ಬೆಂಗಳೂರು,ನವೆಂಬರ್ ,17,2021(www.justkannada.in): ಇಂದಿನಿಂದ ಆರಂಭವಾದ ಬೆಂಗಳೂರು ಟೆಕ್ ಸಮ್ಮಿಟ್ ಗೆ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಚಾಲನೆ ನೀಡಿದರು.
ಖಾಸಗಿ ಹೊಟೆಲ್ ನಲ್ಲಿ ಮೂರು ದಿನಗಳ ಕಾಲ ಬೆಂಗಳೂರು ಟೆಕ್ ಸಮ್ಮಿಟ್ ನಡೆಯಲಿದ್ದು ಇಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಚಾಲನೆ ನೀಡಿದರು. ಈ ವೇಳೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಸಿಎಂ ಬಸವರಾಜ ಬೊಮ್ಮಾಯಿ, ಐಟಿ-ಬಿಟಿ ಸಚಿವ ಅಶ್ವಥ್ ನಾರಾಯಣ್ ಸೇರಿ ಹಲವರು ಉಪಸ್ಥಿತರಿದ್ದರು.
ಬೆಂಗಳೂರು ನೆಕ್ಸ್ಟ್ ಎಂಬ ಘೋಷಾವಾಕ್ಯದೊಂದಿಗೆ ಈ ಸಮಾವೇಶ ನಡೆಯುತ್ತಿದ್ದು 75 ಗೋಷ್ಠಿಗಳು ಸಂವಾದಗಳನ್ನ ಆಯೋಜಿಸಲಾಗಿದೆ. 5 ಸಾವಿರ ಸ್ಟಾರ್ಟ್ ಅಪ್ ಕಂಪನಿಗಳು ಭಾಗವಹಿಸಲಿವೆ.
Key words: Bengaluru -Tech Summit -Vice President- Venkaiah Naidu