ಬೆಂಗಳೂರು, ಜನವರಿ 25,2021(www.justkannada.in): ಕೊರೊನಾ ಲಸಿಕೆ ಅಭಿಯಾನದಡಿ, ಈವರೆಗೆ 1,87,211 ಜನರಿಗೆ ಲಸಿಕೆ ನೀಡಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಮಾಧ್ಯಮಗಳ ಜತೆ ಇಂದು ಮಾತನಾಡಿದ ಡಿಸಿಎಂ ಅಶ್ವಥ್ ನಾರಾಯಣ್, 7,94,500 ಡೋಸ್ ಕೋವಿಶೀಲ್ಡ್ ಲಸಿಕೆ ಬಂದಿದೆ. ಕೋವ್ಯಾಕ್ಸಿಕ್ ಲಸಿಕೆ ಮೊದಲಿಗೆ 20,000 ಡೋಸ್ ಬಂದಿತ್ತು. ನಂತರ ಮತ್ತೆ 1,46,240 ಡೋಸ್ ಬಂದಿದೆ. ಒಟ್ಟು 1,87,211 ಜನರಿಗೆ ಲಸಿಕೆ ನೀಡಲಾಗಿದೆ. ದೇಶದಲ್ಲಿ ಇದು ಅತಿ ಹೆಚ್ಚು ಎಂದು ತಿಳಿಸಿದರು.
ಲಸಿಕೆಯಿಂದ ಈವರೆಗೆ ಯಾವುದೇ ದೊಡ್ಡ ಮಟ್ಟದ ಅಡ್ಡ ಪರಿಣಾಮ ಆಗಿಲ್ಲ. ಇದು ಅತ್ಯಂತ ಸುರಕ್ಷಿತ ಲಸಿಕೆಯಾಗಿದ್ದು, ಹೆಚ್ಚು ಜನರು ಇದನ್ನು ಪಡೆಯಬೇಕು. ಜನಸಾಮಾನ್ಯರಿಗೆ ನೈತಿಕ ಸ್ಥೈರ್ಯ ತುಂಬಲು ಎರಡನೇ ಹಂತದಲ್ಲಿ ಸಿಎಂ, ಮಂತ್ರಿಗಳಿಗೆ ಲಸಿಕೆ ನೀಡಲು ನಿರ್ಧರಿಸಲಾಗಿದೆ. ಅದೇ ರೀತಿ ರಾಜ್ಯದಲ್ಲಿ ಸುಮಾರು 500 ರಷ್ಟು ಜನಪ್ರಿಯ ವ್ಯಕ್ತಿಗಳಿಗೆ ಲಸಿಕೆ ನೀಡುವಂತೆ ಕ್ರಮ ವಹಿಸಲು ಪ್ರಧಾನಿಗಳಿಗೆ ಕೋರಲಾಗಿದೆ ಎಂದರು.
ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಒಬ್ಬರ ಬಳಿ ಇದ್ದರೆ ನಿರ್ವಹಣೆ ಸುಲಭ. ಕೋವಿಡ್ ಲಸಿಕೆ ಬಂದಿರುವ ಈ ಸಮಯದಲ್ಲಿ ಎರಡೂ ಇಲಾಖೆ ಸಮನ್ವಯದಿಂದ ಕೆಲಸ ಮಾಡಬೇಕು. ಯಾರಿಗೇ ಆದರೂ ಕೊಡಲಿ, ಆದರೆ ಒಬ್ಬರಿಗೇ ಖಾತೆ ನೀಡಲಿ. ಕೊರೊನಾ ತಾರ್ಕಿಕ ಅಂತ್ಯ ಕಾಣಲು ಇದು ಶಾಶ್ವತವಾಗಿ ಒಂದಾಗಬೇಕು. ಮುಂದೆ ಯಾವುದೇ ಸರ್ಕಾರ ಬಂದರೂ ಹೀಗೆಯೇ ಇರಬೇಕು ಎಂದರು.
ಮುಖ್ಯಮಂತ್ರಿಗಳಿಗೆ ಕಠಿಣ ಸವಾಲಿದೆ. ಲಭ್ಯವಿರುವ ಖಾತೆಯನ್ನು ಹಂಚುವುದು ಸಾಹಸದ ಕೆಲಸ. ಈಗ ನಮ್ಮ ಮುಂದೆ ಅತಿ ಹೆಚ್ಚು ಜನರಿಗೆ ಲಸಿಕೆ ನೀಡುವ ಸವಾಲಿದೆ ಎಂದರು.
ENGLISH SUMMARY…..
1.87 lakh people have been Vaccinated in the state so far, no side effects reported: Health Minister Dr.K.Sudhakar
Bengaluru – January 25, 2021: 1,87,211 people have been vaccinated under the ongoing vaccination drive, said Health Minister Dr.K.Sudhakar. He was speaking to the media here on Monday.
State has received 7,94,500 doses of Covi-shield and 20,000 doses of Covaxin earlier. Now additional 1,46,240 doses of Covaxin have arrived and total 1,87,211 people have been administered the vaccine he said.
No side effects reported anywhere, vaccine is completely safe more and more people should come forward to take the vaccine. Chief Minister himself along with other cabinet ministers will be undergoing vaccination in the second phase to boost the morale of the public. We have also requested hon’ble Prime Minister to allow us to vaccinate about 500 popular personalities, said the Minister.
It will be easy for a single Minister to work in tandem with both Health and Medical Education departments. It is necessary for conducting successful vaccination drive. There is a need to merge the departments to eradicate the pandemic. No matter which government is in power, one Minister should handle both the departments. Said Dr.Sudhakar.
It’s a big Challenge for the Chief Minister to allocate the available portfolios. But we have the challenge of vaccinating more and more people as of now. He said.
Key words: 1.87 lakh –people-corona vaccine-health Minister -Dr. K. Sudhakar.