ನವದೆಹಲಿ,ಜನವರಿ,1,2022(www.justkannada.in): ಹೊಸ ವರ್ಷದಂದೇ ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ಬಳಕೆದಾರರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ 102.50 ರೂ. ಇಳಿಕೆಯಾಗಿದೆ.
ಇಂದಿನಿಂದ ಜಾರಿಗೆ ಬರುವಂತೆ ವಾಣಿಜ್ಯ ಬಳಕೆಯ 19 ಕೆಜಿ ಸಿಲಿಂಡರ್ ಬೆಲೆ ರೂ.102.50 ರೂ. ಇಳಿಕೆಯಾಗಿದೆ. 19 ಕೆಜಿ ವಾಣಿಜ್ಯ ಸಿಲಿಂಡರ್ ಇಂದಿನಿಂದ ದೆಹಲಿಯಲ್ಲಿ 1998.50 ರೂ.ಗಳಾಗಲಿದೆ ಎಂದು ತಿಳಿದು ಬಂದಿದೆ.
ಕಳೆದ ತಿಂಗಳು ಡಿಸೆಂಬರ್ 1 ರಂದು 19 ಕೆಜಿ ಎಲ್ ಪಿಜಿ ಸಿಲಿಂಡರ್ ಗಳ ಬೆಲೆಗಳನ್ನು 100 ರೂ. ಹೆಚ್ಚಿಸಲಾಗಿತ್ತು. ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ಗಳ ಬೆಲೆ 2,101 ರೂ.ಗಳಿಗೆ ಏರಿತ್ತು. ಇದು 2012-13 ರ ನಂತರ 19 ಕೆಜಿ ವಾಣಿಜ್ಯ ಸಿಲಿಂಡರ್ ನ ಎರಡನೇ ಅತಿ ಹೆಚ್ಚಿನ ಬೆಲೆಯಾಗಿತ್ತು.
ವಾಣಿಜ್ಯ ಬಳಕೆಯ ಎಲ್ ಪಿ ಜಿ ಸಿಲಿಂಡರ್ ಬೆಲೆ ಹೆಚ್ಚಳವಾದ ಕಾರಣ, ರೆಸ್ಟೋರೆಂಟ್ ಗಳು, ಹೋಟೆಲ್ ಮತ್ತು ಚಹಾ ಮಳಿಗೆಗಳು ಸೇರಿದಂತೆ ಇತ್ಯಾದಿಗಳ ಮಾಲೀಕರಿಗೆ ರಿಲೀಫ್ ಸಿಕ್ಕಂತೆ ಆಗಿದೆ.
Key words: Commercial- Use -Cylinder –Price- Rs 102.50 -Decrease
ENGLISH SUMMARY…
Prices of commercial LPG cylinders reduced by Rs.102.50
New Delhi, January 1, 2022 (www.justkannada.in): The Union government has issued orders reducing the price of commercial LPG cylinders by Rs. 102.50.
The prices of 19 KG commercial LPG cylinders have been reduced by Rs. 102.50 as applicable from today. Accordingly the price of one commercial LPG cylinder in New Delhi will be Rs. 1998.50.
It can be recalled here that the price of 19 KG LPG cylinders was increased by Rs. 100 on December 1. The price of each cylinder in Delhi was. Rs. 2,101, which is said to be second highest price of the commercial LPG cylinders since 2012-13.
Reduction in the price of commercial LPG cylinders has brought a little relief to the owners of hotels, restaurants and other eateries.
Keywords: Commercial LPG cylinder/ prices slashed by Rs. 102.50