ಮೈಸೂರು,ಡಿಸೆಂಬರ್,16,2021(www.justkanndada.in): ಇಂದು ಮೈಸೂರಿನ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ರೈತ ಮುಖಂಡರು ಹಾಗೂ ಕಟಾವು ಯಂತ್ರದ ಮಾಲೀಕರ ಸಭೆಯಲ್ಲಿ ಭತ್ತ – ರಾಗಿ ಕಟಾವು ಮಾಡುವ ಯಂತ್ರಗಳ ಕಟಾವು ಬೆಲೆ ನಿಗದಿ ಪಡಿಸಲಾಯಿತು.
ಭತ್ತ ಕಟಾವು ಮಾಡುವ ಚೈನ್ ಟೈಪ್ ಯಂತ್ರಕೆ 1 ಗಂಟೆಗೆ ರೂ 2400 ಹಾಗೂ ಟೈರ್ ಟೈಪ್ ಯಂತ್ರಕ್ಕೆ 1 ಗಂಟೆಗೆ ರೂ 1400 ನಿಗದಿ ಪಡಿಸಲಾಯಿತು .
ಕಳೆದ ವರ್ಷ ಚೈನ್ ಟೈಪ್ ಯಂತ್ರಗಳಿಗೆ ರೂ. 2300 ಹಾಗೂ ಟೈರ್ ಟೈಪ್ ಯಂತ್ರಕ್ಕೆ ರೂ 1500 ನಿಗದಿ ಪಡಿಸಲಾಗಿತ್ತು. ರಾಗಿ ಕಟಾವು ಮಾಡುವ ಯಂತ್ರಗಳ ಬೆಲೆ 1 ಗಂಟೆಗೆ ರೂ. 2800 ನಿಗದಿ ಪಡಿಸಲಾಯಿತು. ಕಳೆದ ವರ್ಷ ರಾಗಿ ಕಟಾವು ಮಾಡುವ ಯಂತ್ರಕೆ ರೂ 2600 ನಿಗದಿ ಪಡಿಸಲಾಗಿತ್ತು.
ಇಂದಿನ ಸಭೆ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಅಧ್ಯಕ್ಷತೆಯಲ್ಲಿ ನಡೆದು, ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೋಗೀಶ್, ಕೃಷಿ ಜಂಟಿ ನಿರ್ದೇಶಕ ಮಹಾಂತೇಶಪ್ಪ ,ತೋಟಗಾರಿಕೆ ಉಪ ನಿರ್ದೇಶಕ ರುದ್ರೇಶ್ , ಪ್ರಾದೇಶಿಕ ಸಾರಿಗೆ ಅಧಿಕಾರಿ ಹಾಗೂ ತಾಲೂಕು ಕೃಷಿ ಸಹಾಯಕ ನಿರ್ದೇಶಕರುಗಳು,ಸಾಮೂಹಿಕ ನಾಯಕತ್ವ ರೈತ ಸಂಘದ ಜಿಲ್ಲಾ ಅಧ್ಯಕ್ಷ ವಿದ್ಯಾಸಾಗರ್ , ಸಂಜೀವ ,ಕಟಾವು ಯಂತ್ರಗಳ ಮಾಲೀಕರು ,ಮಧ್ಯವರ್ತಿಗಳು ಮುಂತಾದವರು ಇದ್ದರು.
Key words: Rice – Millet- harvest -price –harvesting- machines- Mysore -DC