ಮೈಸೂರು,ನವೆಂಬರ್,22,2021(www.justkannada.in): ರಾಜ್ಯ ವಿಧಾನಪರಿಷತ್ ಚುನಾವಣೆ ಕಣ ರಂಗೇರಿದ್ದು ನಾಳೆ ನಾಮಪತ್ರದ ಸಲ್ಲಿಸಲು ಕಡೆಯ ದಿನಾಂಕವಾಗಿದೆ. ಆದರೆ ಮೈಸೂರಿನಿಂದ ಸ್ಪರ್ಧಿಸುವ ಅಧಿಕೃತ ಅಭ್ಯರ್ಥಿಯನ್ನ ಕಾಂಗ್ರೆಸ್ ಮತ್ತು ಜೆಡಿಎಸ್ ಇನ್ನೂ ಘೋಷಣೆ ಮಾಡಿಲ್ಲ.
ಸ್ಥಳೀಯ ಸಂಸ್ಥೆಗಳ ವಿಧಾನಪರಿಷತ್ ಚುನಾವಣೆ ವಿಚಾರ ಸಂಬಂಧ ಈಗಾಗಲೇ ಬಿಜೆಪಿಯಿಂದ ಆರ್.ರಘು ಅಧಿಕೃತ ಅಭ್ಯರ್ಥಿಯಾಗಿದ್ದು, ಇಂದು ಸಂಜೆ ವೇಳೆಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳ ಘೋಷಣೆ ಮಾಡುವ ಸಾಧ್ಯತೆ ಇದೆ.
ಇನ್ನು ಕಾಂಗ್ರೆಸ್ ನಿಂದ ತಿಮ್ಮಯ್ಯಗೆ ಟಿಕೆಟ್ ಬಹುತೇಕ ಖಚಿತ ಎನ್ನಲಾಗಿದ್ದು ಜೆಡಿಎಸ್ ನಿಂದ ಸಿ.ಎನ್.ಮಂಜೇಗೌಡ ಕಣಕ್ಕಿಳಿಸಲು ವರಿಷ್ಠರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಇತ್ತ ಜೆಡಿಎಸ್ ತೊರಯುವುದಾಗಿ ಹೇಳಿರುವ ಸಂದೇಶ್ ನಾಗರಾಜ್ ನಡೆ ಯಾವ ಕಡೆ ಎಂಬುದು ಕುತೂಹಲ ಮೂಡಿಸಿದೆ. ಸ್ವತಂತ್ರವಾಗಿ ಸ್ಪರ್ಧಿಸಲಿದ್ದಾರಾ ಅಥವಾ ಯಾವ ಪಕ್ಷದಿಂದ ಸ್ಪರ್ಧಿಸಲಿದ್ದಾರೆ ಎಂದು ಇಂದು ಆಪ್ತರೊಂದಿಗೆ ಚರ್ಚೆ ಮಾಡಿ ಸಂದೇಶ್ ನಾಗರಾಜ್ ತೀರ್ಮಾನಿಸಲಿದ್ದಾರೆ.
ನಾಮಪತ್ರ ಸಲ್ಲಿಕೆಗೆ ಕೊನೆದಿನ ಹಿನ್ನಲೆ, ಇಂದು ಮೈಸೂರಿಗೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಆಗಮಿಸಲಿದ್ದು ಬಹುತೇಕ ಸಿ ಎನ್ ಮಂಜೇಗೌಡಗೆ ಜೆಡಿಎಸ್ ಟಿಕೆಟ್ ನೀಡುವ ಸಾಧ್ಯತೆ ಇದೆ. ಈ ಹಿನ್ನೆಲ್ಲೆಯಲ್ಲಿ ಮಂಜೇಗೌಡ ಇಂದೇ ಜೆಡಿಎಸ್ ಗೆ ಅಧಿಕೃತವಾಗಿ ಸೇರ್ಪಡೆ ಆಗಲಿದ್ದಾರೆ
ಮಧ್ಯಾಹ್ನ 12 ಗಂಟೆಗೆ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು, ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಸಮ್ಮುಖದಲ್ಲೆ ಪಕ್ಷ ಜೆಡಿಎಸ್ ಸೇರ್ಪಡೆಯಾಗಲಿದ್ದಾರೆ. ನಾಳೆ ನಾಮಪತ್ರ ಮಂಜೇಗೌಡ ಸಲ್ಲಿಕೆ ಮಾಡಿಲಿದ್ದಾರೆ ಎಂದು ಹೇಳಲಾಗುತ್ತಿದೆ.
Key words: Tomorrow – last day –file- nominations -legislative council- elections-jds-congress