ಬಂಡೀಪುರದಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್.

ಚಾಮರಾಜನಗರ,ಡಿಸೆಂಬರ್,24,2021(www.justkannada.in): ರಾಜ್ಯದಲ್ಲಿ ಒಮಿಕ್ರಾನ್ ಭೀತಿ ಹಿನ್ನೆಲೆ ಬಂಡೀಪುರದಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್ ಬಿದ್ದಿದೆ. ಹೌದು, ಬಂಡೀಪುರದಲ್ಲಿ ಹೊಸ ವರ್ಷಾಚರಣೆಗೆ ನಿಷೇಧ ಹೇರಲಾಗಿದೆ.

ರಾಜ್ಯದಲ್ಲಿ ಒಮಿಕ್ರಾನ್ ಪ್ರಕರಣಗಳು ಹೆಚ್ಚುತ್ತಿದ್ದು ಈ ಹಿನ್ನೆಲೆಯಲ್ಲಿ ಸರ್ಕಾರ ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳುತ್ತಿದೆ. ಈ ಮಧ್ಯೆ ಹೊಸ ವರ್ಷಾಚರಣೆಗೆ ಸರ್ಕಾರ ಕೆಲ ನಿರ್ಬಂಧಗಳನ್ನ ವಿಧಿಸಿದೆ.

ಹೀಗಾಗಿ  ಬಂಡೀಪುರದಲ್ಲಿ ಪ್ರವಾಸಿಗರ ವಾಸ್ತವ್ಯಕ್ಕೆ  ಡಿಸೆಂಬರ್ 31 ಮತ್ತು ಜನವರಿ 1ರವರೆಗೆ  ನಿರ್ಬಂಧ ವಿಧಿಸಲಾಗಿದೆ. ಆದರೆ ಸಫಾರಿಗೆ ಯಾವುದೇ ನಿರ್ಬಂಧವಿಲ್ಲ. ಎಂದಿನಂತೆ ಬೆಳಿಗ್ಗೆ ಹಾಗು ಸಂಜೆ ಸಫಾರಿ ಇರಲಿದೆ. ಆದರೆ ವಾಸ್ತವ್ಯಕ್ಕೆ ಮಾತ್ರ ಹೊಸ ವರ್ಷದ  ಸಂದರ್ಭದಲ್ಲಿ ಅವಕಾಶ ಇರುವುದಿಲ್ಲ. ಗೆಸ್ಟ್ ಹೌಸ್, ಕಾಟೇಜ್ ಗಳ ಪ್ರವೇಶಕ್ಕೆ ನಿಷೇಧ ವಿಧಿಸಲಾಗಿದೆ ಎಂದು  ಬಂಡೀಪುರ ಸಂರಕ್ಷಣಾಧಿಕಾರಿ ನಟೇಶ್ ಮಾಹಿತಿ ನೀಡಿದ್ದಾರೆ.

Key words: New Year’- Eve-celebration- Break -Bandipur.

ENGLISH SUMMARY…

No new year celebrations in Bandipur
Chamarajanagara, December 24, 2021 (www.justkannada.in): The State Government has imposed restrictions on the new year celebration in Bandipur following the increasing number of Omicron cases in the state.
The State Government has imposed restrictions on new year celebrations as a precautionary measure. Accordingly, stay at Bandipur is restricted from December 31 to January 1. However, there will be no restriction on the safari. It will continue as usual once in the morning and the evening. Admissions have been prohibited in the guest houses, cottages in the vicinity, according to information provided by Bandipur Forest Conservator Natesh.
Keywords: New Year/ celebrations/ Bandipur/ restricted