ಮೈಸೂರು,ಮಾರ್ಚ್.8,2021(www.justkannada.in): ಕೊರೊನಾ ಸಂಕಷ್ಟದ ಕಾಲದಲ್ಲಿ ರಾಜ್ಯದ ಆದಾಯವನ್ನು ಜಾಸ್ತಿ ಮಾಡುವ ಜತೆಗೆ ಜನಪರ,ಮಹಿಳೆಯರ,ಬಡವರು, ರೈತರ ಪರವಾಗಿ ಬಜೆಟ್ ಮಂಡನೆ ಮಾಡಿದ್ದು ಐತಿಹಾಸಿಕವಾಗಿದ್ದು,ಮೈಸೂರು ನಗರದ ಜನತೆಯ ಪರವಾಗಿ ಮುಕ್ತ ಕಂಠದಿಂದ ಸ್ವಾಗತಿಸಿದ್ದೇನೆ ಎಂದು ನಗರ ಬಿಜೆಪಿ ಅಧ್ಯಕ್ಷ ಟಿ.ಎಸ್.ಶ್ರೀವತ್ಸ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ಕೊರೊನಾದಿಂದಾಗಿ ಭಾರತ ಅಲ್ಲದೇ ಇಡೀ ಜಗತ್ತು ತಲ್ಲಣಗೊಂಡು ಆರ್ಥಿಕ ವ್ಯವಸ್ಥೆ ಹದಗೆಟ್ಟರೂ ಅಭಿವೃದ್ಧಿವಿಚಾರದಲ್ಲಿ ಹಿಂದೆ ಬೀಳದೆ ಅರ್ಥವ್ಯವಸ್ಥೆ ಸರಿದಾರಿಗೆ ತಂದು ಈಗ ಮಂಡಿಸಿದ ಆಯವ್ಯಯದಲ್ಲಿ ಸಾಬೀತುಪಡಿಸಿದ್ದಾರೆ ಎಂದು ಅವರು ಬಣ್ಣಿಸಿದ್ದಾರೆ. ಮಹಿಳೆಯರ ಅಭಿವೃದ್ಧಿ ವಿಚಾರದಲ್ಲಿ ಸದಾ ಚಿಂತಿಸುವ ಮುಖ್ಯಮಂತ್ರಿಗಳು ಮಹಿಳಾ ದಿನಾಚರಣೆ ಪರವಾಗಿ ಅನೇಕ ಕೊಡುಗೆಗಳನ್ನು ನೀಡಿದ್ದಾರೆ ಎಂದರು.
ಮೈಸೂರು ಜಿಲ್ಲೆಯ ಮಟ್ಟಿಗೆ ಹೇಳುವುದಾದರೆ ನಿರೀಕ್ಷಿತ ಮಟ್ಟದಲ್ಲಿ ಕೊಡುಗೆಗಳನ್ನು ಕೊಡಲಾಗಿದೆ. ಕಬಿನಿ ಜಲಾಶಯದ ಕೆಳಗಿನ ಪ್ರದೇಶದಲ್ಲಿ ಇಂಟಿಗ್ರೇಟೆಡ್ ಥೀಮ್ ಪಾರ್ಕ್, ಪ್ರಾದೇಶಿಕ ಕ್ಯಾನ್ಸರ್ ಚಿಕಿತ್ಸಾ ಕೇಂದ್ರ ಸ್ಥಾಪನೆ ಜತೆಗೆ ಕಾದಂಬರಿ ಡಾ.ಎಸ್.ಎಲ್. ಭೈರಪ್ಪನವರ ಪರ್ವ ಕಾದಂಬರಿ ನಾಟಕ ಪ್ರದರ್ಶಿಸಲು ಒಂದು ಕೋಟಿ ರೂ.ಘೋಷಣೆ ಮಾಡಿರುವುದು ಸಂತೋಷ ಕೊಡುತ್ತದೆ ಎಂದು ಹೇಳಿದ್ದಾರೆ. ಮೈಸೂರು ನಗರದ ಹೊರ ವಲಯದ ಮುಡಾ ಬಡಾವಣೆಗಳನ್ನು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಗೆ ಸೇರಿಸಲು ತೀರ್ಮಾನ ಮಾಡಿರುವುದು ನಗರದ ಜನರ ನೀರಿನ ಬವಣೆ ನೀಗಿಸಿದಂತಾಗಲಿದೆ ಎಂದು ಹೇಳಿದ್ದಾರೆ.
ರಾಜ್ಯದ ಬಡವರು ಮಧ್ಯಮ, ಕೃಷಿಕರು, ಜನ ಸಾಮಾನ್ಯರ ಹಿತ ಬಯಸುವ ರೀತಿಯಲ್ಲಿ ಬಜೆಟ್ ಮಂಡನೆ ಮಾಡಿದಕ್ಕಾಗಿ ಜನತೆಯ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು.
ರಾಜ್ಯ ಬಜೆಟ್ ಸ್ವಾಗತಿಸಿದ ಜೋಗಿ ಮಂಜು
ಮೈಸೂರು ನಗರದ ಭಾರತೀಯ ಜನತಾ ಪಾರ್ಟಿಯ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷರಾದ ಜೋಗಿಮಂಜು ಮಾತನಾಡಿ, 2020-21ರ ಸಾಲಿನ ಬಜೆಟ್ ನಲ್ಲಿ ಗೋ ರಕ್ಷಣೆ ಹಾಗೂ ಹಿಂದುಳಿದ ವರ್ಗದವರಿಗೆ ಹೆಚ್ಚಿನ ಅನುದಾನ ನೀಡಿದಕ್ಕೆ ಭಾ.ಜ.ಪ. ಹಿಂದುಳಿದ ವರ್ಗಗಳ ಮೋರ್ಚಾದ ಮೈಸೂರು ಘಟಕ ದಿಂದ ಸಿಎಂ ಬಿಎಸ್ ವೈಗೆ ಅಭಿನಂದನೆಗಳನ್ನ ಸಲ್ಲಿಸಿದ್ದಾರೆ.
ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಗೋ ಹತ್ಯೆ ನಿಷೇಧ ಕಾನೂನು ಜಾರಿಯಾದ ನಂತರ ಯಡಿಯೂರಪ್ಪ ನವರ ಮಂತ್ರಿಮಂಡಲದ ಬಜೆಟ್ ನಲ್ಲಿ “” ಸಮಗ್ರ ಗೋ ಸಂಕುಲ ಸಮೃದ್ದಿ””ಯೋಜನೆಯಡಿಯಲ್ಲಿ ಪ್ರತಿ ಜಿಲ್ಲೆಯಲ್ಲಿ ಒಂದರಂತೆ ಗೋ ಶಾಲೆ ಗೆ ಒಂದು ಕೋಟಿ ಮೀಸಲು ಇಟ್ಟಿದ್ದು,
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಡಿಯಲ್ಲಿ ಸ್ವಂತ ಕಟ್ಟಡ ಹೊಂದಿರುವ ಮೆಟ್ರಿಕ್ ನಂತರದ ವಿಧ್ಯಾರ್ಥಿನಿಲಯಗಳಲ್ಲಿ ಸಂಖ್ಯಾಬಲದಂತೆ ಶೇ 5%ಹೆಚ್ಚಿಸಿ ಸುಮಾರು 5000 ವಿಧ್ಯಾರ್ಥಿಗಳಿಗೆ ಅನುಕೂಲ ಮಾಡಿ 10ಕೋಟಿ ಮೀಸಲಿಟ್ಟಿರುವುದು
ಹಿಂದುಳಿದ ತಾಲ್ಲೂಕಿನ ಅಭಿವೃದ್ಧಿ ಗೆ ವಿಶೇಷ ಅಭಿವೃದ್ಧಿ ಯೋಜನೆಯಡಿಯಲ್ಲಿ 3000 ಕೋಟಿ ಅನುದಾನ ನೀಡಿರುವುದು.
ಹಿಂದುಳಿದ ವರ್ಗದ ನೇಕಾರ ಸಮಾಜಕ್ಕೆ “” ನೇಕಾರ ಸಮ್ಮಾನ್ “” ಯೋಜನೆ ಅಡಿಯಲ್ಲಿ ಕೈ ಮಗ್ಗ ನೇಕಾರರಿಗೆ ತಲಾ ವರ್ಷಕ್ಕೆ 2000ಸಾವಿರ ನೆರವು ನೀಡಿರುವುದರ ಮೂಲಕ ಮತ್ತೊಮ್ಮೆ ಹಿಂದು ಹಾಗೂ ಹಿಂದುಳಿದ ವರ್ಗ ದವರ ಸರ್ಕಾರ ಎಂದು ಸಾಬೀತು ಪಡಿಸಿದಕ್ಕೆ ಮೈಸೂರು ನಗರದ ಭಾರತೀಯ ಜನತಾ ಪಾರ್ಟಿಯ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷರಾದ ಜೋಗಿಮಂಜು ಅವರು ಯಡಿಯೂರಪ್ಪ ಅವರ ಸರ್ಕಾರಕ್ಕೆ ಅಭಿನಂದನೆಗಳನ್ನ ತಿಳಿಸಿದ್ದಾರೆ.
Key words: budget – jogi manju- bjp-mysore-city-president-srhivatsa