ವೀಕೆಂಡ್ ಕರ್ಫ್ಯೂ ಉಲ್ಲಂಘನೆ ಆರೋಪ ; ಡಿಕೆಶಿ, ಸಿದ್ಧರಾಮಯ್ಯ ಸೇರಿ 30 ಜನರ ವಿರುದ್ಧ ಪ್ರಕರಣ ದಾಖಲು

ರಾಮನಗರ,ಜನವರಿ, 10,2022(www.justkannada.in): ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೋನಾ ಸೋಂಕು ತಡೆಗಾಗಿ ವೀಕೆಂಡ್ ಕರ್ಫ್ಯೂ ಜಾರಿ ಮಾಡಿಲಾಗಿದ್ದು ಈ ನಡುವೆಯೂ ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ನಾಯಕರು ಪಾದಯಾತ್ರೆ ನಡೆಸುತ್ತಿರುವ ಹಿನ್ನೆಲೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಮಾಜಿ ಸಿಎಂ ಸಿದ್ಧರಾಮಯ್ಯ ಸೇರಿ 30 ಜನರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.

ವಿಕೇಂಡ್ ಕರ್ಫ್ಯೂ ಉಲ್ಲಂಘನೆ ಆರೋಪದ ಮೇಲೆ ವಿಪತ್ತು ನಿರ್ವಹಾಣಾ ಕಾಯ್ದೆಯಿಡಿ ಸಾತನೂರು ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ ಎನ್ನಲಾಗಿದೆ.

ಮೊದಲ ದಿನವಾದ ನಿನ್ನೆಪಾದಯಾತ್ರೆ 15 ಕಿಲೋ ಮೀಟರ್ ಸಾಗಿ ಬಂದಿದೆ. ರಾತ್ರಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಊರು ದೊಡ್ಡಆಲಹಳ್ಳಿಗೆ ಪಾದಯಾತ್ರೆ ತಲುಪಿದೆ. ಸದ್ಯ ವೀಕೆಂಡ್ ಕರ್ಫ್ಯೂ ಉಲ್ಲಂಘಿಸಿ ಪಾದಯಾತ್ರೆ ಮಾಡಿರುವ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಸೇರಿದಂತೆ 30 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

ಕೊರೋನಾ ನಿಯಮಗಳನ್ನ ಪಾಲಿಸಿ ಪಾದಯಾತ್ರೆ ಮಾಡಿಯೇ ಮಾಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಿಳಿಸಿದ್ದರು.

Key words: Weekend- curfew- violation-Case- 30 persons

ENGLISH SUMMARY…

Violation of weekend curfew rules: Cases registered against DKShi, Siddaramaiah and 30 others
Mandya, January 10, 2022 (www.justkannada.in): Cases have been registered against KPCC President D.K. Shivakumar, former Chief Minister Siddaramaiah, and 30 others who participated in the padayatra taken out against the State Government demanding implementation of the Mekedatu project, violating COVID Curfew rules.
An FIR has been registered at the Satanur Police Station under the Disaster Management Act, alleging violation of weekend curfew rules.
In the meantime, the first day of the padayatra covered 15 km. The members who participated in the padayatra reached Doddalahalli Village, the native of KPCC President D.K. Shivakumar, yesterday night. Cases have been registered against D.K. Shivakumar, Siddaramaiah, and 30 others for participating in the padayatra violating the COVID weekend curfew rules.
Keywords: COVID/ weekend curfew/ padayatra/ cases registered/ D.K. Shivakumar/ Siddaramaiah