ಬೆಂಗಳೂರು,ಜೂನ್,22,2021(www.justkannada.in): ರಾಜ್ಯದಲ್ಲಿ ಶಾಲಾ, ಕಾಲೇಜು ಆರಂಭಿಸಲು ರಾಜ್ಯ ಸರ್ಕಾರಕ್ಕೆ ಡಾ.ದೇವಿಶೆಟ್ಟಿ ಸಮಿತಿ ಸಲಹೆ ನೀಡಿದೆ ಎನ್ನಲಾಗಿದೆ.
ಹಂತಹಂತವಾಗಿ ಶಾಲಾ ಕಾಲೇಜುಗಳನ್ನ ತೆರೆಯಬೇಖು. ಮೊದಲ ಹಂತದಲ್ಲಿ ಕಾಲೇಜುಗಳನ್ನ ತೆರೆಯಬೇಕು. 2ನೇ ಹಂತದಲ್ಲಿ 7 ರಿಂದ 10ನೇ ತರಗತಿ ತೆರೆಯಬೇಕು. 3ನೇ ಹಂತದಲ್ಲಿ 5 ರಿಂದ 7ನೇ ತರಗತಿಯನ್ನ ತೆರೆಯಬೇಕು ಎಂದು ಡಾ.ದೇವಿಶೆಟ್ಟಿ ಸಮಿತಿ ಸಲಹೆ ನೀಡಿದೆ.
ಹಾಗೆಯೇ ಶಿಕ್ಷಕರು ಶಾಲೆ ಸಹಾಯಕರಿಗೆ ಲಸಿಕೆ ನೀಡಬೇಕು. ಸ್ಕೂಲ್ ಬಸ್ ಡ್ರೈವರ್ ಗೂ ಲಸಿಕೆ ನೀಡಬೇಕು. ಶಾಲೆಯಲ್ಲಿ ದೈಹಿಕ ಅಂತರ ಕಾಪಾಡಬೇಕು. ಮಕ್ಕಳು ಒಬ್ಬರ ವಸ್ತು ಮತ್ತೊಬ್ಬರು ಮುಟ್ಟದಂತೆ ನಿಗಾ ವಹಿಸುವುದು ಸೇರಿ ಹಲವು ಸಲಹೆಗಳನ್ನ ದೇವಿಶೆಟ್ಟಿ ಸಮಿತಿ ನೀಡಿದೆ ಎನ್ನಲಾಗಿದೆ.
Key words: Dr Devishetty –Committee- advises – starting – college -school