ವರಮಹಾಲಕ್ಷ್ಮಿ ಹಬ್ಬ ಹಿನ್ನೆಲೆ: ಕೋವಿಡ್ ನಿಯಮ ನಿರ್ಲಕ್ಷಿಸಿ ಮಾರುಕಟ್ಟೆಗಳಲ್ಲಿ ಹೂ ಹಣ್ಣು ಖರೀದಿಗೆ ಮುಗಿಬಿದ್ಧ ಜನ.  

ಬೆಂಗಳೂರು,ಆಗಸ್ಟ್,19,2021(www.justkannada.in):  ನಾಳೆ ವರಮಹಾಲಕ್ಷ್ಮಿ ಹಬ್ಬ ಹಿನ್ನೆಲೆ ರಾಜ್ಯಾದ್ಯಂತ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಜೋರಾಗಿದೆ. ಕೊರೊನಾ 3ನೇ ಅಲೆ ಭೀತಿ ನಡುವೆಯೂ ಜನರು ಮುಗಿಬಿದ್ದು ಹೂ, ಹಣ್ಣು ಖರೀದಿಸುವಲ್ಲಿ ಬ್ಯುಸಿಯಾಗಿದ್ದಾರೆ.

ಈ ಮಧ್ಯೆ ಮಾರುಕಟ್ಟೆಗಳಲ್ಲಿ ಮಾಸ್ಕ್ ಧರಿಸದೇ ಸಾಮಾಜಿಕ ಅಂತರ ಮಾಯವಾಗಿದೆ. ಬೆಂಗಳೂರಿನ ಕೆ.ಆರ್ ಮಾರುಕಟ್ಟೆ, ಗಾಂಧಿ ಬಜಾರ್, ಕೆ.ಆರ್ ಪುರಂ ಸೇರಿ ನಗರದ ಬಹುತೇಕ ಮಾರುಕಟ್ಟೆಗಳಲ್ಲಿ ಹೂವು, ಹಣ್ಣು ಖರೀದಿಗೆ ಜನ ಜನಜಂಗುಳಿಯೇ ಸೇರಿದೆ. .ಕೆಆರ್.ಪುರಂ ರೈತರ ಮಾರುಕಟ್ಟೆಗೆ ಜನರು ಮುಗಿಬಿದ್ದಿದ್ದು, ಸುಮಾರು ಎರಡು ಕಿಲೋಮೀಟರ್ ಗೂ ಹೆಚ್ಚು ದೂರ ಟ್ರಾಫಿಕ್ ಜಾಮ್ ಆಗಿದೆ. ಬೇಕಾಬಿಟ್ಟಿಯಾಗಿ ರಸ್ತೆ ಮಧ್ಯೆ ವಾಹನಗಳನ್ನು ಪಾರ್ಕಿಂಗ್ ಮಾಡುತ್ತಿದ್ದಾರೆ ಎನ್ನಲಾಗಿದೆ.

ಕೆ.ಆರ್ ಮಾರುಕಟ್ಟೆ ಗಾಂಧಿಬಜಾರ್ ನಲ್ಲೂ ಹೂವು, ಹಣ್ಣು ಖರೀದಿಗೆ ಜನರು ಮುಗಿಬಿದ್ದಿದ್ದು, ದೈಹಿಕ ಅಂತರ ಇಲ್ಲದೇ, ಮಾಸ್ಕ್ ಕೂಡ ಧರಿಸದೇ ಜನರು ವ್ಯಾಪಾರ ವಹಿವಾಟು ಮಾಡುತ್ತಿದ್ದಾರೆ ಎನ್ನಲಾಗಿದೆ.

ಇನ್ನು ಬೆಳಗಾವಿ ಹೂವು ಮಾರುಕಟ್ಟೆಯಲ್ಲೂ ಕಿಕ್ಕಿರಿದು ಜನಸೇರಿದ್ದು ಖರೀದಿಯಲ್ಲಿ ತೊಡಗಿದ್ದಾರೆ. ಹುಬ್ಬಳ್ಳಿಯಲ್ಲೂ ವರಮಹಾಲಕ್ಷ್ಮೀ ಹಬ್ಬ ಆಚರಣೆ ಹಿನ್ನೆಲೆ ಖರೀದಿ ಜೋರಾಗಿ ನಡೆಯುತ್ತಿದ್ದು,  ಗಾಂಧಿ ಮಾರುಕಟ್ಟೆಯಲ್ಲಿ ಜನ ಜಾತ್ರೆಯೆ ಸೇರಿದೆ. ಮಾಸ್ಕ್ ಹಾಕದೆ, ದೈಹಿಕ ಅಂತರ ಮರತು ಜನ ನಿರ್ಲಕ್ಷ್ಯ ತೋರುತ್ತಿದ್ದಾರೆ ಎನ್ನಲಾಗಿದೆ. ಹಾಗೆಯೇ ಯಾದಗಿರಿಯಲ್ಲೂ ನಗರದ ತರಕಾರಿ ಮಾರುಕಟ್ಟೆಗೆ ಜನ ಖರೀದಿಗಾಗಿ ಬರುತ್ತಿದ್ದಾರೆ. ಮಾರುಕಟ್ಟೆಗೆ ಕಡಿಮೆ ಸಂಖ್ಯೆಯಲ್ಲಿ ಬಂದರೂ ಕೊವಿಡ್ ರೂಲ್ಸ್ ಬ್ರೇಕ್ ಮಾಡಿದ್ದಾರೆ. ಕೊರೊನಾ 3ನೇ ಅಲೆಯ ಮೂನ್ಸೂಚನೆ ಇದ್ದರೂ ಯಾವುದಕ್ಕೂ ಕೇರ್ ಮಾಡದ ಜನ ಖರೀದಿಯಲ್ಲಿ ತೊಡಗಿರುವ ದೃಶ್ಯ ಕಂಡು ಬಂದಿದೆ.

ENGLISH SUMMARY…

People throng markets to purchase essentials for the first festival of the season Varamahakshmi festival
Bengaluru, August 19, 2021 (www.justkannada.in): Markets in all the places across the state witnessed a huge rush as people are busy purchasing essential goods for the Varamahalakshmi festival which is celebrated on Friday.
As usual, a majority of the people have forgotten to follow the COVID precautionary measures. People were found busy purchasing festival goods without maintaining social distancing and wearing masks. A huge rush was found at the K.R. Market, Gandhi Bazar, K.R. Puram, and other markets in Bengaluru. The road near the K.R. Puram market witnessed heavy traffic jams up to two kilometers.
The scene was not different in other places of the state. People thronged the markets in Belagavi, Hubballi, and other places also to purchase festival material.
Keywords: Varamahalakshmi festival/ huge rush/ markets/ busy/ no social distancing

Key words: Varamahalakshmi festival – People – buy -flowers -markets – covid rule.