ಬೆಂಗಳೂರು,ನವೆಂಬರ್,23,2021(www.justkannada.in): ಭಾರಿ ಮಳೆಯಿಂದಾಗಿ ನಗರದ ಜಕ್ಕೂರಿನಲ್ಲಿರುವ ಜವಹರಲಾಲ್ ನೆಹರು ಸಂಶೋಧನಾ ಕೇಂದ್ರಕ್ಕೆ ನೀರು ನುಗ್ಗಿದ್ದು ಅಪಾರ ಬೆಲೆ ಬಾಳುವಲ್ಯಾಬ್ ಮಷಿನ್ ಗಳು ಮತ್ತು ಸ್ಯಾಂಪಲ್ಸ್ ಗಳಿಗೆ ಹಾನಿಯುಂಟಾಗಿದೆ.
ನೆಹರು ಸಂಶೋಧನಾ ಕೇಂದ್ರ ವಿಶ್ವದಲ್ಲೇ ಉನ್ನತ ಸಂಶೋಧನಾ ಕೇಂದ್ರವಾಗಿತ್ತು. ಈ ಸಂಶೋಧನಾ ಕೇಂದ್ರದಲ್ಲಿ ಹತ್ತರಿಂದ ಹದಿನೈದು ವರ್ಷದಿಂದ ಸ್ಯಾಪಂಲ್ಸ್ ಸಂಗ್ರಹಿಸಲಾಗಿತ್ತು. ಆದರೆ ನಿರಂತರ ಮಳೆಯಿಂದಾಗಿ ಲ್ಯಾಬ್ ಗೆ ನೀರು ನುಗ್ಗಿ ಎಲ್ಲವೂ ಹಾಳಾಗಿದೆ.
ಹಿಮಾಲಯ, ಕಾಶ್ಮೀರ, ಪಂಜಾಬ್ ಸೇರಿದಂತೆ ದೇಶದ ಮೂಲೆ ಮೂಲೆಯಿಂದ ಸಂಗ್ರಹಿಸಿದ್ದ ಮಾನವನನ ಸ್ಯಾಂಪಲ್ಸ್ ಹಾಳಾಗಿದೆ. ಹೆಚ್ಐವಿ, ಫೀಡ್ಸ್, ಮಲೇರಿಯಾ, ಕಿವುಡುತನ, ನರಗಳ ಬಗ್ಗೆ 15 ವರ್ಷಕ್ಕೂ ಹಳೆಯದಾದ ಮಾನವನ ಸ್ಯಾಂಪಲ್ಸ್ ಸಂಗ್ರಹಿಸಲಾಗಿತ್ತು. ಆದರೆ ಎಲ್ಲವೂ ನೀರು ಪಾಲಾಗಿದೆ.
ಪ್ರಮುಖ ಕಾಯಿಲೆಗಳ ಬಗ್ಗೆ ಈ ಸಂಶೋಧನಾ ಕೇಂದ್ರದಲ್ಲಿ ಅಧ್ಯಯನ ಮಾಡಲಾಗುತ್ತಿತ್ತು. ಹೀಗಾಗಿ ದೇಶದ ಹಲವು ಭಾಗಗಳಿಂದ ಸ್ಯಾಂಪಲ್ಸ್ ಸಂಗ್ರಹಿಸಿಡಲಾಗಿತ್ತು. ಆದರೆ ಕಳೆದ ಎರಡು ದಿನಗಳಿಂದ ಮಳೆಯಿಂದಾಗಿ ಕ್ಯಾಂಪಸ್ ನಲ್ಲಿ ನೀರು ತುಂಬಿದ್ದು, ಕ್ಯಾಂಪಸ್ನಲ್ಲಿ ಪವರ್ ಸಪ್ಲೈ ಕಡಿತ ಮಾಡಲಾಗಿದೆ. ಇದರಿಂದ ಕೆಲವೂ ಲ್ಯಾಬ್ ಗಳಿಗೂ ಪವರ್ ಸಪ್ಲೈ ನಿಂತಿದೆ. ಹೀಗಾಗಿ ಪ್ರಮುಖ ಸ್ಯಾಪಂಲ್ಸ್ ಹಾಳಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ ಕ್ಯಾಂಪಸ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪರಿಶೀಲನೆ ಬಳಿಕ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಜೆಎನ್ ಸಿಎಎಸ್ ಆರ್ ಕ್ಯಾಂಪಸ್ ಗೆ ಅಪಾರ ಹಾನಿಯುಂಟಾಗಿದೆ. ಎರಡು ತಿಂಗಳ ಹಿಂದೆ ಇಲ್ಲಿಗೆ ಭೇಟಿ ನೀಡಿದ್ಧೆ. ಆಗಲೇ ಚರಂಡಿ ನೀರು ಹರಿಯದ ಬಗ್ಗೆ ಮಾಹಿತಿ ಇತ್ತು. ಈ ಭಾಗಗಳಲ್ಲಿನ ಕೆರೆಗಳು 8 ಅಡಿ ಮಾತ್ರ ಇದೆ. ಈ ಕಾಲುವೆಗಳಲ್ಲಿ ಸರಾಗವಾಗಿ ನೀರು ಹರಿಯುವುದಿಲ್ಲ. ಕ್ಯಾಂಪಸ್ ನಲ್ಲಿ ದೊಡ್ಡ ಪ್ರಮಾಣದ ಹಾನಿಯುಂಟಾಗಿದೆ. ಇದನ್ನ ರಕ್ಷಿಸುವುದು ನಮ್ಮ ಕರ್ತವ್ಯವಾಗಿದೆ. ಕ್ಯಾಂಪಸ್ ಗೆ ನೀರು ನುಗ್ಗದಂತೆ ತಡೆಯಲು ಕ್ರಮ ವಹಿಸಲಾಗುತ್ತದೆ ಎಂದು ತಿಳಿಸಿದರು.
Key words: rain-Jawaharlal Nehru Research Center -lab machines –samples- CM –bommai
ENGLISH SUMMARY…
Lab equipment at the Jawaharlal Nehru Research Center damaged due to rain: CM inspects
Bengaluru, November 23, 2021 (www.justkannada.in): Laboratory equipment worth lakhs of rupees, along with samples at the Jawaharlal Nehru Research Center, have been destroyed due to heavy rain.
The Nehru Research Center is known as one of the best research centers in the entire world. Several samples were stored here from the last 10-15 years. Due to heavy rain, water entered the laboratory destroying several valuable equipment and samples.
The samples, which have been destroyed include human samples that were collected from several parts of the country, including the Himalayas, Kashmir, and Punjab. These human samples relating to HIV, Fits, Malaria, deafness, neurology, were collected more than 15 years ago. All have been destroyed due to rain.
Several studies were conducted here on several kinds of diseases for which samples were collected from several parts of the country. Due to heavy rains that lashed the city in the last two days, rainwater accumulated on the campus, forcing the shutting down of the power supply. As a result of this, the power supply to the laboratory also stopped, and many important samples were damaged. Chief Minister Basavaraj Bommai visited the campus and inspected it.
Speaking on the occasion, he informed the JN CASR has incurred a huge loss. “I had come here about two months ago. I had come to know about the inflow of drainage water into the campus. The water level in the tanks nearby is just 8 ft. But the water flow in the canals is not smooth. There has been a lot of damage. It is the responsibilty of the State Government to conserve it. We will prepare a master plan to restore and protect it,” he added.
Keywords: Chief Minister Basavaraj Bommai/ Jawaharlal Nehru Research Center/ rain/ samples/ equipment/ destroyed