ಶ್ರೀ ಧರ್ಮರಾಯಸ್ವಾಮಿ ದೇವಾಲಯಕ್ಕೆ ರಾಜವಂಶಸ್ಥ ಯದುವೀರ್ ಭೇಟಿ: ಪುಸ್ತಕ ಬಿಡುಗಡೆ.

ಬೆಂಗಳೂರು,ನವೆಂಬರ್,8,2021(www.justkannada.in): ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಶ್ರೀ ಧರ್ಮರಾಯಸ್ವಾಮಿ ದೇವಾಲಯಕ್ಕೆ  ಭೇಟಿ ನೀಡಿ ದೇವರ ದರ್ಶನ ಪಡೆದರು.

ದೇಗುಲಕ್ಕೆ ಭೇಟಿ ನೀಡಿದ ಯದುವೀರ್ ಅವರಿಗೆ ಪೂರ್ಣ ಕುಂಭ ಸ್ವಾಗತ, ಡೊಳ್ಳು ಕುಣಿತ, ಮೇಳ ವಾದ್ಯದ ಮೂಲಕ  ಸ್ವಾಗತಿಸಲಾಯಿತು. ಇದೇ ವೇಳೆ  ಶ್ರೀ ಧರ್ಮರಾಯಸ್ವಾಮಿ ದೇವಾಲಯಕ್ಕೂ ಇರುವ ಅವಿನಾಭಾವ ಸಂಬಂಧ ಕುರಿತ “ಧರ್ಮೋವಿವರ್ಧತಿ ” ಪುಸ್ತಕ ಬಿಡುಗಡೆ ಮಾಡಿದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ , ತಾಯಿ ಅಧಿಶಕ್ತಿ ಸಮೇತ ಪಂಚ ಪಾಂಡವರ ಆಶೀರ್ವಾದ ಸ್ವೀಕರಿಸಿದರು.

ಮೊದಲು ದೇವಾಲಯದ ಮುಂಭಾಗದಲ್ಲಿರುವ ಅರಳಿಕಟ್ಟೆಯಲ್ಲಿ  ಬೇವಿನ ಮರದ ಸಸಿಯನ್ನು ನೆಟ್ಟು,  ನಂತರ ದೇವಾಲದಯದ ಎಡ ಭಾಗದಲ್ಲಿರುವ ಶಕ್ತಿ ಗಣಪತಿ ದೇವಾಲಯದಲ್ಲಿ ಪೂಜೆ ಸ್ವೀಕರಿಸಲಾಯಿತು. ನಂತರ ದೇವಾಲಯದ ಬಲ ಭಾಗದಲ್ಲಿರುವ ಗ್ರಾಮದೇವತೆ ಮುತ್ಯಾಲಮ್ಮ ದೇವಿ ಗುಡಿಗೆ ಭೇಟಿ ನೀಡಿ ಪೂಜೆ ಸ್ವೀಕರಿಸಲಾಯಿತು. ನಂತರ ಶ್ರೀ ಧರ್ಮರ್ಯಸ್ವಾಮಿ ದೇವಾಲಯದ ಪ್ರದಕ್ಷಿಣೆ ಮಡಿ ದೇವಾಲಯದ ಇತಿಹಾಸವನ್ನ ಯದುವೀರ್  ಅವರಿಗೆ ಪರಿಚಯಿಸಲಾಯಿತು. ಆನಂತರ ವೇದ ಪಂಡಿತರಿಂದ ಅರ್ಚನೆ ಹಾಗೂ ದೇವಾಲಯದಲ್ಲಿ ಮಹಾಮಂಗಳಾರತಿ ಸ್ವೀಕರಿಸಿ ಯದುವೀರ್ ಧ್ಯಾನ ಮಾಡಿದರು.

ನಂತರ ದೇವಾಲಯದಲ್ಲಿ ಕೃತಕವಾಗಿ ನಿರ್ಮಿಸಿದ ದರ್ಬಾರ್ ಬಹುಪರಾಗ್ ಮೂಲಕ ಸಿಂಹಾಸನರೂಡರಾದರು. ಇದೇ ಸಂದರ್ಭದಲ್ಲಿ ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯರ್, ಶ್ರೀ ಜಯಚಾಮರಾಜ ಒಡೆಯರ್ ಅವರನ್ನು ಸ್ಮರಿಸಿದ ಯದುವೀರ್ ಅವರು ಶ್ರೀ ಧರ್ಮರಾಯಸ್ವಾಮಿ ದೇವಾಲಯದ ಹಾಗೂ ವಹ್ನಿಕುಲಸ್ತರ ಇತಿಹಾಸ ಸಂಶೋಧನೆ ಮಾಡಲು ಸಹಕರಿಸಿದ ರೀತಿ ಹಾಗೂ ವಹ್ನಿಕುಲ ಜನಾಂಗದ ಅಭಿವೃದ್ಧಿ ಹಾಗೂ ದೇವಾಲಯದ ಅಭಿವೃದ್ಧಿಗೆ ಶ್ರಮಿಸಿದ ಬಗ್ಗೆ ಸ್ಮರಿಸಿಕೊಂಡರು.

ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ವಹ್ನಿಕುಲಸ್ಥರು ಪ್ರಕೃತಿ ಹಾಗೂ ಸನಾತನ ಆಚರಣೆ ಸಂರಕ್ಷಿಸಿ ಕೊಂಡಿರುವ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.

ಈ ವೇಳೆ ಪಿ.ಆರ್. ರಮೇಶ್(MLC) , ಉದಯ್ ಬಿ ಗರುಡಾಚಾರ್(MLA), ರಾಜೀವ್ ನೃಪತುಂಗ(ಲೇಖಕರು),  ದಿಲೀಪ್ ಕ್ಷತ್ರಿಯ, ಚಲಕರಿ ಚೇತನ್(ಪ್ರಕಾಶಕರು), ಮಂಜುನಾಥ್, ಸುರೇಶ ರಾಜು, ಬಾಲಕೃಷ್ಣ, ಮತ್ತು ಹಲವಾರು ಗಣ್ಯರು,ಉಪಸ್ಥಿತರಿದ್ದರು. ಮಹಾರಾಜರು  ವಹ್ನಿಕುಲಸ್ತರ ಹಳೆಯ ಕುಂಜಣ್ಣ ಗರಡಿ ಮೆನೆಗೂ ಸಹ ಭೇಟಿ ನೀಡಿ ಪೈಲ್ವಾನರ ತಾಲೀಮನ್ನು ವೀಕ್ಷಿಸಿ ಪುಳಕಿತರಾದರು.

Key words: mysore- Yadavir-visits -Sri Dharmaraswamy Temple

ENGLISH SUMMARY…

Scion of the Mysuru royal family Yaduveer visits Sri Dharmarayaswami temple: Releases book

Mysuru, November 8, 2021 (www.justkannadain): Scion of the Mysuru royal family Yaduveer Krishnadatta Chamaraja Wadiyar visited the Sri Dharmarayaswamy temple today and had the darshan of the deity.

He was given a traditional welcome, led by several folk dances and music troupes. He released a book titled “Dharmovivardhati,” having content about the relationship of the Mysuru kings with Sri Dharamarayaswamy temple.

MLC P.R. Ramesh, MLA Uday B. Garudachar, author Rajeev Nrupathunga, Dilip Kshatriya, Chalakari Chetan (Publisher), Manjunath, Suresh Raju, Balakrishna, and several other dignitaries were present.

Keywords: Scion of royal family/ Yaduveer Krishnadatta Chamaraja Wadiyar/ Sri Dharmarayswami temple