ಮೈಸೂರು,ಫೆ.6,2020(www.justkannada.in): ಸಮ್ಮಿಶ್ರ ಸರ್ಕಾರವನ್ನ ಪತನಗೊಳಿಸಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೇರಲು ಕಾರಣರಾದ 17 ಮಂದಿ ಪೈಕಿ 10 ಮಂದಿ ಶಾಸಕರು ಇಂದು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದು ಈ ನೂತನ ಸಚಿವರಿಗೆ ಮಾಜಿ ಸಿಎಂ ಹೆಚ್,ಡಿ ಕುಮಾರಸ್ವಾಮಿ ವ್ಯಂಗ್ಯವಾಗಿ ಶುಭಕೋರಿದ್ದಾರೆ.
10 ಜನ ಮಂತ್ರಿಗಳಾಗಿ ಮಜಾ ಮಾಡ್ತಾ ಇದ್ರೆ. 105ಜನ ಬಿಜೆಪಿ ಶಾಸಕರು ಕಡುಬು ತಿಂತಾರ…? ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ನೂತನ ಶಾಸಕರಿಗೆ ಖಾರವಾಗಿ ಶುಭಾಶಯ ಕೋರಿದರು.
ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಹೆಚ್.ಡಿ.ಕೋಟೆಗೆ ಆಗಮಿಸಿದ ಮಾಜಿ ಸಿಎಂ ಕುಮಾರಸ್ವಾಮಿಗೆ ಕಾಂಗ್ರೆಸ್ ಶಾಸಕ ಅನಿಲ್ ಚಿಕ್ಕಮಾದು ಹೂ ಗುಚ್ಚ ನೀಡಿ ಸ್ವಾಗತಿಸಿದರು. ಇನ್ನು ಕಂಚಮಳ್ಳಿ ಟೋಲ್ ಬಳಿ ಹೆಚ್ ಡಿ ಕುಮಾರಸ್ವಾಮಿಗೆ ಹೂಗುಚ್ಚ ನೀಡಿ ಸ್ವಾಗತಿಸಿದರು, ಇದೇ ವೇಳೆ ಶಾಸಕ ಅನಿಲ್ ಚಿಕ್ಕಮಾದುಗೆ ಮಗನ ಎಂಗೆಜ್ ಮೆಂಟ್ ಗೆ ಬರುವಂತೆ ಹೆಚ್.ಡಿ ಕುಮಾರಸ್ವಾಮಿ ಆಹ್ವಾನ ನೀಡಿದರು.
ಬಳಿಕ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮಾಧ್ಯಮದ ಜತೆ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಈ ಸರ್ಕಾರದಲ್ಲಿ ಮಧ್ಯಾಹ್ನಕ್ಕೊಂದು ಸಂಜೆಗೊಂದು ತೀರ್ಮಾನ ಆಗ್ತಿದೆ. ಮುಂದೆ ಏನಾಗಲಿದೆ ಎಂಬುದನ್ನ ಕಾದು ನೋಡಣ. ಯಡಿಯೂರಪ್ಪ ಸರ್ಕಾರ ಹೇಗೆ ಉಳಿಸಿಕೊಳ್ಳಬೇಕೆಂಬುದರಲ್ಲಿ ಎಕ್ಸ್ಪರ್ಟ್ ಇದ್ದಾರೆ. ಸರ್ಕಾರ ಬಿಳಿಸೋದು ಹಾಗೂ ಸರ್ಕಾರ ರಚಿಸೋದು ಅವರಿಗೆ ಕರಗತ ಆಗಿದೆ. ಆ ಅನುಭವದಲ್ಲಿ ಈ ಸರ್ಕಾರ ಉಳಿಸಿಕೊಳ್ತಾರೆಂಬ ವಿಶ್ವಾಸ ನನಗೆ ಇದೆ. ಸರ್ಕಾರ ಎಷ್ಟು ದಿನ ಇರುತ್ತೆ ಅಂತ ಹೇಳೋಕೆ ನಾನು ಭವಿಷ್ಯಕಾರನಲ್ಲ ಎಂದರು.
ಮಂಡ್ಯದಲ್ಲಿ ನಾರಾಯಣ ಗೌಡ ಅಭಿವೃದ್ಧಿ ಮಾಡಿ ತೋರಿಸಲಿ….
ಇಂದಿನ ಕಾರ್ಯಕ್ರಮಕ್ಕೆ ನನಗೆ ಆಹ್ವಾನ ಯಾವುದೇ ಆಹ್ವಾನ ಬಂದಿಲ್ಲ. ಪೂರ್ವ ನಿಯೋಜಿತ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗಿದ್ದೇನೆ. ಸಚಿವ ಸಂಪುಟ ವಿಸ್ತರಣೆ ಬಗ್ಗೆ ನಾನು ತಲೆ ಕೆಡಿಸಿಕೊಂಡಿಲ್ಲ. ಬಹಳ ಕಷ್ಟ ಪಟ್ಟು, ಆಸೆ ಹೊತ್ತು ಮಂತ್ರಿಗಳಾಗಿದ್ದಾರೆ. ಅವರಿಂದ ನಾನು ಒಳ್ಳೆಯ ಆಡಳಿತ ನಿರೀಕ್ಷೆ ಮಾಡ್ತಿನಿ. ಮಂಡ್ಯದಲ್ಲಿ ನಾರಾಯಣ ಗೌಡ ಅಭಿವೃದ್ಧಿ ಮಾಡಿ ತೋರಿಸಲಿ. ನಮ್ ಕೈಯಲ್ಲಂತು ಆಗಲಿಲ್ಲ ಆ ಪುಣ್ಯತ್ಮ ಮಾಡಲಿ ಎಂದು ಹೆಚ್.ಡಿಕೆ ಟಾಂಗ್ ನೀಡಿದರು.
ಹೊಸ ಸಚಿವರು ಟೀಕೆ ಮಾಡ್ತಾರೋ ಅಭಿವೃದ್ಧಿ ಮಾಡ್ತಾರೋ ಕಾದು ನೋಡೋಣ. ನಮ್ಮ ಪಕ್ಷಗಳಿಂದ ಹೊರ ಹೋದ ಶಾಸಕರಿಗೆ ತೃಪ್ತಿ ಆಗಿದೆ. ಅವರು ಇದೀಗಾ ಸಂಪತ್ ಭರಿತರಾಗಿದ್ದಾರೆ ಎಂದು ಹೆಚ್.ಡಿಕೆ ಲೇವಡಿ ಮಾಡಿದರು.
Key words: 10 Ministers – 105 BJP MLAs-HD kote-Former CM- HD Kumaraswamy – congratulated – new minister.