ಮೈಸೂರು,ಮೇ,19,2021(www.justkannada.in): ಪ್ರತಿನಿತ್ಯ ಹತ್ತಾರು ಮನೆಗಳಲ್ಲಿ ಪಾತ್ರೆ ತೊಳದು, ಬಟ್ಟೆ ಒಗೆದು, ಮನೆ ಸ್ವಚ್ಛಗೊಳಿಸುವ ಕೆಲಸದ ಮೂಲಕ ತಮ್ಮ ಜೀವನ ಸಾಗಿಸುವ ಮನೆ ಕೆಲಸದವರಿಗೆ ಮತ್ತು ಪ್ರತಿನಿತ್ಯ ನೂರಾರು ಮನೆಗಳ ತ್ಯಾಜ್ಯ ಸಂಗ್ರಹ ಮಾಡುವ ಪೌರಕಾರ್ಮಿಕರಿಗೆ “ಕೊರೋನ ಕವಚ” ಎನ್ನುವ 1 ಲಕ್ಷ ರೂ.ಗಳ ಅರೋಗ್ಯ ವಿಮೆಯನ್ನು ಉಚಿತವಾಗಿ ಮಾಡಿಸಿ ಅವರಿಗೆ ಆರ್ಥಿಕ ಭದ್ರತೆಯನ್ನು ಒದಗಿಸುವ ಕಾರ್ಯಕ್ರಮವನ್ನು ಬೆಳಕು ಚಾರಿಟಬಲ್ ಟ್ರಸ್ಟ್ ವತಿಯಿಂದ ಹಮ್ಮಿಕೋಳ್ಳಲಾಗಿತ್ತು.
ಬಿಜೆಪಿ ಯುವಮೋರ್ಚಾ ಉಪಾದ್ಯಕ್ಷರಾದ ಕೆ.ಎಂ. ನಿಶಾಂತ್ ಅವರ ನೇತೃತ್ವದಲ್ಲಿ ಇಂದು ಫಲಾನುಭವಿಗಳಿಗೆ ಆರೋಗ್ಯ ವಿಮೆ ಪ್ರಮಾಣ ಪತ್ರವನ್ನು ವಿತರಿಸಿ ಅದರ ಉಪಯೋಗವನ್ನು ತಿಳಿಸಿ ಕೋರೋನಾ ಸೋಂಕಿನ ಬಗ್ಗೆ ಜಾಗೃತಿಮೂಡಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಬಳಿಕ ಮಾತನಾಡಿದ ಕೆ.ಎಂ. ನಿಶಾಂತ್ ಅವರು, ಕೊರೋನಾ ಸೋಂಕಿನ ಆತಂಕದ ನಡುವೆಯೂ ಕೂಡ ಪ್ರತಿ ನಿತ್ಯ 8-10 ಮನೆಗಳಲ್ಲಿ ಕೆಲಸಮಾಡಿಕೋಂಡು 500-600ರೂ ಸಂಬಳ ತೆಗೆದುಕೋಂಡು ಜೀವನ ನಡೆಸುವ ಮನೆ ಕೆಲಸದರು ಮತ್ತು ಪ್ರತಿ ದಿನ ನೂರಾರು ಮನೆಗಳಿಂದ ತ್ಯಾಜ್ಯ ಸಂಗ್ರಹಿಸುವ ಪೌರಕಾರ್ಮಿಕರಿಗೆ ಸೋಂಕು ತಗಲುವ ಅವಕಾಶಗಳು ಹೆಚ್ಚಾಗಿರುವ ಕಾರಣ ಅವರಿಗೆ ಆರ್ಥಿಕ ಭಧ್ರತೆಯನ್ನು ಒದಗಿಸುವ ಉದ್ದೇಶದಿಂದ ಉಚಿತವಾಗಿ ಆರೋಗ್ಯ ವಿಮೆಯನ್ನು ಮಾಡಿಸುತ್ತಿದ್ದೇವೆ. ಒಂದು ಅಂಕಿ ಅಂಶದ ಪ್ರಕಾರ ಜನವರಿಯಿಂದ ಇಲ್ಲಿಯವರೆಗೆ 15 ಲಕ್ಷ ಸೋಕಿತರಿಂದ ಕೋವಿಡ್ ಕಾರಣಕ್ಕೆ ಕ್ಲೈಮ್ ಆಗಿರುವ ವಿಮೆಯ ಮೊತ್ತ ಸುಮಾರು 30ಸಾವಿರ ಕೋಟಿ ರೂಗಳು. ಒಟ್ಟು ಸೋಂಕಿತರಲ್ಲಿ ಕೇವಲ ಶೇಕಡಾ 6ರಷ್ಟು ಮಂದಿ ಮಾತ್ರ ಇದರ ಉಪಯೋಗ ಪಡೆದಿದ್ದಾರೆ. ಹಲವಾರು ಜನ ಹಲವಾರು ರೀತಿಯ ಸೇವಾಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ, ಆದರೆ ಸೋಂಕಿತರ ಸಂಪೂರ್ಣ ಆಸ್ಪತ್ರೆ ವೆಚ್ಚವನ್ನು ಯಾರಿಂದಲೂ ಭರಿಸಲು ಸಾಧ್ಯವಿಲ್ಲ. ಇಂತಹ ಆರೋಗ್ಯ ವಿಮೆಯನ್ನು ಮಾಡಿಸುವುದರಿಂದ ಸೋಂಕಿತರ ಸಂಪೂರ್ಣ ವೆಚ್ಚವನ್ನು ಭರಿಸಿದಂತಾಗುತ್ತದೆ ಹಾಗಾಗಿ ಆರ್ಥಿಕವಾಗಿ ಸಬಲರಾಗಿರುವ ಸಹೃದಯಿಗಳು, ಜನಪ್ರತಿನಿಧಿಗಳು ತಮ್ಮ ಸುತ್ತ ಇರುವ ಬಡಜನರಿಗೆ ಈ ರೀತಿ ಉಪಯೋಗವನ್ನು ಮಾಡಿದರೆ ಹಲವು ಕುಟುಂಬಗಳನ್ನು ಆರ್ಥಿಕ ಮುಗ್ಗಟ್ಟಿನಿಂದ ಕಾಪಾಡಿದಂತಾಗುತ್ತದೆ ಎಂದು ಅಭಿಪ್ರಾಯ ಪಟ್ಟರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಕೆ.ಪಿ. ಮಧುಸೂಧನ್, ಎಂ.ಎನ್ ಧನುಷ್, ದೀಪಕ್, ಪ್ರವೀಣ್, ಅಮೃತೇಶ್, ಮೋಹನ್, ಚೇತನ್, ಸುದರ್ಶನ್ ಉಪಸ್ಥಿತರಿದ್ದರು.
Key words: 1 lakh -free -health insurance -citizens – workers- belaku Charitable Trust