ಹುಬ್ಬಳ್ಳಿ,ಡಿಸೆಂಬರ್,29,2021(www.justkannada.in): ಮತಾಂತರ ನಿಷೇಧ ಕಾಯ್ದೆ ಜಾರಿಗೆ ಸ್ಪೆಷಲ್ ಟಾಸ್ಕ್ ಫೋರ್ಸ್ ರಚನೆ ಮಾಡುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.
ಹುಬ್ಬಳ್ಳಿಯಲ್ಲಿ ಇಂದು ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಅಂಜನಾದ್ರಿ ಬೆಟ್ಟ ಅಭಿವೃದ್ಧಿಗೊಳಿಸಿ ಪ್ರಧಾನಿ ಮೋದಿ ಅವರಿಂದ ಉದ್ಘಾಟಿಸುತ್ತೇವೆ. ಹಿಂದೂ ಧರ್ಮದ ದೇವಾಲಯಗಳಿಗೆ ಕಟ್ಟುಪಾಡುಗಳಿವೆ. ಹಿಂದೂ ದೇವಾಲಯಗಳನ್ನ ಕಾನೂನುಗಳಿಂದ ಮುಕ್ತ ಮಾಡುತ್ತೇವೆ ಎಂದು ತಿಳಿಸಿದರು.
ಡಿಸೆಂಬರ್ 31 ರಂದು ಕರ್ನಾಟಕ ಬಂದ್ ಮಾಡದಂತೆ ಮನವಿ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ, ದಯವಿಟ್ಟು ಕರ್ನಾಟಕ ಬಂದ್ ಮಾಡಬೇಡಿ. ಜನ ಕೊರೋನಾದಿಂದ ಸುಧಾರಿಸಿಕೊಳ್ಳುತ್ತಿದ್ದಾರೆ. ಎಲ್ಲದಕ್ಕೂ ಬಂದ್ ಒಂದೇ ಪರಿಹಾರ ಅಲ್ಲ. ಸರ್ಕಾರ ಪುಂಡರ ಮೇಲೆ ಕ್ರಮ ಕೈಗೊಂಡಿದೆ ಎಂದರು.
ಕಾಂಗ್ರೆಸ್ ಪಾದಯಾತ್ರೆ ಕುರಿತು ಪ್ರತಿಕ್ರಿಯಿಸಿದ ಸಿಎಂ ಬಸವರಾಜ ಬೊಮ್ಮಾಯಿ, ನಿಮ್ಮ ಸರ್ಕಾರದಲ್ಲಿ ಯಾಕೆ ಯೋಜನೆ ಜಾರಿ ಮಾಡಲಿಲ್ಲ ಒಂದುವರೆ ವರ್ಷ ಮೈತ್ರಿ ಸರ್ಕಾರದ ಪಾಲುದಾರರಾಗಿದ್ರಿ. ಡಿಪಿಆರ್ ಮಾಡಲು ಐದು ವರ್ಷ ಸಮಯ ತೆಗೆದುಕೊಂಡರು’. ಇದು ರಾಜಕೀಯ ಪ್ರೇರಿತ ಪಾದಯಾತ್ರೆ ಎಂದು ಟೀಕಿಸಿದರು.
Key words: Creation – Special -Task Force – – Prohibition Conversion Act-CM- Basavaraja Bommai