ಬೆಂಗಳೂರು, ಡಿಸೆಂಬರ್,1,2020(www.justkannada.in): ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಮುಂದಕ್ಕೆ ಹೋಗುತ್ತಿದ್ದು, ಈ ಮಧ್ಯೆ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೀಶ್ವರ್ ಅದೃಷ್ಠವೇ ಖುಲಾಯಿಸಿದೆ. ಹೌದು ಸಿ.ಪಿ ಯೋಗೇಶ್ವರ್ ಅವರನ್ನ ನೂರಕ್ಕೆ ನೂರರಷ್ಟು ಮಂತ್ರಿ ಮಾಡುತ್ತೇವೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಅವರೇ ಸ್ಪಷ್ಟನೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಇಂದು ಮಾತನಾಡಿದ ಸಿಎಂ ಬಿಎಸ್ ಯಡಿಯೂರಪ್ಪ, ಯೋಗೀಶ್ವರ್ ಅವರನ್ನು ಸಚಿವರನ್ನಾಗಿ ಮಾಡಲಾಗುತ್ತದೆ. ವಿಧಾನ ಪರಿಷತ್ ಸದಸ್ಯ ಸಿಪಿ ಯೋಗೀಶ್ವರ್ ನೂರಕ್ಕೆ ನೂರರಷ್ಟು ಮಂತ್ರಿ ಆಗ್ತಾರೆ. ಯೋಗೀಶ್ವರ್ ಅವರನ್ನು ಸಚಿವರನ್ನಾಗಿ ಮಾಡುತ್ತೇವೆ ಎಂಬುದಾಗಿ ಹೇಳಿದ್ದಾರೆ.
ಈ ಮೂಲಕ ಬಿಎಸ್ ವೈ ಸಂಪುಟಕ್ಕೆ ಸೈನಿಕನ ಎಂಟ್ರಿ ಸದ್ಯದಲ್ಲೇ ಆಗಲಿದೆ ಎಂಬ ಸುಳಿವು ಬಿಟ್ಟುಕೊಟ್ಟಿದ್ದಾರೆ. ಇನ್ನು ಶಾಸಕ ಎಂ.ಪಿ ರೇಣುಕಾಚಾರ್ಯ ಸೇರಿ ಹಲವರು ಸೋತವರಿಗೆ ಮಂತ್ರಿ ಸ್ಥಾನ ನೀಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದು ಇವರ ಒತ್ತಡಕ್ಕೆ ಸಿಎಂ ಬಿಎಸ್ ವೈ ಮಣಿದಿಲ್ಲವೇ ಎಂಬ ಪ್ರಶ್ನೆ ಎದ್ದಿದೆ.
English summary…
CM BSY hints of making C P Yogeeshwara a Minister
Bengaluru, Dec. 1, 2020 (www.justkannada.in): Chief Minister B.S. Yedyurappa has hinted that MLC C.P. Yogeshwar would be made a minister.
Speaking at the Vidhana Soudha today, the CM stated that there is no doubt in making C.P. Yogeshwar a Minister. It appears that the Yedyurappa has not yielded to the pressure of objections raised against making MLA M.P. Renukacharya and others as ministers.
Keywords: C.P. Yogeshwar/ Minister/ MLC/ CM BSY
Key words: 100% -CP Yogeshwar -sure – minister-CM BS yeddyurappa