ಬೆಂಗಳೂರು,ಮಾರ್ಚ್,2,2022(www.justkannada.in): 10 ಜನ ವಿದ್ಯಾರ್ಥಿಗಳ ಕರೆತಂದು ಬೆನ್ನು ಚಪ್ಪರಿಸಿಕೊಳ್ತಿದ್ದೀರಾ? ಸಾವಿರಾರು ಜನ ಅಲ್ಲಿಯೇ ಬಿಟ್ಟು ಬಂದಿದ್ದೀರಲ್ಲ ಅವರ ಕಥೆ ಏನು..? ಹೀಗೆ ಮಾಡಿದ್ರೆ ಭಾರತ ವಿಶ್ವ ಗುರು ಹೇಗಾಗತ್ತಪ್ಪ. ಹೀಗೆ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಇಂದು ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ, ನಮ್ಮ ರಾಜ್ಯ ಸರ್ಕಾರ ಇನ್ನೂ ನಾಟಕವೇ ಮಾಡ್ತಿದೆ. ಉಕ್ರೇನ್ ಎಂಬಾಸಿಯನ್ನೂ ಕ್ಲೋಸ್ ಮಾಡಲಾಗಿದೆ. ಇಲ್ಲಿಂದ ಹೋದ ನಾಲ್ಕು ಮಂತ್ರಿಗಳು ಯಾರತ್ರ ಮಾತಾಡ್ತಾರೆ?. ಪಾಕಿಸ್ತಾನದವರಿಗೆ ಸೇಫ್ ಪ್ಯಾಸೇಜ್ ಸಿಕ್ಕಿದೆ. ನಮ್ಮ ದೇಶಕ್ಕೆ ಯಾಕೆ ಸಿಕ್ಕಿಲ್ಲ. ಆತಂಕದಲ್ಲಿ ಮನೆಗೆ ಹೋಗಬೇಕು ಅಂತ ಇರುವವರ ಮುಂದೆ ಉದ್ದುದ್ದ ಭಾಷಣ ಅಂತ. ನೋ ಆ್ಯಕ್ಷನ್ ತಮಾಷಾ ಓನ್ಲಿ- ನಿಜವಾದ NATO ಇಲ್ಲಿಯೇ ಇದೆ. ಕೇವಲ ವಿದ್ಯಾರ್ಥಿಗಳ ಲೆಕ್ಕ ಸಿಗ್ತಿದೆ, ಉಳಿದವರ ಕಥೆ ಏನು? ಎಂದು ಪ್ರಶ್ನಿಸಿದರು.
ಮೋದಿ ಬಂದಾಗಿನಿಂದ ದೇಶದ ಘನತೆ ಕಮ್ಮಿಯಾಗಿದೆ
ಮೋದಿ ಬಂದಾಗಿನಿಂದ ದೇಶದ ಘನತೆ ಕಮ್ಮಿಯಾಗಿದೆ. ನೇಪಾಳವೂ ನಿಮ್ಮ ಮಾತು ಕೇಳಲ್ಲ ನೆನಪಿಡಿ, ಮುಂಚೆ ಅಕ್ಕ ಪಕ್ಕದ ದೇಶಗಳು ನಮ್ಮ ಜೊತೆಗೆ ನೋಡ್ತಿದ್ವು. ಈಗ ಆ ದೇಶಗಳೆಲ್ಲ ಚೈನಾ ಜೊತೆಗೆ ಹೋಗ್ತಿವೆ ಎಂದು ಪ್ರಿಯಾಂಕ್ ಖರ್ಗೆ ಕಿಡಿಕಾರಿದರು.
ಇಂಥ ಸಂಕಷ್ಟದ ಸಂದರ್ಭದಲ್ಲಿ ಪ್ರಧಾನಿಗಳು ಮೋಟಿವೇಟ್ ಮಾಡಬೇಕು. ಆದ್ರೆ ಪ್ರಧಾನಿಗಳ ಮಾತು ಶೋಭೆ ತರುತ್ತದಾ..? ಅವರ ಬಾಸ್ ಹೀಗೆ ಹೇಳಿದ ಮೇಲೆ ಸಚಿವ ಜೋಷಿ ಸುಮ್ಮನಿರುತ್ತಾರಾ..? ಮಿಸ್ಟರ್ ಜೋಷಿ ನೆನಪಿರಲಿ, ಪಿಯುಸಿನಲ್ಲಿ ನವೀನ್ ೯೪% ಮಾರ್ಕ್ಸ್ ತೆಗೆದುಕೊಂಡಿದ್ರು. ಜೋಷಿ ಪ್ರಕಾರ ಯಾರು ೮೫-೯೦% ತಗೋತಾರೆ ಅವರ ಜೀವನದ ಬೆಲೆ ಹೆಚ್ಚಾ? ಯಾರು ಕಮ್ಮಿ ಮಾರ್ಕ್ಸ್ ತಗೋತಾರೆ ಅವರ ಜೀವದ ಬೆಲೆ ಕಮ್ಮೀನಾ? ಎಂದು ಗುಡುಗಿದರು.
Key words: 10 students- India -Priyank Kharge