ದೇಶದ ಹಿತಕ್ಕಾಗಿ ಮತಾಂತರ ನಿಷೇಧ ಕಾಯ್ದೆ ಜಾರಿ: ಸಹಕರಿಸುವಂತೆ ವಿಪಕ್ಷಗಳಿಗೆ ಬಿಎಸ್ ವೈ ಮನವಿ.

ಬೆಳಗಾವಿ,ಡಿಸೆಂಬರ್,22,2021(www.justkannada.in): ದೇಶದ ಹಿತಕ್ಕಾಗಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ಮಾಡಲಾಗುತ್ತಿದೆ. ಹೀಗಾಗಿ ವಿಪಕ್ಷಗಳು ಕಾಯ್ದೆ ಜಾರಿಗೆ ಸಹಕರಿಸುವಂತೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮನವಿ ಮಾಡಿದ್ದಾರೆ.

ಈ ಕುರಿತು ಮಾತನಾಡಿರುವ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಆನೇಕ ರಾಜ್ಯಗಳಲ್ಲಿ ಮತಾಂತರ ನಿಷೇಧ ಕಾಯ್ದೆ ಇದೆ. ಆದರೆ ಸಿದ್ಧರಾಮಯ್ಯಗೆ ಇದರಲ್ಲಿ ಆಸಕ್ತಿ ಇಲ್ಲ. ಹೀಗಾಗಿ ಕಾಯ್ದೆ ಬಗ್ಗೆ ಅನಗತ್ಯ ಗೊಂದಲ ಸೃಷ್ಠಿಸಲು ಯತ್ನಿಸಲಾಗುತ್ತಿದೆ.  

ಕಾಯ್ದೆ ಮಂಡನೆ ವೇಳೆ ವಿಪಕ್ಷ ನಾಯಕರು ಇರಬೇಕು. ಅದಕ್ಕಾಗಿ ದಯವಿಟ್ಟು ವಿನಂತಿ ಮಾಡುತ್ತೇನೆ  ದೇಶದ ಹಿತಕ್ಕಾಗಿ ಮತಾಂತರ ನಿಷೇಧ ಕಾಯ್ದೆ ಜಾರಿ ಮಾಡಲಾಗುತ್ತಿದೆ. ಜಾರಿಗೆ ಸಹಕಾರ ನೀಡಿ ಬಲವಂತ ಮತಾಂತರಕ್ಕೆ ನಮ್ಮ ವಿರೋಧವಿದೆ. ಹೀಗಾಗಿ ಕಾಯ್ದೆ ಜಾರಿಯಿಂದ ಶಿಕ್ಷಣ ಸಮುದಾಯ ಮಿಷನರಿಗಳಿಗೆ ತೊಂದರೆ ಆಗಲ್ಲ ಎಂದು ಬಿಎಸ್ ಯಡಿಯೂರಪ್ಪ ತಿಳಿಸಿದರು.

Key words:  Conversion Prohibition Act – BS Yeddyurappa- appeals – opposition- parties – cooperate

ENGLISH SUMMARY…

Anti-conversion bill is being introduced in order to safeguard the interest of the country: BSY appeals opposition parties to cooperate
Belagavi, December 22, 2021 (www.justkannada.in): Former Chief Minister B.S. Yediyurappa today said that the anti-conversion bill is being implemented to safeguard the interest of the country and appealed to the opposition parties to cooperate.
“The anti-conversion bill exists in several states. But Siddaramaiah is not keen on it. Hence he is trying to unnecessarily create confusion among the people about this bill,” he said.
“The opposition party people should also be present while tabling the bill. Hence, I am requesting them to cooperate. We oppose forced religious conversions. Anyway, this bill will no way create any problem to the Christian missionaries,” he added.
Keywords: B.S. Yediyurappa/ anti-conversion bill/ Siddaramaiah/ opposition parties/ cooperate