮಾನಗಳ ಸಂಪರ್ಕವಿಲ್ಲ. ಆದರೆ ಮೈಸೂರಿಗೆ ಅಂತರರಾಜ್ಯ ಸಂಪರ್ಕ ಇದೆ. ಹಾಗಾಗಿ ಅಂತರರಾಜ್ಯ ಪ್ರಯಾಣಿಕರ ಮೇಲೆ ತೀವ್ರ ನಿಗಾ ವಹಿಸಲಾಗುತ್ತಿದೆ. ಶಾಲಾ ವಾಹನಗಳಲ್ಲಿ ಮಕ್ಕಳನ್ನು ಕರೆದೊಯ್ಯುವ ವೇಳೆ ಮುನ್ನೆಚ್ಚರಿಕೆ ವಹಿಸಬೇಕು. ಅಗತ್ಯಕ್ಕಿಂತ ಹೆಚ್ಚು ಮಕ್ಕಳನ್ನು ವಾಹನಗಳಲ್ಲಿ ಕರೆದೊಯ್ಯಬಾರದು. ಈ ಸಂಬಂಧ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ಮೈಸೂರು ಜಿಲ್ಲಾಧಿಕಾರಿ ಡಾ ಬಗಾದಿ ಗೌತಮ್ ತಿಳಿಸಿದರು.
Key words: RTCPR –Test- Mandatory – Mysore- Kerala- Mysore DC -Bagadi Gautam