ಮೈಸೂರು,ಡಿಸೆಂಬರ್,23,2021(www.justkannada.in): ಕ್ರಿಸ್ಮಸ್ ಹಾಗೂ ಹೊಸವರ್ಷಾಚರಣೆ ಅಂಗವಾಗಿ ಡಿಸೆಂಬರ್ 25ರಿಂದ ಮೈಸೂರಿನಲ್ಲಿ ಫಲಪುಷ್ಪ ಪ್ರದರ್ಶನ ಸೇರಿ ವಿವಿಧ ಕಾರ್ಯಕ್ರಮಗಳನ್ನ ಆಯೋಜನೆ ಮಾಡಲಾಗಿದೆ.
ಮೈಸೂರು ಅರಮನೆ ಮಂಡಳಿಯಿಂದ ಫಲಪುಷ್ಪ ಪ್ರದರ್ಶನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು, ಡಿಸೆಂಬರ್ 25ರಿಂದ ಜನವರಿ 2ರವರೆಗೆ ಹತ್ತು ಹಲವು ಕಾರ್ಯಕ್ರಮಗಳು ನಡೆಯಲಿವೆ.
ಅರಮನೆ ಆವರಣದಲ್ಲಿ ಫಲಪುಷ್ಪ ಪ್ರದರ್ಶನ ನಡೆಯಲಿದ್ದು, 15 ಸಾವಿರ ವಿಭಿನ್ನ ರೀತಿಯ ಅಲಂಕಾರಿಕ ಹೂವಿನ ಕುಂಡಗಳು, ವಿವಿಧ ಜಾತಿಯ 4ಲಕ್ಷ ಗುಲಾಬಿ ಹೂ ಬಳಕೆ ಮಾಡಲಾಗುತ್ತಿದೆ. ಅಲಂಕಾರಿಕ ಹೂಗಳಿಂದ ಶ್ರೀರಾಮಮಂದಿರದ ಮಾದರಿ ನಿರ್ಮಾಣ. ಶ್ರೀ ಚಾಮುಂಡಿ, ನಂದಿ, ಮಹಿಷಾಸುರ, ಶ್ರೀ ಚಾಮರಾಜ ಒಡೆಯರ್, ಹೂವಿನ ಪಲ್ಲಕ್ಕಿ, ಖೆಡ್ಡಾ ಆಪರೇಷನ್ ಸೇರಿ ಹಲವು ಕಲಾಕೃತಿಗಳ ನಿರ್ಮಾಣ ಮಾಡಲಾಗುತ್ತಿದೆ.
ಪ್ರತಿದಿನ ಸಂಜೆ 7 ರಿಂದ 8.30 ರವರೆಗೆ ಅರಮನೆ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸಲಿದ್ದು, ಗೊಂಬೆ ಪ್ರದರ್ಶನ, ದಸರಾ ಅಂದು-ಇಂದು ಛಾಯಾಚಿತ್ರ ಹಾಗೂ ವೀಡಿಯೋ ಪ್ರದರ್ಶನ ಕಾರ್ಯಕ್ರಮಗಳು ನಡೆಯಲಿವೆ.
ಪ್ರತಿದಿನ ಸಂಜೆ ಅರಮನೆ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಖ್ಯಾತ ಹಿನ್ನೆಲೆ ಗಾಯಕ ವಿಜಯ್ ಪ್ರಕಾಶ್ ರಿಂದ ಪುನೀತ್ ರಾಜ್ ಕುಮಾರ್ ಗೀತನಮನ, ಸ್ವಾತಂತ್ರ್ಯ ಅಮೃತಮಹೋತ್ಸವ ಅಂಗವಾಗಿ ಸಂಗೀತ ಕಾರ್ಯಕ್ರಮ ನಡೆಯಲಿದೆ. ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮಗಳನ್ನ ಆಯೋಜನೆ ಮಾಡಲಾಗಿದೆ.
Key words: Christmas – New Year-Mysore – several programs
ENGLISH SUMMARY…
Flower show part of several other programs on Dec. 25
Mysuru, December 23, 2021 (www.justkannada.in): Fruits and flower show will be one among a few other programs that have been organized as part of the Christmas and New Year celebrations, on December 25, in Mysuru.
The Amba Vilas Palace Board has organized a fruit and flower show and cultural program from December 25 to January 2.
The fruits and flower show will be held in the Ambavilasa Palace premises. More than 15,000 different varieties of decorative flower pots, four lakh different varieties of roses will be exhibited. Model of the Srirama Mandir, Goddess Sri Chamundi, Nandi, Mahishasura, Sri Chamaraja Wadiyar, flower palanquin, Khedda Operation, and other models are being prepared for the show.
Illumination of the Ambavilasa Palace will be from 7.00 pm to 8.30 pm on all these days, along with a grand display of dolls, exhibition of olden and present-day Dasara celebrations and video presentation will be part of the programs.
Cultural programs will be held in the palace premises daily in the evening. Renowned playback singer Vijayprakash will present a musical ode to late actor Powerstar Puneeth Rajkumar. A musical night will be held on the occasion of the 75th year Independence Day celebrations. All these programs are being organized with a view of promoting tourism.
Keywords: Mysuru/ Christmas/ New Year/ programs