ನವದೆಹಲಿ,ನವೆಂಬರ್,26,2021(www.justkannada.in): ಕುಟುಂಬ ರಾಜಕಾರಣ ಪ್ರಜಾಪ್ರಭುತ್ವಕ್ಕೆ ಮಾರಕ. ದೇಶಕ್ಕೆ ಅಪಾಯಕಾರಿಯಾದದ್ದು ಎಂದು ಪ್ರಧಾನಿ ಮೋದಿ ಕಟುವಾಗಿ ಟೀಕಿಸಿದರು.
ಇಂದು ಸಂವಿಧಾನ ದಿನ ಹಿನ್ನೆಲೆ ಸಂಸತ್ ಭವನದಲ್ಲಿ ಆಯೋಜಿಸಿದ್ಧ ಕಾರ್ಯಕ್ರಮದಲ್ಲಿ ಮಾತನಾಡಿದ ಪಾಲ್ಗೊಂಡು ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರಿಗೆ ನಮನ ಸಲ್ಲಿಸಿದರು. ಬಳಿಕ ಮಾತನಾಡಿದ ಪ್ರಧಾನಿ ಮೋದಿ, ಭಾರತದ ಸಂವಿಧಾನದಲ್ಲಿ ಪ್ರಜಾ ಪ್ರಭುತ್ವಕ್ಕೆ ವಿಶೇಷ ಸ್ಥಾನಮಾನವಿದೆ. ರಾಜಕೀಯ ಪಕ್ಷಗಳಿಗೆ ವಿಶೇಷ ಮಹತ್ವವಿದೆ. ಸಂವಿಧಾನದ ಕೆಲವು ಆದರ್ಶಗಳನ್ನ ರಾಜಕೀಯ ಪಕ್ಷಗಳು ಪಾಲಿಸುತ್ತಿಲ್ಲ. ಕುಟುಂಬ ರಾಜಕೀಯ ಪ್ರಜಾಪ್ರಭುತ್ವಕ್ಕೆ ಮಾರಕ ನಮ್ಮದು ಕುಟುಂಬವಾದದ ಪಕ್ಷ ಅಲ್ಲ.ಕೆಲವು ಪಕ್ಷಗಳಲ್ಲಿ ಕುಟುಂಬದಿಂದ ಕುಟುಂಬಕ್ಕ್ಕಾಗಿ ರಾಜಕೀಯ. ಪಕ್ಷದ ಎಲ್ಲಾ ನಿರ್ಧಾರಗಳನ್ನು ಒಂದೇ ಕುಟುಂಬ ನಿರ್ಧರಿಸುತ್ತದೆ. ಯಾವುದೇ ಕುಟುಂಬ ಪಕ್ಷವನ್ನ ಹಿಡಿತದಲ್ಲಿಟ್ಟುಕೊಳ್ಳಬಾರದು. , ಸಂವಿಧಾನದ ದಿನ ಕುಟುಂಬ ರಾಜಕೀಯದ ಬಗ್ಗೆ ಚಿಂತಿಸುವ ಅಗತ್ಯವಿದೆ ಎಂದು ಹೇಳಿದರು.
ಈ ದಿನ ಬಾಬಾ ಸಾಹೇಬ್ ಅಂಬೇಡ್ಕರ್ ರಾಜೇಂದ್ರ ಪ್ರಸಾದ್ ರದ್ದು. ಅಂಬೇಡ್ಕರ್ ನಮಗೆ ಈ ಉಡುಗರೆ ನೀಡಿದ್ದಾರೆ. ಈ ದಿನ ಈ ಸದನಕ್ಕೆ ನಮಸ್ಕರಿಸಬೇಕು. ಹೋರಾಟಗಾರರು ಭಾರತದ ಭವಿಷ್ಯ ನಿರ್ಧರಿಸಿದ್ದಾರೆ . ಇಂದು ಬಾಪೂಜಿಗೆ ನಾವು ನಮಿಸಬೇಕು. ಗಾಂಧೀಜಿಯಿಂದ ನಮಗೆ ಸ್ವಾತಂತ್ರ್ಯ ಲಭಿಸಿತು. ಇಂದು ನವೆಂಬರ್ 26 ದುಃಖದ ದಿನವೂ ಹೌದು. ಮುಂಬೈ ಮೇಲೆ ಉಗ್ರರು ದಾಳಿ ನಡೆಸಿದ ದಿನವೂ ಹೌದು. ಸಂವಿಧಾನ ಚಿಕ್ಕ ಚಿಕ್ಕ ರಾಜ್ಯಗಳನ್ನ ಒಂದು ಮಾಡಿ ಭಾರತವನ್ನ ನಿರ್ಮಿಸಿತು.
ನಮ್ಮನ್ನು ಸಂವಿಧಾನ ಎಲ್ಲಿಗೆ ಕರೆದೊಯ್ಯಲಿದೆ ಎಂದು ಚರ್ಚಿಸಬೇಕು . ನಮ್ಮ ಮುಂದಿನ ತಲೆಮಾರು ಸಂವಿಧಾನದ ಬಗ್ಗೆ ತಿಳಿದುಕೊಳ್ಳಬೇಕು. ದೇಶವನ್ನ ಸಂವಿಧಾನ ಹೇಗೆ ಒಂದು ಮಾಡಿತು ಎಂಬುದನ್ನ ಅರಿಯನೇಕು ಎಂದು ಪ್ರಧಾನಿ ಮೋದಿ ನುಡಿದರು.
Key words: Constitution Day – Parliament House-Prime Minister -Modi – critic- family politics