ಡಿಕೆಶಿ,ಸಿದ್ದರಾಮಯ್ಯಗೆ ಟೀಕೆ ಮಾಡುವುದಷ್ಟೇ ಕೆಲಸ-ಬಿಜೆಪಿ ಮುಖಂಡ ರವಿಕುಮಾರ್ ವಾಗ್ದಾಳಿ.

ಮೈಸೂರು,ನವೆಂಬರ್,25,2021(www.justkannada.in): ನೆರೆ ಪರಿಹಾರ ನೀಡುವಲ್ಲಿ ಸರ್ಕಾರ ವಿಫಲವಾಗಿದೆ  ಎಂಬ ವಿಪಕ್ಷಗಳ  ಟೀಕೆಗೆ ತಿರುಗೇಟು ನೀಡಿರುವ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಸಿಎಂ ಜೇಬಿನಲ್ಲಿ ದುಡ್ಡು ಹಿಟ್ಕೊಂಡು ಓಡಾಡುವುದಿಲ್ಲ ಎಂದು ಕಿಡಿಕಾರಿದ್ದಾರೆ.

ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ರವಿ ಕುಮಾರ್,  ಮಳೆಯಿಂದಾಗಿ ಅಪಾರ ಹಾನಿಯಾಗಿದೆ. ನಿಯಮಾನುಸಾರ ಹಾನಿ ವರದಿ ಸಂಗ್ರಹಿಸಿ ಪರಿಹಾರ ನೀಡುತ್ತಾರೆ. ಕಾನೂನಾತ್ಮಕವಾಗಿ ನೆರೆ ಪರಿಹಾರ ನೀಡಲಾಗುವುದು‌.  ಕಾಂಗ್ರೆಸ್ ಪಕ್ಷ ಒಂದು ನಿರುದ್ಯೋಗಿಗಳ ಕೂಟ. ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯಗೆ ಟೀಕೆ ಮಾಡುವುದಷ್ಟೇ ಕೆಲಸ ಎಂದು ವ್ಯಂಗ್ಯವಾಡಿದರು.

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ 15ರಿಂದ 16ಸ್ಥಾನಗಳು ಬಿಜೆಪಿ ಗೆಲ್ಲುತ್ತದೆ. ವಿಧಾನ ಪರಿಷತ್ ನಲ್ಲಿ ಬಹುಮತ ಸಾಬೀತು ಮಾಡಲು 12 ಸ್ಥಾನಗಳು ಮಾತ್ರ ಅವಶ್ಯಕತೆ ಇದೆ. ಈ ಬಾರಿಯ ಚುನಾವಣೆಯಲ್ಲಿ ವಿಧಾನ ಪರಿಷತ್ ನಲ್ಲಿ ಬಿಜೆಪಿ ಬಹುಮತ ಗಳಿಸುವ ವಿಶ್ವಾಸ ಇದೆ. ರಾಜ್ಯದಲ್ಲಿ ನಡೆದ ಜನಸ್ವರಾಜ್ ಯಾತ್ರೆ ಯಶಸ್ವಿಯಾಗಿದೆ. ಸ್ಥಳೀಯ ಜನಪ್ರತಿನಿಧಿಗಳಿಂದ ಉತ್ತಮ ಬೆಂಬಲ ವ್ಯಕ್ತವಾಗಿದೆ. ಜೆಡಿಎಸ್ ಪಕ್ಷದೊಂದಿಗೆ ಹೊಂದಾಣಿಕೆ ಅವಶ್ಯಕತೆ ಇಲ್ಲ. ಈಗಾಗಲೇ ಜೆಡಿಎಸ್ 7ಕ್ಷೇತ್ರಗಲ್ಲಿ‌ ಮಾತ್ರ ಸ್ಪರ್ಧಿಸಿದೆ‌. ಉಳಿದ ಸ್ಥಾನಗಳಿಗೆ ಬೆಂಬಲ ನೀಡುವಂತೆ ಯಡಿಯೂರಪ್ಪ ಮನವಿ ಮಾಡಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಸಂಸದೆ ಸುಮಲತಾಗೆ ಬಿಜೆಪಿ ಬಾಹ್ಯ ಬೆಂಬಲ ನೀಡಿತ್ತು. ಹಾಗಾಗಿ ಈ ಬಾರಿಯ ಪರಿಷತ್ ಚುನಾವಣೆಗೆ ಬಿಜೆಪಿ ಬೆಂಬಲಿಸುವಂತೆ ಮನವಿ ಮಾಡುತ್ತೇವೆ ಎಂದು ರವಿಕುಮಾರ್  ತಿಳಿಸಿದರು.

Key words: Congress – unemployed  criticism – DK Shiva kumar-former CM-Siddaramaiah-BJP -Ravikumar

ENGLISH SUMMARY…

Congress is a society full of unemployed: DKS, Siddaramaiah doesn’t have any work other than criticizing – Ravikumar
Mysuru, November 25, 2021 (www.justkannada.in): In his response to the opposition party’s criticism stating the BJP Government has failed in providing flood relief, the BJP State General Secretary Ravikumar today said, “the Chief Minister will not roam around keeping money in his pocket”.
Addressing a press meet in Mysuru today, he informed that the state has witnessed a lot of destruction due to the recent rains. “The Government will provide compensation by collecting the details as per the rules. The compensation amount will be provided as per law. Congress party has become a society of unemployed persons. D.K. Shivakumar and Siddaramaiah don’t have any work other than criticizing us,” he observed.
He expressed confidence that the BJP would win 15-16 seats in the MLC elections in the state. “We need only 12 seats to prove majority in the legislative council. We are confident of winning the required seats. The Janswaraj Yatra has been successful in the state. “We have received good support from the local elected representatives. We won’t require an alliance with the JDS party. The JDS has contested only in 7 places. Yediyurappa has requested the JDS leaders to support us in the remaining places. During the last Lok Sabha elections, Mandya MP Sumalatha had received external support from the BJP. Hence, we will request her to support us in the legislative council elections,” he added.
Keywords: BJP/ MLC elections/ Congress party/ unemployed/ BJP State General Secretary/ Ravikumar