ಸೆಪ್ಟಂಬರ್ 10ಕ್ಕೆ ಮೈಸೂರಿನಲ್ಲಿ 40 ನೇ ಚಾತುರ್ಮಾಸ್ಯ ಸೀಮೋಲಂಘನ ಸ್ವಾಗತ ಮತ್ತು ಪಾದಕ ಪೂಜಾ ಕಾರ್ಯಕ್ರಮ

ಮೈಸೂರು,ಸೆಪ್ಟಂಬರ್,9,2022(www.justkannada.in):  ವಿಶ್ವಕರ್ಮ ಬ್ರಾಹ್ಮಣ ಜಗದ್ಗುರು ಪೀಠದ ಅರೇಮಾದನಹಳ್ಳಿಯಲ್ಲಿ ನಡೆಯುತ್ತಿರುವ ಪರಮಪೂಜ್ಯ ಅನಂತಶ್ರೀ ವಿಭೂಷಿತ ಶಿವಸುಜ್ಲಾನ ತೀರ್ಥಮಹಾಸ್ವಾಮಿಜಿಗಳವರ 40 ನೇ ಚಾತುರ್ಮಾಸ್ಯ ಸೀಮೋಲಂಘನ ಸ್ವಾಗತ ಮತ್ತು ಪಾದಕ ಪೂಜಾ ಕಾರ್ಯಕ್ರಮವು ಮೈಸೂರು ಮೊಹಲ್ಲಾ ಗನ್ ಹೌಸ್ ಹತ್ತಿರ ಉತ್ತರಾಧಿ ಮಠದ ರಸ್ತೆಯಲ್ಲಿರುವ ಶ್ರೀ ವಿದ್ಯಾ ಭಾರತಿ ಕಲ್ಯಾಣ ಮಂಟಪದಲ್ಲಿ ಸೆಂ. 10 ರಂದು ಶನಿವಾರ 4 ಗಂಟೆಗೆ ಸೀಮೋಲಂಘನ ಪೂಜಾ ಕಾರ್ಯಕ್ರಮ ನಡೆಯಲಿದೆ ಎಂದು ಶ್ರೀ ‌ಮಠದ ಶಿಷ್ಯ ರಾಮನಾಥಪುರ ಲೋಕೇಶ್ ತಿಳಿಸಿದರು.

ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ಅರೇಮಾದನಹಳ್ಳಿ ಶ್ರೀ ಪೀಠದ 40 ನೇ ಚಾತುಮ್ಯಾಸ್ಯ ಕಾರ್ಯಕ್ರಮ ಮುಗಿಯುವ ಹಿನ್ನೆಲೆಯಲ್ಲಿ ಸೆಂ 10 ರಂದು ಶನಿವಾರ ಸಂಜೆ 4 ಗಂಟೆಗೆ ಮೈಸೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಶ್ರೀ ಅರೇಮಾದನಹಳ್ಳಿ ಜಗದ್ಗುರು ಶ್ರೀ ಶಿವಸುಜ್ಲಾನಮಹಾಸ್ಬಾಮಿಜಿಯವರು ದಿವ್ಯ ಸಾನಿಧ್ಯ ವಹಿಸುವರು.

ಮಾಜಿ ಸಚಿವ ಹಾಗೂ ಶಾಸಕ ರಾಮದಾಸ್ , ಶಾಸಕ ಜಿ.ಟಿ. ದೇವೇಗೌಡ, ಶಾಸಕ ಶ್ರೀ ನಾಗೇಂದ್ರ, ಮಾಜಿ ಶಾಸಕ ಎಂ.ಕೆ. ಸೋಮಶೇಖರ್, ಸೀಮೋಲಂಘನ ಸಮಿತಿ ಅಧ್ಯಕ್ಷರಾದ ಅರ್.ಎನ್. ಜಯತೀರ್ಥ, ಸಲಹೆಗಾರರು‌ ದಿವಾಕರಸ್ವಾಮಿ, ಮೈಸೂರು ಎಸ್.ಪಿ. ನಂದಿನಿ, ಒಕ್ಕೂಟದ ಅಧ್ಯಕ್ಷರು.ಹುಚ್ಚಪ್ಪಾಚಾರ್ , ಡಿ.ವೈ.ಎಸ್ಪಿ. ಮರೀಸ್ವಾಮಿ, ನಿವೃತ್ತ ಅಧಿಕಾರಿ ಮಂಟೇಲಗಾಚಾರ್, ಮುಖಂಡರಾದ ಸ್ವಾಮಿ, ಚಾಯದೇವಿ, ವೆಂಕಟೇಶ್, ರಾಜುದೇಶಾನಿ, ಜಯಕುಮಾರ್, ನಾಗರಾಜ್, ರೇವಣ್ಣ, ಸುಬ್ರಹ್ಮಣ್ಯಚಾರ್ , ತಿಪಟೂರು‌ಮುರುಳಿಧರ, ಮಂಜುನಾಥ್, ರಮೇಶ್, ಚಂದ್ರಶೇಖರ್, ಲೋಕೇಶ್, ರಂಗಪ್ಪ, ಕೆಂಡ್ಡಗಣ್ಣಸ್ವಾಮಿ, ವಿಜಯೇದ್ರಕುಮಾರ್, ಸುರೇಶ್ ಚಾರ್ಯ, ಯೋಗೇಶ್, ಮಹಿಳಾ ಸಮಿತಿ ಸದಸ್ಯರಾದ ದೀನಾಮಣಿ, ಸವೀತ, ಶುಭ ಶ್ರೀ, ರೇಖಾ, ಶೀಲಾ, ಭಾರತಿ, ರೇಖಾ, ಪುಪ್ಪಲತಾ, ಶಾಂತಮ್ಮ, ಶಿಲ್ಪಶ್ರೀ, ಭಾರತಿ, ವೀಣಾ, ದ್ರಾಕ್ಷಯಣಿ, ಮಣಿ,

ಮುಖ್ಯ ಪುರೋಹಿತರು ವೇ. ದಯಾನಂದಶರ್ಮ, ಮಾಧವಶರ್ಮ, ಸುಜ್ಲಾಊರ್ತಿ, ರಾಮಸ್ವಾಮಿ, ಜಯಶಂಕರ, ಪರಮೇಶ್ವರ, ಚಂದ್ರು, ಮುರುಗೇಶ್ ಮುಂತಾದವರು ಸೀಮೋಘನಾ ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದು ಲೋಕೇಶ್ ತಿಳಿಸಿದರು.

key words: 40th Chaturmasya- Seemolanghana -reception -Padaka Puja program – Mysore on 10th September.