ಸ್ನೇಹಮಯಿ ಕೃಷ್ಣರಿಂದ ಲೋಕಾಯುಕ್ತಕ್ಕೆ ಮತ್ತೊಂದು ದೂರು: ಕ್ರಮಕ್ಕೆ ಆಗ್ರಹ

ಮೈಸೂರು,ಅಕ್ಟೋಬರ್,28,2024 (www.justkannada.in):  ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ  ಮತ್ತು ಇಡಿ ತನಿಖೆ ನಡೆಸುತ್ತಿದ್ದು ಇದೀಗ ದೂರುದಾರ ಹಾಗೂ ಆರ್ ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಲೋಕಾಯುಕ್ತಕ್ಕೆ ಮತ್ತೊಂದು ದೂರು ದಾಖಲಿಸಿದ್ದಾರೆ.

50: 50 ಅನುಪಾತದಲ್ಲಿ 928 ನಿವೇಶನ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಸ್ನೇಹಮಯಿ ಕೃಷ್ಣ ಅವರು ದಾಖಲಾತಿ ತಂದು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.  ಸಿಎಂ ಸಿದ್ದರಾಮಯ್ಯ ಅವರ 14 ನಿವೇಶನಗಳ ಉದಾಹರಣೆ  ಇಟ್ಟುಕೊಂಡು ಉಳಿದ ಎಲ್ಲಾ ಕೇಸ್ ಗಳ ಮೇಲೆ ಕ್ರಮಕ್ಕೆ ಸ್ನೇಹಮಯಿ ಕೃಷ್ಣ ಆಗ್ರಹಿಸಿದ್ದಾರೆ.

ಹಿಂದೆ ಆಯುಕ್ತರಾಗಿದ್ದ ಡಿ.ಬಿ ನಟೇಶ್ ಮತ್ತು ದಿನೇಶ್ ಕುಮಾರ್ ಅಧಿಕಾರ ಅವಧಿಯಲ್ಲಿ 928 ನಿವೇಶನಗಳ ಹಂಚಿಕೆಯಲ್ಲಿ ಅತೀ ಹೆಚ್ಚು ಅಕ್ರಮ ನಡೆದಿರುವುದು. ಅಕ್ರಮವಾಗಿ ನಿವೇಶನ ಪಡೆದವರ ಜೊತೆ  ನಟೇಶ್ ಮತ್ತು ದಿನೇಶ್ ಕುಮಾರ್ ಮೇಲೂ ಕ್ರಮ ಕೈಗೊಳ್ಳಬೇಕು ಎಂದು ದೂರುದಾರ ಸ್ನೇಹಮಯಿ ಕೃಷ್ಣ ಆಗ್ರಹಿಸಿದ್ದಾರೆ.

928 ರಲ್ಲಿ ಜಿಟಿ ದೇವಗೌಡರ ಆಪ್ತ ಬಿಲ್ಡರ್  ಮಂಜುನಾಥ್, ಜಿಲ್ಲಾ ಉಸ್ತುವಾರಿ ಸಚಿವರ ಸಹೋದರನ ಮಗ ನವೀನ್ ಬೋಸ್ ಅವರಿಗೂ ಸೆಟಲ್ಮೆಂಟ್ ಡೀಡ್ ಮಾಡಿಕೊಟ್ಟಿದ್ದಾರೆ. ಇದರ ಜೊತೆ ಜಿಟಿ ದೇವೇಗೌಡರ ಆಪ್ತ ಮಂಜುನಾಥ್, ರಾಕೇಶ್ ಪಾಪಣ್ಣ ಸೇರಿದಂತೆ ಹಲವಾರು ಜನರಿಗೆ ಹಂಚಿಕೆಯಾಗಿದೆ. ಈ ಹಗರಣದಲ್ಲಿ ಎಲ್ಲಾ ಪಕ್ಷದ ತಿಮಿಂಗಿಲಗಳು ಇದ್ದಾರೆ. ಅವರ ಮೇಲೆ ಕಾನೂನಿನ ಕ್ರಮ ಆಗಬೇಕು ಎಂದು ಸ್ನೇಹಮಯಿ ಕೃಷ್ಣ ಆಗ್ರಹಿಸಿದ್ದಾರೆ.

Key words: Another, complaint, Snehamai Krishna, Lokayukta