ಹಾಸನ,ಅಕ್ಟೋಬರ್,28,2021(www.justkannada.in): ಹಾಸನದ ಅಧಿದೇವತೆ ಹಾಸನಾಂಬೆಯ ದರ್ಶನಕ್ಕೆ ಬಾಗಿಲು ಓಪನ್ ಆಗಿದ್ದು , ನಾಳೆಯಿಂದ ಸಾರ್ವಜನಿಕರಿಗೆ ದರ್ಶನ ಭಾಗ್ಯ ಸಿಗಲಿದೆ.
ಇಂದು ಅರ್ಚಕರು ಪೂಜೆ ಸಲ್ಲಿಸಿ ಹಾಸನದ ಹಾಸನಾಂಬೆ ದೇಗುಲದ ಬಾಗಿಲು ಓಪನ್ ಮಾಡಿದ್ದಾರೆ. ಮೊದಲ ದಿನ ಆಹ್ವಾನಿತ ಗಣ್ಯರು, ಶಾಸಕರು, ಸಂಸದರು, ನಗರಸಭೆ ಸದಸ್ಯರಿಗೆ ಮಾತ್ರ ದೇವರ ದರ್ಶನಕ್ಕೆ ಅವಕಾಶವಿದ್ದು, ಇಂದು ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ಇಲ್ಲ. 12 ಗಂಟೆ 17 ನಿಮಿಷಕ್ಕೆ ಹಾಸನಾಂಬೆ ಗರ್ಭಗುಡಿಯ ಬಾಗಿಲು ಓಪನ್ ಮಾಡಲಾಗಿದೆ. ಬನ್ನಿ ಕಡಿದು ಶುಭ ಮುಹೂರ್ತ ದಂದು ದರ್ಶನೋತ್ಸವಕ್ಕೆ ಚಾಲನೆ ನೀಡಲಾಗಿದೆ.
ಆಧಿಚುಂಚನಗಿರಿ ಶ್ರೀಗಳಾದ ಡಾ.ನಿರ್ಮಲಾನಂದನಾಥ ಸ್ವಾಮಿಜಿಯವರ ಸಮ್ಮುಖದಲ್ಲಿ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯನವರ ನೇತೃತ್ವದಲ್ಲಿ ದೇಗುಲದ ಬಾಗಿಲು ತೆರೆಯಲಾಗಿದೆ. ಸಚಿವರಾದ ಗೋಪಾಲಯ್ಯ, ಮಾಧುಸ್ವಾಮಿ ಅವರು ತಾಯಿ ಹಾಸನಾಂಬೆಯ ದರ್ಶನ ಪಡೆದರು. ಹಾಸನ ಡಿಸಿ ಗಿರೀಶ್, ಎಸ್ಪಿ ಶ್ರೀನಿವಾಸ್ ಗೌಡ ಸೇರಿ ಹಲವು ಗಣ್ಯರು ಭಾಗಿಯಾಗಿದ್ದರು.
ಪ್ರಸಿದ್ಧ ಹಾಸನಾಂಬ ದೇವಿಯ ಮಹೋತ್ಸವ ಇಂದಿನಿಂದ ಆರಂಭವಾಗಲಿದ್ದು, ನವೆಂಬರ್ 6ರವರೆಗೂ ಈ ಅದ್ಧೂರಿ ಉತ್ಸವ ನಡೆಯಲಿದೆ. ಕೊರೊನಾ ಹಿನ್ನೆಲೆ ಈ ಬಾರಿ ಸರಳವಾಗಿ ಜಾತ್ರೆ ನಡೆಸಲು ಜಿಲ್ಲಾಡಳಿತ ನಿರ್ಧರಿಸಿದ್ದು ಹಾಸನಾಂಬೆ ದರ್ಶನಕ್ಕೆ ವಿಶೇಷ ಪಾಸ್ ವ್ಯವಸ್ಥೆ ಮಾಡಲಾಗಿದೆ. ಕೊವಿಡ್ ಲಸಿಕೆ ಪಡೆದವರಿಗೆ ಮಾತ್ರ ಹಾಸನಾಂಬೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
key words: Open – door -Hassanambe Temple-devotees
ENGLISH SUMMARY…
Hassanamba temple opens: Darshan for devotees from tomorrow
Hassan, October 28, 2021 (www.justkannada.in): The famous Hassanamba temple has been opened, allowing entry of devotees from tomorrow.
The temple was opened today, following pooja to the deity by the priests. Dignitaries, including political leaders, and others were allowed to visit the temple on the first day. The temple was opened at 12.17 today, followed by traditional rituals.
The temple opened in the presence of the Adichuchanagiri Math seer Dr. Nirmalanandanatha Swamiji and District In-charge Minister K. Gopalaiah. Ministers Gopalaiah and Madhuswamy also had the darshan of the deity.
The Hassanamba Utsav will be held till November 6. This time it is decided to conduct the Utsav in a simple manner due to corona. Special bus arrangements has been made for the facility of the people. Entry to the temple will be allowed only for those who have availed COVID vaccination.
Keywords: Hassanamba temple/ open/ Hassan