ಬೆಂಗಳೂರು,ಜೂನ್,22,2023(www.justkannada.in): ಕೊಪ್ಪಳದ ಭಾಗ್ಯನಗರದಲ್ಲಿ ವಾಸವಾಗಿರುವ ಅಜ್ಜಿಯೊಬ್ಬರಿಗೆ 1 ಲಕ್ಷ ರೂ. ವಿದ್ಯುತ್ ಬಿಲ್ ಬಂದಿದೆ. ಅವರ ಮನೆಯಲ್ಲಿ ಉರಿಯೋದು ಎರಡು ಬಲ್ಬ್ ಮಾತ್ರ. ಪ್ರತಿ ತಿಂಗಳು ರೂ.70-80 ಬರುತ್ತಿದ್ದ ವಿದ್ಯುತ್ ಬಿಲ್ ಈ ತಿಂಗಳು ರೂ. 1 ಲಕ್ಷ ರೂ ಬಂದಿದ್ದು ಅಜ್ಜಿ ಆತಂಕಕ್ಕೊಳಗಾಗಿದ್ದಾರೆ.
ಆದರೆ ಈ ಕುರಿತು ಮಾತನಾಡಿರುವ ಇಂಧನ ಸಚಿವ ಕೆ.ಜೆ ಜಾರ್ಜ್ , ಕೆಲವೆಡೆ ಮೀಟರ್ ಸಮಸ್ಯೆಯಿಂದ ವಿದ್ಯುತ್ ದರ ಹೆಚ್ಚಳ ಆಗಿದೆ. ಕೊಪ್ಪಳದಲ್ಲೂ ಅಜ್ಜಿ ಮನೆಗೆ 1 ಲಕ್ಷ ರೂ. ಕರೆಂಟ್ ಬಿಲ್ ಬಂದಿದೆ. ಮೀಟರ್ ಸಮಸ್ಯೆಯಿಂದ 1 ಲಕ್ಷ ರೂ. ಕರೆಂಟ್ ಬಿಲ್ ಬಂದಿದೆ. ಅಜ್ಜಿ ಅಷ್ಟೊಂದು ಕರೆಂಟ್ ಬಿಲ್ ಕಟ್ಟಬೇಕಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ರಾಜ್ಯದಲ್ಲಿ ವಿದ್ಯುತ್ ದರ ಹೆಚ್ಚಳ ಆಗಿದ್ದಕ್ಕೆ ಕಾರಣ ನಾವಲ್ಲ. ಹಿಂದಿನ ಸರ್ಕಾರವಿದ್ದಾಗ KERC ವಿದ್ಯುತ್ ದರ ಏರಿಕೆ ಮಾಡಿದೆ. ಏಪ್ರಿಲ್, ಮೇ ತಿಂಗಳಿನ ಬಿಲ್ ಕಲೆಕ್ಟ್ ಮಾಡಲು ಹೇಳಿದ್ದಾರೆ. ಒಂದೇ ಬಾರಿ 2 ತಿಂಗಳ ವಿದ್ಯುತ್ ದರ ಏರಿಕೆಯ ಬಿಲ್ ಬಂದಿದೆ. ನಮ್ಮ ಸಾಫ್ಟ್ವೇರ್ ಹಳೆಯದು, ಹೊಸ ಸಾಫ್ಟ್ವೇರ್ ಹಾಕಬೇಕು ಎಂದಿದ್ದಾರೆ.
Key words: 1 lakh – Power Bill-koppal- Clarified – Energy Minister -KJ George