ಬೆಂಗಳೂರು,ನವೆಂಬರ್,10,2021(www.justkannada.in): ಜಿಎಸ್ ಟಿ ಇನ್ಸ್ ಪೆಕ್ಟರ್ ರನ್ನ ಕೂಡಿ ಹಾಕಿ ಹಲ್ಲೆ ನಡೆಸಿದ ಆರೋಪದ ಮೇಲೆ ಪಬ್ ಮಾಲೀಕ ಮತ್ತು ಬೌನ್ಸರ್ಸ್ ಗಳನ್ನ ನಗರದ ಕೋರಮಂಗಲ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಕೋರಮಂಗಲದ ಹ್ಯಾಪಿ ಬ್ರೋ ಪಬ್ ನಲ್ಲಿ ಈ ಘಟನೆ ನಡೆದಿದೆ. ಪಬ್ ಗೆ ಬಂದಿದ್ಧ ಜಿಎಸ್ಟಿ ಇನ್ಸ್ಪೆಕ್ಟರ್ ವಿನಯ್ ಮಂಡಲ್ ರನ್ನ ಕೂಡಿಹಾಕಿ, ಪಬ್ ಮಾಲಿಕ ರಾಕೇಶ್ ಗೌಡ ಮತ್ತು ಬೌನ್ಸರ್ ಗಳು ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ.
ಪಬ್ ಗೆ ಬಂದಿದ್ದ ಜಿಎಸ್ಟಿ ಇನ್ಸ್ಪೆಕ್ಟರ್ ವಿನಯ್ ಮಂಡಲ್ ಬಳಿ ಬಂದು ಪಬ್ ಮಾಲಿಕ ರಾಕೇಶ್ ಗೌಡ ಪರಿಚಯ ಮಾಡಿಕೊಂಡಿದ್ದ. ತಡರಾತ್ರಿ ಹನ್ನೆರಡು ಗಂಟೆ ಬಳಿಕ ಬಿಲ್ ಕೇಳಿದ್ದ. ಆಗ ಅವರಿಬ್ಬರ ಮಧ್ಯೆ ಗಲಾಟೆ ಶುರುವಾಗಿದ್ದು. ರಾತ್ರಿ ಒಂದು ಗಂಟೆಯವರೆಗೂ ಇಬ್ಬರೂ ವಾದ ಮಾಡಿಕೊಂಡಿದ್ದಾರೆ.
ಬಳಿಕ ನೀನು ಫೇಕ್ ಜಿಎಸ್ಟಿ ಇನ್ಸ್ಪೆಕ್ಟರ್ ಎಂದು ಇನ್ಸ್ಪೆಕ್ಟರ್ ವಿನಯ್ ರಿಗೆ ಪಬ್ ಮಾಲಿಕ ರಾಕೇಶ್ ಬೈದಿದ್ದು ನಂತರ. ಇನ್ಸ್ಪೆಕ್ಟರ್ ವಿನಯ್ ನನ್ನು ಕೂಡಿ ಹಾಕಿ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
Key words: GST -inspector –assult-Pub owner – Bouncers –Arrest-bangalore